Friday, May 17, 2024
spot_img
More

    Latest Posts

    ಪ್ರಧಾನಿ ಮೋದಿಗೆ ಮಾತೃವಿಯೋಗ; ಶತಾಯುಷಿ ಹೀರಾಬೆನ್ ನಿಧನ

    ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಅವರು ಇಂದು ಮುಂಜಾನೆ ನಿಧನರಾದರು. ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದರು. ಅವರಿಗೆ 102 ವರ್ಷ ವಯಸ್ಸಾಗಿತ್ತು.‌

    ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಡಿ.28ರ ಮಧ್ಯಾಹ್ನ ಅಹಮದಾಬಾದ್‌ನ ಯು.ಎನ್. ಮೆಹ್ತ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಚಿಕಿತ್ಸೆ ನೀಡಿದ್ದ ವೈದ್ಯರು ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಅಂದಿದ್ದರು. ಬಳಿಕ ಅವರ ಆರೋಗ್ಯ ಮತ್ತೆ ಹದಗೆಟ್ಟಿದ್ದು, ಇಂದು ಅವರು ಕೊನೆಯುಸಿರೆಳೆದರು.

    ತಾಯಿ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಸುದ್ದಿ ಕೇಳಿದ ತಕ್ಷಣ ಮೋದಿ ಅಲ್ಲಿಗೆ ಧಾವಿಸಿ ಯೋಗಕ್ಷೇಮ ವಿಚಾರಿಸಿ, ಎಲ್ಲ ಅಗತ್ಯ ಕ್ರಮ ಕೈಗೊಂಡಿದ್ದರು. ಹೀರಾಬೆನ್ ಮೋದಿ ಅವರ ಅಗಲಿಕೆಗೆ ವಿವಿಧ ಕ್ಷೇತ್ರಗಳ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

    ನಿನ್ನೆಯೇ ತೆರಳಿದ್ದ ಪ್ರಹ್ಲಾದ್: ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ ಮತ್ತು‌ ಕುಟುಂಬಸ್ಥರು ಮೈಸೂರು ಬಳಿ‌ ಮೊನ್ನೆ ಕಾರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದರು. ಅವರನ್ನು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಎರಡು ದಿನ ಅಲ್ಲೇ ಚಿಕಿತ್ಸೆ ಪಡೆದ ಅವರು, ತಾಯಿಯ ಅನಾರೋಗ್ಯ ಹಿನ್ನೆಲೆಯಲ್ಲಿ ನಿನ್ನೆ ಸಂಜೆಯೇ ವಿಶೇಷ ವಿಮಾನದಲ್ಲಿ ಗುಜರಾತ್‌ಗೆ ಹೊರಟಿದ್ದರು.

    ಅಂತಿಮ ಸಂಸ್ಕಾರ: ಹೀರಾಬೆನ್ ಅವರ ಅಂತಿಮ ಸಂಸ್ಕಾರವು ಗಾಂಧಿನಗರದ ಶವಾಗಾರದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ನೆರವೇರಿತು. ಪ್ರಧಾನಿ ಮೋದಿ ಹಾಗೂ ಸಹೋದರರು ಜೊತೆಯಾಗಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

    ಹೀರಾಬೆನ್ ಅವರ ಆತ್ಮಕ್ಕೆ ಸದ್ಗತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿ ಸಿಗಲಿ ಎಂದು ಗ್ಲೋಬಲ್ ಗಾಣಿಗ.ಕಾಮ್ ಪ್ರಾರ್ಥಿಸುತ್ತಿದೆ.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಕರ್ನಾಟಕದಲ್ಲೂ ನಮ್ಮ ಪರಿವಾರ ಇದೆ ಎಂಬ ಭಾವನೆ ಮೂಡಿದೆ: ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ

    ಸಂಬಂಧಿತ ಸುದ್ದಿ: ಶತಾಯುಷ್ಯದ ಹೊಸ್ತಿಲಲ್ಲಿ ತಾಯಿ; ನೂರನೇ ಜನ್ಮದಿನದ ಶುಭಾಶಯ‌ ಕೋರಿದ ಪುತ್ರ ಮೋದಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!