Friday, May 17, 2024
spot_img
More

    Latest Posts

    ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಆದರ್ಶ್‌ಗೆ ಚಿನ್ನದ ಪದಕ, ಹ್ಯಾಟ್ರಿಕ್‌ ಸಾಧನೆ

    ಬೆಂಗಳೂರು: ಕರ್ನಾಟಕ ರಾಜ್ಯ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಆದರ್ಶ್‌ ಬಿ. ಅತ್ತಾವರ್‌ ಚಿನ್ನದ ಪದಕವನ್ನು ಗಳಿಸಿದ್ದಾರೆ. ಮಾತ್ರವಲ್ಲ, ಸತತ ಮೂರನೇ ವರ್ಷವೂ ಸಾಧನೆಯನ್ನು ಮಾಡುವ ಮೂಲಕ ಇವರು ಹ್ಯಾಟ್ರಿಕ್‌ ಕೂಡ ಮಾಡಿದ್ದಾರೆ.

    ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಮಾ.3ರಿಂದ 5ರ ವರೆಗೆ ಆಯೋಜನೆಗೊಂಡಿರುವ ಕರ್ನಾಟಕ ಸ್ಟೇಟ್‌ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ 59 ಕೆ.ಜಿ. ವಿಭಾಗದಲ್ಲಿ ಆದರ್ಶ್‌ ಈ ಸಾಧನೆ ಮಾಡಿದ್ದಾರೆ. ಮಾತ್ರವಲ್ಲ ಈ ಮೂಲಕ ಸತತ ಮೂರನೇ ವರ್ಷ “ಸ್ಟ್ರಾಂಗ್‌ ಮ್ಯಾನ್‌ ಜೂನಿಯರ್‌“ ಎಂದೆನಿಸಿಕೊಂಡಿದ್ದಾರೆ.‌

    ಸಂಬಂಧಿತ ಸುದ್ದಿ: ಏಷ್ಯನ್‌ ಕ್ಲಾಸಿಕ್‌ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಆದರ್ಶ್‌ ಅತ್ತಾವರ್‌ಗೆ ಚಿನ್ನದ ಪದಕ

    ಆದರ್ಶ್ ಬಿ. ಅತ್ತಾವರ್ ಕಿರು ಪರಿಚಯ

    ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಚಂದ್ರಾಕ್ಷಿ-ಭರತ್ ಕುಮಾರ್ ಅತ್ತಾವರ್ ದಂಪತಿಯ ಪುತ್ರರಾಗಿರುವ ಇವರು 2000ನೇ ಮೇ 4ರಂದು ಜನಿಸಿದರು. ಏಕಲವ್ಯ ಪ್ರಶಸ್ತಿ ಪುರಸ್ಕೃತ ಸತೀಶ್ ಕುಮಾರ್ ಕುದ್ರೋಳಿ ಅವರಿಂದ ತರಬೇತಿ ಪಡೆದು ಪವರ್‌ಲಿಫ್ಟರ್‌ ಚಾಂಪಿಯನ್‌ ಆಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.

    ಸಂಬಂಧಿತ ಸುದ್ದಿ: ಆದರ್ಶ್‌ ಅತ್ತಾವರ್‌ ಈಗ ಜೂನಿಯರ್‌ ವರ್ಲ್ಡ್‌ ಚಾಂಪಿಯನ್‌            

    ವಿಶ್ವ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ 2022ರಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರುವ ಇವರು ಎರಡು ಬಾರಿ ʼಕರ್ನಾಟಕದ ಅತ್ಯುತ್ತಮ ಲಿಫ್ಟರ್‌ʼ ಪ್ರಶಸ್ತಿ ಪಡೆದಿರುವುದಲ್ಲದೆ ಪ್ರಸ್ತುತ ತಮ್ಮ ಹೆಸರಿನಲ್ಲಿ ರಾಜ್ಯ ದಾಖಲೆ ಹೊಂದಿರುತ್ತಾರೆ. ಏಷ್ಯನ್ ಜೂನಿಯರ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 5 ಚಿನ್ನ, 3 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಗಳಿಸಿರುವ ಇವರು, ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ʼವಿಶ್ವ ಜೂನಿಯರ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ 2022’ರಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ವಿಜೇತರಾಗಿದ್ದಾರೆ.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಪವರ್‌ಲಿಫ್ಟರ್‌ ಆಗಬೇಕೆನ್ನುವವರಿಗೆ ಇಲ್ಲಿದೆ ಭಾರತದ ಬಲಿಷ್ಠ ಪುರುಷನಿಂದಲೇ ತರಬೇತಿ!

    ಸಂಬಂಧಿತ ಸುದ್ದಿ: ಗಾಣಿಗ ನಿಗಮ ಸ್ಥಾಪನೆ: ಸಮುದಾಯದ ಸಂಘ-ಸಂಸ್ಥೆಗಳಿಂದ ಸಂಭ್ರಮಾಚರಣೆ, ಸಿಎಂಗೆ ಅಭಿನಂದನೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!