Saturday, September 21, 2024
spot_img
More

    Latest Posts

    ಉಚಿತ ಟೈಲರಿಂಗ್‌ ಹಾಗೂ ಬೇಸಿಕ್‌ ಬ್ಯೂಟಿಷಿಯನ್‌ ಕೋರ್ಸ್‌ ಉದ್ಘಾಟನೆ

    ಬೆಂಗಳೂರು: ಎಸ್‌ಜಿಇಸಿಟಿ ಅಕಾಡೆಮಿ ಹಮ್ಮಿಕೊಂಡಿರುವ ಉಚಿತ ಟೈಲರಿಂಗ್‌ ಹಾಗೂ ಬೇಸಿಕ್‌ ಬ್ಯೂಟಿಷಿಯನ್‌ ಕೋರ್ಸ್‌ಗೆ ಜೂ. 5ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ಎಸ್‌ಜಿಇಸಿಟಿ ಅಕಾಡೆಮಿಯಲ್ಲಿ ಎಸ್‌ಜಿಇಸಿಟಿ ಮ್ಯಾನೇಜಿಂಗ್‌ ಟ್ರಸ್ಟೀ ಆರ್. ನಾಗರಾಜ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಿತು.

    ಎಸ್‌ಜಿಇಸಿಟಿ ಕಾರ್ಯಾಧ್ಯಕ್ಷೆ ನೇತ್ರಾ ರಾಮಚಂದ್ರನ್‌ ಅವರು ಈ ಉಚಿತ ಕೋರ್ಸ್‌ ಉದ್ಘಾಟಿಸಿದ್ದು, ಟೈಲರಿಂಗ್‌ ಹಾಗೂ ಬ್ಯೂಟಿಷಿಯನ್‌ ಕೌಶಲದ ಮೂಲಕ ಸ್ವ-ಉದ್ಯೋಗಕ್ಕೆ ದಾರಿ ಮಾಡಿಕೊಟ್ಟು ಮಹಿಳೆಯರನ್ನು ಸಬಲೀಕರಣಗೊಳಿಸುವ ಈ ಪ್ರಯತ್ನವನ್ನು ಸದ್ಬಳಕೆ ಮಾಡಿಕೊಂಡು ಯಶಸ್ಸು ಗಳಿಸಬೇಕು ಎಂದು ಹಾರೈಸಿದರು. ಎಸ್‌ಜಿಇಸಿಟಿ ಅಕಾಡೆಮಿಯ ಉಚಿತ ತರಬೇತಿ ಅವಕಾಶದ ಮೂಲಕ ಜೀವನೋಪಾಯಕ್ಕೆ ಅನುಕೂಲವಾಗುವ ಕುರಿತು ಶುಭಾ ರಾಜಶೇಖರ್‌ ಮಾತನಾಡಿದರು.

    ಎಸ್‌ಜಿಇಸಿಟಿ ನಿರ್ದೇಶಕ ಬಿ.ಕೆ.ಬಸವರಾಜ್‌ ಮಾತನಾಡಿ, ಟೈಲರಿಂಗ್‌ ಹಾಗೂ ಬ್ಯೂಟಿಷಿಯ್‌ ಕೋರ್ಸ್‌ ಬಳಿಕ ಲಭ್ಯವಿರುವ ಅವಕಾಶಗಳ ಬಗ್ಗೆ ತಿಳಿಸಿದರು. ಟ್ರಸ್ಟ್‌ ಪೋಷಕರಾದ ಬಿ.ಸುಧಾಕರ್‌ ಮುಖ್ಯ ಅತಿಥಿಯಾಗಿ ಆಗಮಿಸಿದ್ದು, ತರಬೇತಿ ಬಳಿಕದ ಉದ್ಯಮಶೀಲತೆ ಕುರಿತು ಅಭ್ಯರ್ಥಿಗಳಿಗೆ ವಿವರಿಸಿದರು.

    ಎಸ್‌ಜಿಇಸಿಟಿ ಅಕಾಡೆಮಿ ಕಾರ್ಯಾಧ್ಯಕ್ಷ ಕೆ.ಎಂ. ನಾರಾಯಣಪ್ಪ, ಕಾರ್ಯದರ್ಶಿ ಸೋಮಶೇಖರ್‌, ಜಂಟಿ ಕಾರ್ಯದರ್ಶಿ ಪದ್ಮಿನಿ ಪ್ರಸಾದ್‌, ತರಬೇತುದಾರರು ಮತ್ತು ತರಬೇತಿ ಪಡೆಯಲಿಚ್ಛಿಸಿರುವ ಅಭ್ಯರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಮಾನಸ ಇಂಟರ್‌ನ್ಯಾಷನಲ್‌ ಐಸಿಎಸ್‌ಇ ಸ್ಕೂಲ್‌ ನೂತನ ಕಟ್ಟಡ ಉದ್ಘಾಟನೆ

    ಸಂಬಂಧಿತ ಸುದ್ದಿ: ಉಡುಪಿ ಪರ್ಯಾಯೋತ್ಸವಕ್ಕೆ ಗಾಣಿಗ ಸಮಾಜದಿಂದ ಅಕ್ಕಿಮುಡಿ ಸಮರ್ಪಣೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!