Friday, May 17, 2024
spot_img
More

    Latest Posts

    ಎಸ್‌ಜಿಇಸಿಟಿ, ತ್ರಿಶೂಲ ಟ್ರಸ್ಟ್‌ನಿಂದ ಫೆಮಿನೈನ್‌ ಹೈಜೀನ್‌ ಕಾರ್ಯಕ್ರಮ

    ಬೆಂಗಳೂರು: ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಶ್ರೀ ಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟಬಲ್‌ ಟ್ರಸ್ಟ್‌ ಹಾಗೂ ತ್ರಿಶೂಲ ಟ್ರಸ್ಟ್‌ ಜೊತೆಯಾಗಿ ಫೆಮಿನೈನ್‌ ಹೈಜೀನ್‌ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮಹಿಳೆಯರು ಹಾಗೂ ಯುವತಿಯರು ಸೇರಿ ಸುಮಾರು 70 ಮಂದಿ ಇದರಲ್ಲಿ ಪಾಲ್ಗೊಂಡರು.

    ಮಹಾಲಕ್ಷ್ಮೀ ಬಡಾವಣೆಯಲ್ಲಿನ ಎಸ್‌ಜಿಇಸಿಟಿ ಅಕಾಡೆಮಿಯಲ್ಲಿ ಜೂನ್‌ 10ರ ಶನಿವಾರ ಮಧ್ಯಾಹ್ನ ನಡೆದ ಈ ಕಾರ್ಯಕ್ರಮವನ್ನು ತ್ರಿಶೂಲ ಟ್ರಸ್ಟ್‌ ಅಧ್ಯಕ್ಷ ಬಿ.ಸಿ.ರಾಜಶೇಖರ್‌ ಉದ್ಘಾಟಿಸಿದ್ದು, ಎಸ್‌ಜಿಇಸಿಟಿ ಮ್ಯಾನೇಜಿಂಗ್‌ ಟ್ರಸ್ಟೀ ಆರ್.ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಿಬಿಎಂಪಿ ದಾಸಪ್ಪ ಹೆರಿಗೆ ಆಸ್ಪತ್ರೆಯ ಸೀನಿಯರ್‌ ಸ್ಪೆಷಲಿಸ್ಟ್‌ ಹಾಗೂ ಗೈನಕಲಾಜಿಸ್ಟ್‌ ಡಾ. ಡಿ. ಸುನೀತಾ ಅವರು ಫೆಮಿನೈನ್‌ ಹೈಜೀನ್‌ ಕುರಿತು ಅರಿವು ಮೂಡಿಸಿದರು.

    ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸಹಾಯಕ ನಿರ್ದೇಶಕ ಕೆಂಪರಾಜು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅಲ್ಲದೆ ಮಹಿಳಾ ಸಬಲೀಕರಣ ಕುರಿತು ಮಾತನಾಡಿದ ಇವರು, ಬೇಸಿಕ್‌ ಬ್ಯೂಟಿಷಿಯನ್‌ ಕೋರ್ಸ್‌ ಪೂರ್ಣಗೊಳಿಸಿದ ಎಸ್‌ಜಿಇಸಿಟಿ ಅಕಾಡೆಮಿಯ 56 ಟ್ರೇನಿಗಳಿಗೆ ಸರ್ಕಾರಿ ಮಾನ್ಯತೆ ಪಡೆದ ಪ್ರಮಾಣಪತ್ರವನ್ನು ವಿತರಿಸಿದರು.

    ಫೆಮಿನೈನ್‌ ಹೈಜೀನ್‌ ಕಾರ್ಯಕ್ರಮದ ಅಂಗವಾಗಿ ತ್ರಿಶೂಲ ಟ್ರಸ್ಟ್‌ ಕಾರ್ಯದರ್ಶಿ ಶುಭದಾ ರಾಜಶೇಖರ್‌ ಅವರು ಮೆನ್‌ಸ್ಟ್ರುವಲ್‌ ಕಪ್‌ಗಳನ್ನು ವಿತರಿಸಿದರು. ಎಸ್‌ಜಿಇಸಿಟಿಯ ಕಾರ್ಯ ಚಟುವಟಿಕೆ ಮತ್ತು ಕೋರ್ಸ್‌ಗಳ ಕುರಿತು ಎಸ್‌ಜಿಇಸಿಟಿ ಕಾರ್ಯದರ್ಶಿ ಸೋಮಶೇಖರ್‌ ಮಾಹಿತಿ ನೀಡಿದರು. ಜಂಟಿ ಕಾರ್ಯದರ್ಶಿ ಸಿ.ಎಸ್.ಪದ್ಮಿನಿ ಪ್ರಸಾದ್‌ ಧನ್ಯವಾದಗಳನ್ನು ಅರ್ಪಿಸಿದರು.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಎಸ್‌ಜಿಇಸಿಟಿ ಕಾರ್ಯಾಗಾರದಲ್ಲಿ ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳು ಭಾಗಿ

    ಸಂಬಂಧಿತ ಸುದ್ದಿ: ಅಮೃತ ಮಹೋತ್ಸವ ಸಂಭ್ರಮದಲ್ಲಿ ಉತ್ತರಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!