Friday, May 17, 2024
spot_img
More

    Latest Posts

    ರಾಜ್ಯಮಟ್ಟದ ಸೀನಿಯರ್​ ಪವರ್​ಲಿಫ್ಟಿಂಗ್ ಚಾಂಪಿಯನ್‌ಷಿಪ್: ಬಾಲಾರ್ಕದ ವಿಶ್ವನಾಥ್​ಗೆ ಚಿನ್ನದ ಪದಕ

    ಹುಬ್ಬಳ್ಳಿ: ರಾಜ್ಯಮಟ್ಟದ ಸೀನಿಯರ್​ ಪವರ್​ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಂಗಳೂರಿನ ಬಾಲಾರ್ಕ ಫಿಟ್‌ನೆಸ್‌ನ ವಿಶ್ವನಾಥ್ ಭಾಸ್ಕರ್ ಗಾಣಿಗ 93 ಕೆ.ಜಿ. ವಿಭಾಗದಲ್ಲಿ ಒಟ್ಟು 835 ಕೆ.ಜಿ. ಭಾರ ಎತ್ತುವ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ.

    ಹುಬ್ಬಳ್ಳಿ ಜಿಲ್ಲಾ ಪವರ್​ಲಿಫ್ಟಿಂಗ್ ಅಸೋಸಿಯೇಷನ್ ಆಯೋಜಿಸಿದ್ದ ಪುರುಷರ 48ನೇ ಹಾಗೂ ಮಹಿಳೆಯರ 40ನೇ ಕರ್ನಾಟಕ ಸೀನಿಯರ್ ಪವರ್​​ಲಿಫ್ಟಿಂಗ್ ಚಾಂಪಿಯನ್‌ಷಿಪ್‌ ಜೂ. 17 ಮತ್ತು 18ರಂದು ಹುಬ್ಬಳ್ಳಿಯ ರೈಲ್ವೇ ಸತಬಿದ್ದನ್ ಸಭಾಂಗಣದಲ್ಲಿ ನಡೆಯಿತು. ರಾಜ್ಯದ ಎಲ್ಲಾ ಜಿಲ್ಲೆಗಳ ಪವರ್​​ಲಿಫ್ಟರ್ಸ್​ ಇದರಲ್ಲಿ ಭಾಗಿಯಾಗಿದ್ದರು.

    ಇದರಲ್ಲಿ ಬೆಂಗಳೂರಿನ ಬಾಲಾರ್ಕ​ ಫಿಟ್​​ನೆಸ್​ ಮಾಲೀಕ, ವೃತ್ತಿಪರ ತರಬೇತುದಾರರೂ ಆಗಿರುವ ವಿಶ್ವನಾಥ್ ಭಾಸ್ಕರ್ ಗಾಣಿಗ ಸ್ಕ್ವಾಟ್​ 310 ಕೆ.ಜಿ, ಬೆಂಚ್​ಪ್ರೆಸ್​ 200 ಕೆ.ಜಿ. ಹಾಗೂ ಡೆಡ್​ಲಿಫ್ಟ್​ 325 ಕೆ.ಜಿ. ಸೇರಿ ಒಟ್ಟು 835 ಕೆ.ಜಿ. ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಪಾತ್ರರಾಗಿದ್ದಾರೆ.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಬೆಂಗಳೂರು ಜಿಲ್ಲಾ ಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್:‌ ಬಾಲಾರ್ಕಕ್ಕೆ 40ಕ್ಕೂ ಅಧಿಕ ಪದಕಗಳು‌

    ಸಂಬಂಧಿತ ಸುದ್ದಿ: ಉಡುಪಿ ಪರ್ಯಾಯೋತ್ಸವಕ್ಕೆ ಗಾಣಿಗ ಸಮಾಜದಿಂದ ಅಕ್ಕಿಮುಡಿ ಸಮರ್ಪಣೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!