Saturday, September 21, 2024
spot_img
More

    Latest Posts

    ಅದ್ಧೂರಿಯಾಗಿ ನಡೆಯಿತು ಚೈತ್ರ ಸಂದೇಶ್‌ ಎಜುಕೇಷನಲ್ ಟ್ರಸ್ಟ್‌, ಚೈತ್ರ ಕೋಚಿಂಗ್‌ನ ನಾಲ್ಕನೇ ವಾರ್ಷಿಕೋತ್ಸವ

    ಬೆಂಗಳೂರು: ಚೈತ್ರ ಸಂದೇಶ್‌ ಎಜುಕೇಷನಲ್ ಟ್ರಸ್ಟ್‌ ಮತ್ತು ಚೈತ್ರ ಕೋಚಿಂಗ್‌ನ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಜುಲೈ 2ರ ರವಿವಾರ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಮಾಗಡಿ ಮುಖ್ಯರಸ್ತೆಯಲ್ಲಿರುವ ವಿಶ್ವಭಾರತಿ ಕ್ಯಾಂಪಸ್‌ನ ರಾಮನ್‌ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ನಡೆಯಿತು.

    ಮಾಜಿ ಉಪ ಮಹಾಪೌರರಾದ ಹೇಮಲತಾ ಗೋಪಾಲಯ್ಯ ಈ ಸಮಾರಂಭವನ್ನು ಉದ್ಘಾಟಿಸಿದ್ದು, ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಿದರು.

    ಸಿವೈಡಿ ಫೌಂಡೇಷನ್‌ ಸ್ಥಾಪಕ ರೋಹಿತ್ ಸರಸ್ವತಿ ಮಕ್ಕಳನ್ನು ಉದ್ದೇಶಿಸಿ ಪ್ರೇರಣೆಯ ಮಾತುಗಳನ್ನಾಡಿದರು. ಉಜ್ವಲ ಅಕಾಡೆಮಿ ಸಂಸ್ಥಾಪಕ ಕೆ.ಯು.ಮಂಜುನಾಥ್ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿದರು.

    ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ ರಾಜಶೇಖರ್‌, ಮೈಸೂರು ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಎನ್‌.ಸಿ.ಉಮೇಶ್, ಶಿವಮೊಗ್ಗ ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ನಾಗರಾಜ್, ನಿವೃತ್ತ ಯೋಧ ಚಿಕ್ಕಣ್ಣ ಶೆಟ್ಟಿ, ಬಿಎಂಎಸ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ನ ಉಪ ಪ್ರಾಂಶುಪಾಲ ಭೀಮ್‌ಷಾ ಆರ್ಯ, ಸಿವಿಲ್‌ ವಿಭಾಗದ ಪ್ರೊಫೆಸರ್‌ ಡಾ.ಟಿ.ರಾಜಣ್ಣ, ಸ್ಟಾರ್‌ ಕಿಡ್ಸ್‌ ಸಂಸ್ಥಾಪಕಿ ನಂದಿನಿ, ಕಾಮಾಕ್ಷಿಪಾಳ್ಯದ ಸೋಮಶೇಖರ್‌, ಶಕುಂತಲಮ್ಮ ಮುಂತಾದ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಚೈತ್ರ ಸಂದೇಶ ಎಜುಕೇಷನಲ್ ಟ್ರಸ್ಟ್‌ ಅಧ್ಯಕ್ಷೆ ಎಸ್.ಚೈತ್ರ‌, ಸಂಸ್ಥಾಪಕ-ಕಾರ್ಯದರ್ಶಿ ಸಂದೇಶ್‌ ಉಪಸ್ಥಿತರಿದ್ದರು.

    ಬೆಳಗ್ಗೆ 10 ಗಂಟೆಗೆ ಸಂತವಾಣಿ ಸುಧಾಕರ್ ಅವರ ಸುಗಮ ಸಂಗೀತದೊಂದಿಗೆ ಬೆಳಗ್ಗೆ 10ಕ್ಕೆ ಈ ಕಾರ್ಯಕ್ರಮ ಆರಂಭಗೊಂಡಿದ್ದು, ಇದರಲ್ಲಿ ಸಂಸ್ಥೆಯ ಮಕ್ಕಳು ಸಹ ಹಾಡಿದರು. ನಂತರ ಕುಮಾರಿ ನಂದಿನಿ ಅವರಿಂದ ಅಮೋಘ ಭರತನಾಟ್ಯ ಪ್ರದರ್ಶನ ನಡೆಯಿತು.

    ಚೈತ್ರ ಸಂದೇಶ್ ಎಜುಕೇಷನಲ್ ಟ್ರಸ್ಟ್ ಸಂಸ್ಥಾಪಕ ಹಾಗೂ ಕಾರ್ಯದರ್ಶಿ ಸಂದೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೈಸೂರು ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ಎನ್.ಸಿ. ಉಮೇಶ್ ವಂದನಾರ್ಪಣೆ ಸಲ್ಲಿಸಿದರು.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಯಾರಾಗುತ್ತಾರೆ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಚೊಚ್ಚಲ ಅಧ್ಯಕ್ಷ?

    ಸಂಬಂಧಿತ ಸುದ್ದಿ: ರಾಜ್ಯಮಟ್ಟದ ಸೀನಿಯರ್​ ಪವರ್​ಲಿಫ್ಟಿಂಗ್ ಚಾಂಪಿಯನ್‌ಷಿಪ್: ಬಾಲಾರ್ಕದ ವಿಶ್ವನಾಥ್​ಗೆ ಚಿನ್ನದ ಪದಕ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!