Saturday, September 21, 2024
spot_img
More

    Latest Posts

    ಎಸ್‌ಜಿಇಸಿಟಿಯಿಂದ ಉಚಿತ ಕಂಪ್ಯೂಟರ್‌ ತರಬೇತಿ, ರಿಯಾಯಿತಿ ಶುಲ್ಕದಲ್ಲಿ ವಿವಿಧ ಕೋರ್ಸ್‌

    ಬೆಂಗಳೂರು: ಶ್ರೀಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟೇಬಲ್‌ ಟ್ರಸ್ಟ್‌ ಆ. 3ರಿಂದ ಪ್ರತಿ ತಿಂಗಳೂ ಉಚಿತ ಕಂಪ್ಯೂಟರ್‌ ತರಬೇತಿ ನಡೆಸಲಿದ್ದು, ಅದಕ್ಕಾಗಿ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

    ಜೊತೆಗೆ ಜಾವಾ, ಪೈತಾನ್‌, ಮ್ಯಾನುವಲ್‌ ಮತ್ತು ಆಟೋಮೇಷನ್‌ ಟೆಸ್ಟಿಂಗ್‌, ವೆಬ್‌ ಡಿಸೈನಿಂಗ್‌, ಗ್ರಾಫಿಕ್‌ ಡಿಸೈನಿಂಗ್‌, ಡಿಟಿಪಿ, ಡಿಜಿಟಲ್‌ ಮಾರ್ಕೆಟಿಂಗ್‌, ಇಂಗ್ಲಿಷ್‌ ಮತ್ತು ಕನ್ನಡ ಟೈಪಿಂಗ್‌ ತರಬೇತಿಯನ್ನು ರಿಯಾಯಿತಿ ಶುಲ್ಕದಲ್ಲಿ ನೀಡಲಿದೆ.

    ಅಲ್ಲದೆ ಅಕಾಡೆಮಿಯು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಪ್ರೊಫೆಷನಲ್‌ ಟ್ರೇನಿಂಗ್‌ ಅಸೋಸಿಯೇಟ್‌ ಆಗಿರುವುದರಿಂದ ಬ್ಯೂಟಿಷಿಯನ್‌, ಟೇಲರಿಂಗ್‌, ಅಡ್ವಾನ್ಸ್ಡ್‌ ಮೇಕಪ್‌ ಕೋರ್ಸ್‌ಗಳನ್ನು ಕೆವಿಐಸಿ ನಿಗದಿಪಡಿಸಿದ ಶುಲ್ಕದಲ್ಲಿ ನೀಡಲಿದೆ.

    ಆಸಕ್ತ ಅಭ್ಯರ್ಥಿಗಳು ಆಗಸ್ಟ್‌ 1ರ ಒಳಗೆ ಬೆಳಗ್ಗೆ10ರಿಂದ ಸಂಜೆ 6ರ ಅವಧಿಯಲ್ಲಿ ತರಬೇತಿ ಸಂಸ್ಥೆಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು.

    ಸಂಸ್ಥೆ ವಿಳಾಸ: ಎಸ್‌ಜಿಇಸಿಟಿ ಅಕಾಡೆಮಿ, ನಂ. 14/5, ಗಣೇಶ ಬ್ಲಾಕ್‌, ನಂದಿನಿ ಬಡಾವಣೆ ಮುಖ್ಯರಸ್ತೆ, ಮಹಾಲಕ್ಷ್ಮಿ ಬಡಾವಣೆ, ಬೆಂಗಳೂರು-560096.

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7019356168, 9483141411, 7219695969

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಯಾರಾಗುತ್ತಾರೆ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಚೊಚ್ಚಲ ಅಧ್ಯಕ್ಷ?

    ಸಂಬಂಧಿತ ಸುದ್ದಿ: ರಾಜ್ಯಮಟ್ಟದ ಸೀನಿಯರ್​ ಪವರ್​ಲಿಫ್ಟಿಂಗ್ ಚಾಂಪಿಯನ್‌ಷಿಪ್: ಬಾಲಾರ್ಕದ ವಿಶ್ವನಾಥ್​ಗೆ ಚಿನ್ನದ ಪದಕ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!