Friday, June 14, 2024
spot_img
More

    Latest Posts

    ಎಸ್‌ಜಿಇಸಿಟಿ ಅಕಾಡೆಮಿಯಿಂದ ಮತ್ತೊಂದು ಕಾರ್ಯಾಗಾರ; ಇಲ್ಲಿದೆ ವಿವರ..

    ಬೆಂಗಳೂರು: ಎಸ್‌ಜಿಇಸಿಟಿ ಅಕಾಡೆಮಿಯು ಇದೇ ಆಗಸ್ಟ್ 07ರಿಂದ 12 ರವರೆಗೆ ಒಂದು ವಾರ ಸೀರೆ ಕಟ್ಟುವ (Saree Draping) ಕಾರ್ಯಾಗಾರ ಆಯೋಜಿಸುತ್ತಿದೆ. ಈ ಅವಧಿಯಲ್ಲಿ ಪ್ರತಿದಿನ ಮಧ್ಯಾಹ್ನ 3.00ರಿಂದ ಸಂಜೆ 5.30ರವರೆಗೆ ಈ ಕಾರ್ಯಾಗಾರ ನಡೆಯಲಿದೆ.

    ಸುಧಾರಿತ ಮೇಕಪ್‌ನಲ್ಲಿ ನುರಿತ ಉತ್ತಮ ಅನುಭವಿ ವೃತ್ತಿಪರರಿಂದ ಕಾರ್ಯಾಗಾರ ಆಯೋಜಿಸಿದ್ದು, ಆಸಕ್ತರು ತಮ್ಮ ಹೆಸರನ್ನು ಅಕಾಡೆಮಿ ಕಚೇರಿಯಲ್ಲಿ ನೇರವಾಗಿ ಇಲ್ಲವೇ ವಾಟ್ಸ್ಯಾಪ್‌ ಮೂಲಕ ನೋಂದಾಯಿಸಿಕೊಳ್ಳಬಹುದು.

    ಕಾರ್ಯಾಗಾರದ ಶುಲ್ಕ 700 ರೂ. ಆಗಿದ್ದು, ಇದನ್ನು ಕಚೇರಿಯಲ್ಲಿ ನಗದು ರೂಪದಲ್ಲಿ ಇಲ್ಲವೇ ಗೂಗಲ್‌ ಪೇ, ಫೋನ್‌ ಪೇ ಇತ್ಯಾದಿ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಿ ಹೆಸರು ನೋಂದಣಿ ಮಾಡಿಕೊಳ್ಳಬಹುದು.

    ಕಾರ್ಯಾಗಾರ ಎಸ್‌ಜಿಇಸಿಟಿ ಅಕಾಡೆಮಿಯ ಕಚೇರಿಯಲ್ಲಿ ನಡೆಯಲಿದ್ದು, ಅದರ ವಿಳಾಸ ಈ ಕೆಳಗಿನಂತಿದೆ.

    ವಿಳಾಸ: ಎಸ್‌ಜಿಇಸಿಟಿ ಅಕಾಡೆಮಿ, #14/5, ಗಣೇಶ ಬ್ಲಾಕ್, ನಂದಿನಿ ಬಡಾವಣೆ ಮುಖ್ಯ ರಸ್ತೆ, ಶ್ರೀ ಅಯ್ಯಪ್ಪ ದೇವಸ್ಥಾನದ ಹಿಂದೆ, ಮಹಾಲಕ್ಷ್ಮಿ ಬಡಾವಣೆ, ಬೆಂಗಳೂರು -96.

    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಸಂಖ್ಯೆಗಳು: 9483141411, 9538375143, 7899515763 , 7019356168.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಎಸ್‌ಜಿಇಸಿಟಿಯಿಂದ ಉಚಿತ ಕಂಪ್ಯೂಟರ್‌ ತರಬೇತಿ, ರಿಯಾಯಿತಿ ಶುಲ್ಕದಲ್ಲಿ ವಿವಿಧ ಕೋರ್ಸ್‌

    ಸಂಬಂಧಿತ ಸುದ್ದಿ: ಪವರ್‌ಲಿಫ್ಟರ್‌ ಆಗಬೇಕೆನ್ನುವವರಿಗೆ ಇಲ್ಲಿದೆ ಭಾರತದ ಬಲಿಷ್ಠ ಪುರುಷನಿಂದಲೇ ತರಬೇತಿ!

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!