Saturday, September 21, 2024
spot_img
More

    Latest Posts

    ಮಧ್ಯಪ್ರದೇಶದಲ್ಲೂ ಗಾಣಿಗ ನಿಗಮ ಸ್ಥಾಪನೆ; ಅಧ್ಯಕ್ಷರಾಗಿ ರವಿಕರಣ್‌ ಸಾಹು ನೇಮಕ

    ಬೆಂಗಳೂರು: ಕರ್ನಾಟಕದಲ್ಲಿ ಗಾಣಿಗ ಸಮುದಾಯದ ಬಹುದಿನಗಳ ಬೇಡಿಕೆ ಆಗಿದ್ದ ʼಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮʼ ಇತ್ತೀಚೆಗೆ ಸ್ಥಾಪನೆ ಆಗಿದೆ. ಇದರ ಬೆನ್ನಿಗೆ ದೇಶದ ಇನ್ನೊಂದು ರಾಜ್ಯದಲ್ಲೂ ಗಾಣಿಗ ಸಮುದಾಯಕ್ಕೆ ನಿಗಮ ಸ್ಥಾಪನೆ ಆಗಿದೆ.

    ಮಧ್ಯಪ್ರದೇಶದ ಸರ್ಕಾರವು ಗಾಣಿಗ ಸಮುದಾಯಕ್ಕಾಗಿ ʼಮಧ್ಯಪ್ರದೇಶ ತೇಲ್‌ ಘನಿ ಬೋರ್ಡ್‌ʼ ಸ್ಥಾಪನೆ ಮಾಡಿದ್ದು, ಅದರ ಅಧ್ಯಕ್ಷರನ್ನಾಗಿ ರವಿಕರಣ್‌ ಸಾಹು ಅವರನ್ನು ನೇಮಕ ಮಾಡಿ ಇದೇ ಆ. 7ರಂದು ಆದೇಶ ಹೊರಡಿಸಿದೆ.

    ಕಳೆದ ಏಪ್ರಿಲ್‌ನಲ್ಲಿ ಭೋಪಾಲ್‌ನ ಜಂಬೋರಿ ಮೈದಾನದಲ್ಲಿ ನಡೆದ ಸಕಲ್‌ ತೇಲಿ ಸಾಹು ರಾಥೋಡ್‌ ಸಮಾಜದ ಸಮಾವೇಶದಲ್ಲಿ ನಿಗಮ/ಮಂಡಳಿ ಸ್ಥಾಪನೆ ಮಾಡುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಭರವಸೆ ನೀಡಿದ್ದರು. ಅದರಂತೆ ಅವರು ಈಗ ಹೊಸ ಮಂಡಳಿಯನ್ನು ಸ್ಥಾಪಿಸಿ ಅಧ್ಯಕ್ಷರನ್ನೂ ನೇಮಕ ಮಾಡಿದ್ದಾರೆ.

    ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಜೊತೆ ರವಿಕರಣ್‌ ಸಾಹು

    ಜಬಲ್ಪುರದ ರವಿಕರಣ್‌ ಸಾಹು ಮಧ್ಯಪ್ರದೇಶ ರಾಜ್ಯ ರಾಷ್ಟ್ರೀಯ ತೈಲಿಕ್‌ ಸಭಾದ ಅಧ್ಯಕ್ಷರಾಗಿದ್ದಾರೆ. ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತರೂ ಆಗಿರುವ ಇವರು ಮಧ್ಯಪ್ರದೇಶ ಬಿಜೆಪಿ ಐಟಿ ಸೆಲ್‌ ಉಸ್ತುವಾರಿ ಕೂಡ ಆಗಿದ್ದರು.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಯಾರಾಗುತ್ತಾರೆ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಚೊಚ್ಚಲ ಅಧ್ಯಕ್ಷ?

    ಸಂಬಂಧಿತ ಸುದ್ದಿ: ನಮ್ಮದು ಸಣ್ಣ ಸಮಾಜ, ಕಡಿಮೆ ಜನಸಂಖ್ಯೆ ಎಂಬ ಭಾವನೆ ಬೇಡ; ಗಾಣಿಗ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಲಹೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!