Friday, May 17, 2024
spot_img
More

    Latest Posts

    ಸ್ವಾಮೀಜಿದ್ವಯರ ದರ್ಶನ-ಆಶೀರ್ವಾದ ಪಡೆದ ಕುಮಟಾ ಗಾಣಿಗ ಯುವ ಬಳಗ

    ಬೆಂಗಳೂರು: ಸೋಮಕ್ಷತ್ರಿಯ ಗಾಣಿಗ ಸಮಾಜದ ಕುಲಗುರುಗಳು, ಕುಂದಾಪುರ ವ್ಯಾಸರಾಜ ಮಠದ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಪಾದಂಗಳವರು ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಸನ್ನಿಧಾನದಲ್ಲಿ ಚಾತುರ್ಮಾಸ್ಯ ವ್ರತದಲ್ಲಿದ್ದಾರೆ. ಅವರನ್ನು ಕುಮಟಾ ಗಾಣಿಗ ಯುವ ಬಳಗದವರು ಇತ್ತೀಚೆಗೆ ಭೇಟಿಯಾಗಿ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು.

    ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಚಾತುರ್ಮಾಸ್ಯ  ವ್ರತಾಚರಣೆಯನ್ನು ಆಚರಿಸುತ್ತಿರುವ ಶ್ರೀಲಕ್ಷ್ಮೀಂದ್ರ ತೀರ್ಥರ ದರ್ಶನವನ್ನು ಪಡೆದ ಗಾಣಿಗ ಯುವ ಬಳಗದ ಪದಾಧಿಕಾರಿಗಳು, ಯುವ ಬಳಗದ ವತಿಯಿಂದ ನಡೆಯುತ್ತಿರುವ  ಸಾಮಾಜಿಕ ಕಾರ್ಯಕ್ರಮಗಳ ಕುರಿತು ಗುರುಗಳಿಗೆ ತಿಳಿಸಿದರು. ಯುವ ಬಳಗದ ಚಟುವಟಿಕೆಗಳ ಬಗ್ಗೆ ತಿಳಿದ ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ,  ಯುವ ಬಳಗ ಮುಂದಿನ ದಿನಗಳಲ್ಲಿ ಸಮಾಜದ ಪರವಾಗಿ ಇನ್ನಷ್ಟು ಸೇವೆ ಮಾಡುವಂತಾಗಲಿ ಎಂದು ಆಶೀರ್ವದಿಸಿದರು.

    ಸೋಮಕ್ಷತ್ರಿಯ ಗಾಣಿಗ ಸಮಾಜದ ಕುಲಗುರುಗಳಾದ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಪಾದಂಗಳವರು.

    ಯುವ ಬಳಗದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಮಠದ ಶ್ರೀ ಸುಬುಧೇಂದ್ರ  ತೀರ್ಥರ ದರ್ಶನ ಪಡೆದು ಮಂತ್ರಾಕ್ಷತೆ ಸ್ವೀಕರಿಸಿ, ಗುರುಕಾಣಿಕೆ ಅರ್ಪಿಸಿದರು.  ಯುವ ಬಳಗದ ವತಿಯಿಂದ ಶ್ರೀ  ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಮಿಸಿದಕ್ಕಾಗಿ ಶ್ರೀಗಳು ಸಂತಸ ವ್ಯಕ್ತಪಡಿಸಿದರು. ಇಬ್ಬರೂ ಶ್ರೀಗಳಿಂದ ಮುದ್ರಾಧಾರಣೆ ಕೂಡ ಪಡೆಯಲಾಯಿತು.

    ಕುಲಗುರುಗಳಿಂದ ಪ್ರಸಾದ ಸ್ವೀಕಾರ
    ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರಿಂದ ಪ್ರಸಾದ ಸ್ವೀಕಾರ

    ಯುವ ಬಳಗದ ಪ್ರಮುಖರಾದ ಗಣಪತಿ ಶೆಟ್ಟಿ, ಗಣೇಶ್ ಪ್ರಸಾದ್ ಶೆಟ್ಟಿ, ಪ್ರಶಾಂತ್ ಶೆಟ್ಟಿ,  ಗೌತಮ ಶೆಟ್ಟಿ, ಗಣೇಶ್ ಶೆಟ್ಟಿ, ದತ್ತು ಶೆಟ್ಟಿ ಅವರು ಗುರುಗಳ ದರ್ಶನವನ್ನು ಪಡೆದು ಮಂತ್ರಾಕ್ಷತೆ, ತೀರ್ಥ-ಪ್ರಸಾದ ಸ್ವೀಕರಿಸಿ ಪುನೀತರಾದರು. ಬಳಗದ ಪ್ರೋತ್ಸಾಹಕರು ಹಾಗೂ ಸಮಾಜ ಬಾಂಧವರ ಪರವಾಗಿ  ಶ್ರೀ ಗುರುಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

    ಶ್ರೀ ಲಕ್ಷ್ಮೀಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಕುಮಟಾ ಗಾಣಿಗ ಯುವ ಬಳಗದ ಪದಾಧಿಕಾರಿಗಳು

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಯಾರಾಗುತ್ತಾರೆ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಚೊಚ್ಚಲ ಅಧ್ಯಕ್ಷ?

    ಸಂಬಂಧಿತ ಸುದ್ದಿ: ಬಸ್ರೂರು ಗಾಣಿಗ ಯುವ ಸಂಘಟನೆಯ 9ನೇ ವಾರ್ಷಿಕೋತ್ಸವ; ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕಿಟ್ ವಿತರಣೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!