Sunday, September 22, 2024
spot_img
More

    Latest Posts

    ಎಸ್‌ಜಿಇಸಿಟಿಯಿಂದ ಜ್ಞಾನಜ್ಯೋತಿ ಯೋಗ ಅಧ್ಯಯನ ಕೇಂದ್ರ ಆರಂಭ

    ಬೆಂಗಳೂರು: ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಬಂದಿರುವ ಶ್ರೀ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ (ಎಸ್‌ಜಿಇಸಿಟಿ) ಇದೀಗ ಮತ್ತೊಂದು ಮಹತ್ವದ ಕಾರ್ಯ ಕೈಗೊಂಡಿದೆ.

    ಮಾನಸಿಕ ಹಾಗೂ ದೈಹಿಕ ಆರೋಗ್ಯದ ಸಲುವಾಗಿ ಎಸ್‌ಜಿಇಸಿಟಿ ವತಿಯಿಂದ ಜ್ಞಾನಜ್ಯೋತಿ ಯೋಗ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದ್ದು, ಆ.27ರಂದು ಇದರ ಉದ್ಘಾಟನೆ ನಡೆಯಿತು.

    ಕ್ಲಾಸಿಕಲ್ ಆ್ಯಕ್ಯುಪಂಕ್ಚರಿಸ್ಟ್, ಯೋಗ ಶಿಕ್ಷಕ ಡಾ.ಕಮಲಂ ಕೃಷ್ಣ ಅವರು ಜ್ಞಾನಜ್ಯೋತಿ ಯೋಗ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿದರು. ಯೋಗ ಶಿಕ್ಷಣದ ಮಹತ್ವ ಹಾಗೂ ಆರೋಗ್ಯದ ದೃಷ್ಟಿಯಿಂದ ಅದರ ಅಗತ್ಯದ ಕುರಿತು ಮಾಹಿತಿ ನೀಡಿದರು.

    ಪ್ರಮಾಣಪತ್ರ ವಿತರಣೆ: ಎಸ್‌ಜಿಇಸಿಟಿ ಅಂಗಸಂಸ್ಥೆ ಆದ ಎಸ್‌ಜಿಇಸಿಟಿ ಅಕಾಡೆಮಿಯಿಂದ ಬ್ಯೂಟಿಷಿಯನ್ ತರಬೇತಿ ಪಡೆದ 10 ಮಂದಿಗೆ ಖಾದಿ ಗ್ರಾಮೋದ್ಯಗ ಆಯೋಗದ ಮಾನ್ಯತೆ ಇರುವ ಪ್ರಮಾಣಪತ್ರ ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

    ಪ್ರತಿಭಾ ಪುರಸ್ಕಾರ: 2022-23ನೇ ಸಾಲಿನಲ್ಲಿ ರ‌್ಯಾಂಕ್ ಅಥವಾ ಶೇ. 95ಕ್ಕೂ ಅಧಿಕ ಅಂಕ ಪಡೆದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನಡೆಸಲಾಯಿತು.

    ಈ ಸಮಾರಂಭದ ಮುಖ್ಯ ಅತಿಥಿಯಾಗಿ, ಪ್ರಾಥಮಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಬಿ.ಕೆ.ಬಸವರಾಜ್ ಆಗಮಿಸಿದ್ದರು. ಅಲ್ಲದೆ, ಮಕ್ಕಳಿಗೆ ಭವಿಷ್ಯದ ಕುರಿತು ಮಾರ್ಗದರ್ಶನ ನೀಡಿದರು.‌

    ಸಭೆಯ ಅಧ್ಯಕ್ಷತೆಯನ್ನು ಎಸ್‌ಜಿಇಸಿಟಿ ಸಂಸ್ಥಾಪಕ ಟ್ರಸ್ಟೀ ಆರ್‌. ನಾಗರಾಜ್ ಶೆಟ್ಟಿ ವಹಿಸಿದ್ದರು. ಟ್ರಸ್ಟೀ-ಖಜಾಂಚಿ ಕೆ.ಎಂ. ನಾರಾಯಣಪ್ಪ ವಂದನಾರ್ಪಣೆ ನಡೆಸಿಕೊಟ್ಟರು. ಇತರ ಟ್ರಸ್ಟೀಗಳು, ಪದಾಧಿಕಾರಿಗಳು, ಪೋಷಕರು, ಆಜೀವ ಸದಸ್ಯರು, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಹಾಜರಿದ್ದರು.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಬಾರ್ಕೂರು ದೇವಸ್ಥಾನದಲ್ಲಿ ಋಗುಪಾಕರ್ಮ, ಯಜ್ಞೋಪವೀತಧಾರಣೆ

    ಸಂಬಂಧಿತ ಸುದ್ದಿ: ಸ್ವಾಮೀಜಿದ್ವಯರ ದರ್ಶನ-ಆಶೀರ್ವಾದ ಪಡೆದ ಕುಮಟಾ ಗಾಣಿಗ ಯುವ ಬಳಗ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!