Friday, May 17, 2024
spot_img
More

    Latest Posts

    ಎಸ್‌. ರಮೇಶ್‌, ಸುಧೀರ್‌ ಉಡುಪಿ ಅವರಿಗೆ ಮುಖ್ಯಮಂತ್ರಿ ಪದಕ ಪ್ರದಾನ

    ಬೆಂಗಳೂರು: ಕರ್ನಾಟಕ ಸರ್ಕಾರ ನೀಡುವ ಮುಖ್ಯಮಂತ್ರಿ ಪದಕಕ್ಕೆ ಎಂದಿನಂತೆ ಈ ಸಲವೂ ಗಾಣಿಗ ಸಮಾಜದವರು ಆಯ್ಕೆ ಆಗಿದ್ದು, ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಉದ್ಯೋಗಿಗಳಾದ ಎಸ್. ರಮೇಶ್ ಹಾಗೂ ಸುಧೀರ್‌ ಉಡುಪಿ ಪದಕಕ್ಕೆ ಪಾತ್ರರಾಗಿದ್ದಾರೆ.

    ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಆರ್.ಎ.ಮುಂಡ್ಕೂರ್ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಅಕಾಡೆಮಿಯಲ್ಲಿ ಸೆ.22ರ ಶುಕ್ರವಾರದಂದು ಭಟ್ಕಳ ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಎಸ್.ರಮೇಶ್‌, ಅಗ್ನಿಶಾಮಕ ಚಾಲಕ ಸುಧೀರ್‌ ಉಡುಪಿ ಅವರಿಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು 2023ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರದಾನ ಮಾಡಿದರು.

    ಸಂಬಂಧಿತ ಸುದ್ದಿ: ಪ್ರಜ್ಞಾ ಪ್ರಕಾಶ್‌ಗೆ ಮುಖ್ಯಮಂತ್ರಿ ಚಿನ್ನದ ಪದಕ ಪ್ರದಾನ

    ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ 160ಕ್ಕೂ ಅಧಿಕ ಅಧಿಕಾರಿ-ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳ, ಪೌರ ರಕ್ಷಣೆ ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆಯ ಒಟ್ಟು 50ಕ್ಕೂ ಅಧಿಕ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಪ್ರದಾನ ಮಾಡಲಾಯಿತು.

    ಸಂಬಂಧಿತ ಸುದ್ದಿ: ಇನ್‌ಸ್ಪೆಕ್ಟರ್‌ ನಂದಕುಮಾರ್‌ಗೆ ಮುಖ್ಯಮಂತ್ರಿ ಪದಕ ಪ್ರದಾನ

    ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕ ಕಮಲ್ ಪಂತ್, ಹೆಚ್ಚುವರಿ ನಿರ್ದೇಶಕ ಹರಿಶೇಖರನ್, ನಂಜುಂಡಸ್ವಾಮಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ರವಿ ಮುಂತಾದವರು ಉಪಸ್ಥಿತರಿದ್ದರು.

    ಸಂಬಂಧಿತ ಸುದ್ದಿ: ಸಂತೋಷ ಗಾಣಿಗರಿಗೆ ಮುಖ್ಯಮಂತ್ರಿ ಚಿನ್ನದ ಪದಕ

    ಎಸ್‌.ರಮೇಶ್:‌ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಇವರು 31 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಅಗ್ನಿ ಕರೆ, ರಕ್ಷಣಾ ಕರೆ, ಭೂ ಕುಸಿತ, ನೆರೆಹಾವಳಿ, ರಸ್ತೆ ಅಪಘಾತಗಳ ಸಂದರ್ಭಗಳಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿ ರಕ್ಷಣೆ ಮಾಡಿರುವುದನ್ನು ಇಲಾಖೆಯು ಗುರುತಿಸಿ ಈ ಪದಕವನ್ನು ನೀಡಿದೆ.

    ಸುಧೀರ್‌ ಉಡುಪಿ: ಇವರು ಉಡುಪಿ ಜಿಲ್ಲೆಯ ಬಡಾನಿಡಿಯೂರು ನಿವಾಸಿಗರಾದ ಬಿ. ಶೇಖರ್ ಗಾಣಿಗ ಮತ್ತು ಬೇಬಿ ಶೇಖರ್ ದಂಪತಿಯ ಪುತ್ರ. ಅಗ್ನಿಶಾಮಕ ದಳದಲ್ಲಿ ಹದಿನಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆಪತ್ತಿನ ಸಂದರ್ಭಗಳಲ್ಲಿ, ಸಂಕಷ್ಟದ ಪರಿಸ್ಥಿತಿಯಲ್ಲಿ ಧಾವಿಸಿ ಸಾವು-ನೋವುಗಳಿಂದ ಪಾರು ಮಾಡಿರುವ ಹಿನ್ನೆಲೆಯಲ್ಲಿ ಇವರನ್ನು ಸರ್ಕಾರ ಗುರುತಿಸಿ ಮುಖ್ಯಮಂತ್ರಿ ಪದಕವನ್ನು ನೀಡಿದೆ. ಭಟ್ಕಳ, ಬೆಳ್ತಂಗಡಿಗಳಲ್ಲಿ ಕಾರ್ಯನಿರ್ವಹಿಸಿರುವ ಇವರು ಪ್ರಸ್ತುತ ಉಡುಪಿ ಅಗ್ನಿಶಾಮಕ ದಳದಲ್ಲಿ ಕರ್ತವ್ಯದಲ್ಲಿದ್ದಾರೆ.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ:ಬಾರ್ಕೂರು ದೇವಸ್ಥಾನದಲ್ಲಿ ಅದ್ಧೂರಿ ಆಗಿ ನಡೆಯಿತು ಸಾಮೂಹಿಕ ಉಪನಯನ-ಮೂಗುತಿಧಾರಣೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!