Friday, May 17, 2024
spot_img
More

    Latest Posts

    ನೀವೂ ಯೋಗ ಶಿಕ್ಷಕರಾಗಬಹುದು: ಇಲ್ಲಿದೆ ಆಫ್‌ಲೈನ್‌- ಆನ್‌ಲೈನ್‌ ತರಬೇತಿ

    ಬೆಂಗಳೂರು: ಯೋಗ ಕಲಿತು ಕಲಿಸಬೇಕು ಎಂದು ಬಯಸುವವರಿಗೆ ಇಲ್ಲಿದೆ ಒಂದು ಉತ್ತಮ ಅವಕಾಶ. ಶ್ರೀ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ (ಎಸ್‌ಜಿಇಸಿಟಿ) ಹೊಸದಾಗಿ ಆರಂಭಿಸಿರುವ ಜ್ಞಾನ ಜ್ಯೋತಿ ಯೋಗ ಅಧ್ಯಯನ ಕೇಂದ್ರ ಯೋಗ ಶಿಕ್ಷಕರಾಗಬೇಕು ಎಂದು ಬಯಸುವವರಿಗೆಂದೇ ತರಬೇತಿಯನ್ನು ಹಮ್ಮಿಕೊಂಡಿದೆ.

    ಈಗಾಗಲೇ ಈ ಕೋರ್ಸ್‌ಗೆ ಪ್ರವೇಶ ಆರಂಭಗೊಂಡಿದ್ದು, ಇದೇ ಅ. 15ರಿಂದ ತರಗತಿ ಆರಂಭವಾಗಲಿದೆ. ವಿದ್ಯಾರ್ಥಿಗಳು, ಯುವತಿಯರು, ನಿರುದ್ಯೋಗಿ ಯುವ ಜನತೆ ಎಲ್ಲರೂ ಇದರ ಪ್ರಯೋಜನ ಪಡೆಯಬಹುದಾಗಿದ್ದು, ಇದಕ್ಕೆ ವಯೋಮಿತಿ ಇಲ್ಲ.

     ಬೆಂಗಳೂರಿನ ನಂದಿನಿ ಬಡಾವಣೆಯ ಗಣೇಶ ಬ್ಲಾಕ್‌ನ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಇರುವ ಎಸ್‌ಜಿಇಸಿಟಿ ಕಚೇರಿಯಲ್ಲಿನ ಜ್ಞಾನ ಜ್ಯೋತಿ ಯೋಗ ಅಧ್ಯಯನ ಕೇಂದ್ರದಲ್ಲಿ ಈ ತರಬೇತಿ ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದು. ವಿವರಗಳಿಗಾಗಿ 7019356168, 9449300964 ಅಥವಾ 9663663637 ಸಂಖ್ಯೆಗೂ ಕರೆ ಮಾಡಬಹುದು.

    ನೋಂದಣಿಗೆ ಈ ಲಿಂಕ್ ಕ್ಲಿಕ್ ಮಾಡಿ: https://forms.gle/1iMZeawAs5GumsqY9

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ: ಎಸ್‌ಜಿಇಸಿಟಿ ಟ್ರಸ್ಟೀಗಳ ಆಡಳಿತ ಮಂಡಳಿ ವಾರ್ಷಿಕ ಸಭೆ, ವರದಿ ಮಂಡನೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!