Friday, May 17, 2024
spot_img
More

    Latest Posts

    ವಿಶೇಷವಾಗಿ ರಾಜ್ಯೋತ್ಸವ ಆಚರಿಸಿದ ಮಾಲೂರು ತಾಲೂಕು ಯುವ ಗಾಣಿಗರ ಸಂಘ

    ಬೆಂಗಳೂರು: ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಯುವ ಗಾಣಿಗರ ಸಂಘವು ಕರ್ನಾಟಕ ರಾಜ್ಯೋತ್ಸವವನ್ನು ನಿನ್ನೆ ವಿಶೇಷವಾಗಿ ಆಚರಿಸುವ ಮೂಲಕ ಗಮನ ಸೆಳೆದಿದೆ.

    ಗಾಣಿಗ ಸಮಾಜದ ಉದಾತ್ತ ವ್ಯಕ್ತಿತ್ವದ, ಜನೋಪಕಾರಿ ಎಂದೇ ಹೆಸರಾಗಿರುವ ದೊಡ್ಡಣ್ಣ ಶೆಟ್ಟರ ಭಾವಚಿತ್ರವನ್ನು ಮಂಟಪದಲ್ಲಿ ಪ್ರತಿಷ್ಠಾಪಿಸಿ, ಗಾಣದ ಆಕೃತಿಯನ್ನು ಮಂಟಪದ ಮುಂಭಾಗದ ವೇದಿಕೆ ಸಿದ್ಧಪಡಿಸಿದ ಸ್ತಬ್ಧ ಚಿತ್ರ ವಿಶೇಷವಾಗಿ ಗಮನ ಸೆಳೆದಿದ್ದು, ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

    ಸಂಘದ ಸದಸ್ಯರು ತಾವೆಲ್ಲ ಧರಿಸಿದ್ದ ಕೇಸರಿ ಬಣ್ಣದ ಟಿ-ಶರ್ಟ್‌ ಮೇಲೆ ಸಂಘದ ಹೆಸರಿನ ಜೊತೆಗೆ ಗಾಣದ ಚಿತ್ರವನ್ನು ಕೂಡ ಮುದ್ರಿಸಿರುವುದು ಸಮುದಾಯದ ಮೇಲಿನ ಅಭಿಮಾನವನ್ನು ಅನಾವರಣಗೊಳಿಸಿದೆ.

    ದೊಡ್ಡಣ್ಣ ಶೆಟ್ಟರ ಅಭಿಮಾನಿ ನಾಗೇಶ್ ಗಾಣಿಗ  ಮುಂತಾದವರ ನೇತೃತ್ವದಲ್ಲಿ ಈ ರಾಜ್ಯೋತ್ಸವ ಆಚರಣೆ ಆಗಿದೆ.

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ: ಇಂದಿನ ನ್ಯಾಷನಲ್ ಕಾಲೇಜನ್ನು ಆರಂಭಿಸಿದ್ದು ಅಂದಿನ ದೊಡ್ಡಣ್ಣ ಶೆಟ್ಟರೇ..

    ಸಂಬಂಧಿತ ಸುದ್ದಿ: ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗರನ್ನೂ ಸೇರಿಸುವಂತೆ ಪ್ರಧಾನಿ ಮೋದಿಗೆ ಮನವಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!