Friday, May 17, 2024
spot_img
More

    Latest Posts

    1008 ದೀಪಗಳಿಗೆ ಗಾಣದೆಣ್ಣೆ ಬಳಸಿ ದೀಪ ಬೆಳಗಿ ಕಾರ್ತಿಕ ಸೋಮವಾರ ಆಚರಣೆ

    ಬೆಂಗಳೂರು: ಕಾರ್ತಿಕ ಮಾಸದಲ್ಲಿ ವಿವಿಧ ದೇವಸ್ಥಾನಗಳಲ್ಲಿ ದೀಪ ಬೆಳಗಿ ಕಾರ್ತಿಕ ಸೋಮವಾರ ಆಚರಣೆ ಮಾಡುವುದು, ದೀಪೋತ್ಸವ ನಡೆಸುವುದು ಸರ್ವೇಸಾಮಾನ್ಯ. ವಿಷ್ಣು ದೀಪೋತ್ಸವ ಆಗಿರುವ ನ. 27ರ ಹುಣ್ಣಿಮೆ ದಿನದಂದು ರಾತ್ರಿ ಮೈಸೂರಿನ ಗಾಣಿಗರ ಹಿತೈಷಿಗಳ ಬಳಗ ವಿಶೇಷ ರೀತಿಯಲ್ಲಿ ಈ ದಿನವನ್ನು ಆಚರಣೆ ಮಾಡಿದೆ.

    ಹುಣ್ಣಿಮೆ ಹಾಗೂ ಕಾರ್ತಿಕ ಸೋಮವಾರ ಪ್ರಯುಕ್ತ ಮೈಸೂರಿನ ಬನ್ನಿಮಂಟಪದ ಶ್ರೀಮಂಜುನಾಥ ಸ್ವಾಮಿ ದೇವಾಲಯದಲ್ಲಿ ಗಾಣಿಗರ ಹಿತೈಷಿಗಳ ಬಳಗದವರು 1008 ದೀಪಗಳಿಗೆ ಗಾಣದೆಣ್ಣೆಯನ್ನೇ ಹಾಕಿ ದೀಪ ಬೆಳಗಿದ್ದಾರೆ. ಬಳಿಕ ನೆರೆದಿದ್ದ ಭಕ್ತರಿಗೆ ಪ್ರಸಾದವನ್ನೂ ವಿತರಣೆ ಮಾಡಿದ್ದಾರೆ.

    ಗಾಣಿಗರ ಹಿತೈಷಿಗಳ ಬಳಗದವರು ಈ ಮೂಲಕ ಸಮುದಾಯದ ಕುಲಕಸುಬಿನ ಜೊತೆಗೆ ಗಾಣದೆಣ್ಣೆಯ ಮಹತ್ವದ ಕುರಿತು ಗಮನ ಸೆಳೆಯುವ ಕೆಲಸವನ್ನೂ ಮಾಡಿ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

    ಸಂಬಂಧಿತ ಸುದ್ದಿ: ರಾಜಧಾನಿ ಬೆಂಗಳೂರಿನಲ್ಲಿ ಗಾಣಿಗರ ಬೃಹತ್‌ ಸಮಾವೇಶ: ಉದ್ಘಾಟಿಸಲಿದ್ದಾರೆ ಸಿಎಂ

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ: ಪಿಜಿ ಡಿಪ್ಲೊಮಾ ಯೋಗ ಕೋರ್ಸ್‌: ಗಾಣಿಗ ಸಮುದಾಯದವರಿಗೆ ಶೇ. 50 ರಿಯಾಯಿತಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!