Sunday, September 22, 2024
spot_img
More

    Latest Posts

    ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಸೆ. 10-11ರಂದು ಗಣಪತಿ ಚೌತಿ, ಇಲಿ ಪಂಚಮಿ ಉತ್ಸವ

    ಬೆಂಗಳೂರು: ಉತ್ತರಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಹುಲೇಕಲ್ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿರುವ ವಿಶ್ವಂಭರ ನಾಮಕ ಶ್ರೀ ಬಾಗಿಲು ಗಣಪತಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 10ರಂದು ಗಣೇಶ ಚತುರ್ಥಿ ಹಾಗೂ ಸೆಪ್ಟೆಂಬರ್ 11ರಂದು ಇಲಿ‌ ಪಂಚಮಿ ಉತ್ಸವ ಮತ್ತು ವಿಶೇಷ ಗಣಹವನ ನೆರವೇರಲಿದೆ.

    ಶ್ರೀಮದ್ ವ್ಯಾಸರಾಜರಿಂದ ಪೂಜಿತ, ಪ್ರತ್ಯಕ್ಷವಾಗಿ ನೈವೇದ್ಯ ಸ್ವೀಕರಿಸಿ ಕ್ಷಿಪ್ರಸಿದ್ಧಿ ಗಣಪತಿ ಎಂದೇ ಪ್ರಸಿದ್ಧಿ ಪಡೆದಿರುವ ಈ ದೇವಸ್ಥಾನವು ಇಲ್ಲಿರುವ ಕುಂದಾಪುರ ಶ್ರೀ ವ್ಯಾಸರಾಜ ಮಠದ ಆವರಣದಲ್ಲಿದ್ದು, ಗಾಣಿಗ ಸಮುದಾಯದವರಿಂದಲೇ ನಿರ್ವಹಣೆ ಆಗುತ್ತಿದೆ.

    ಹುಲೇಕಲ್​ನಲ್ಲಿರುವ ಕುಂದಾಪುರ ಶ್ರೀ ವ್ಯಾಸರಾಜ ಮಠ

    ಸೆ. 10 ಮತ್ತು 11ರಂದು ಈ ಕ್ಷೇತ್ರದಲ್ಲಿ ಮೋದಕ-ಕಡುಬು ಸಮರ್ಪಣೆ, ವಿಶೇಷ ಗಣಹವನ ಸೇರಿ ಹಲವಾರು ಸೇವೆಗಳು ನೆರವೇರಲಿವೆ. ಸೇವೆ ನೀಡಲು ಇಚ್ಛಿಸುವ ಭಕ್ತಾದಿಗಳು ಚೆಕ್/ಡಿಡಿ ಅಥವಾ ಮನಿಯಾರ್ಡರ್ ಮೂಲಕ ಹಣ ಕಳುಹಿಸಬಹುದು. ಸೇವಾಶುಲ್ಕ ಪಾವತಿಸಿದ ಕುರಿತ ರಶೀದಿ ಹಾಗೂ ಸೇವೆಯ ಹೆಸರನ್ನು 6362535375 ನಂಬರ್‌ಗೆ ಕರೆ ಮಾಡಿ ಅಥವಾ ವಾಟ್ಸ್‌ಆ್ಯಪ್/ಎಸ್‌ಎಂಎಸ್ ತಿಳಿಸಬಹುದು. ಆಸಕ್ತರು ಹೆಚ್ಚಿನ ಮಾಹಿತಿಗೆ 6362535375 ಅಥವಾ 8277456018 ಮೊಬೈಲ್‌ಫೋನ್ ನಂಬರ್‌ಗಳನ್ನು ಸಂಪರ್ಕಿಸಬಹುದು.

    ತೋರಣ ಗಣಪತಿ/ಬಾಗಿಲು ಗಣಪತಿ

    ಹಣ ಕಳುಹಿಸಬೇಕಾದ ಖಾತೆ ವಿವರ
    ಖಾತೆ ಹೆಸರು: ಶ್ರೀಲಕ್ಷ್ಮೀನಾರಾಯಣ ಟೆಂಪಲ್ ಹುಲೇಕಲ್
    ಉಳಿತಾಯ ಖಾತೆ ಸಂಖ್ಯೆ: 03192200037292
    ಐಎಫ್‌ಎಸ್‌ಸಿ ಕೋಡ್: CNRB0010319 (ಎಲ್ಲ ‘0’ ಝೀರೋ)
    ಬ್ಯಾಂಕ್, ಶಾಖೆ: ಕೆನರಾ ಬ್ಯಾಂಕ್, ಹುಲೇಕಲ್ ಶಾಖೆ.

    ಕುಂದಾಪುರ ಶ್ರೀವ್ಯಾಸರಾಜ ಮಠದ ನಿರ್ವಹಣೆಯಲ್ಲಿರುವ ಸೋದೆ ರಾಜರ ಕಾಲದ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನ

    ಸಂಬಂಧಿತ ಸುದ್ದಿ: ಮತ್ತೆ ಗಾಣಿಗ ಸಮಾಜದ ಉಸ್ತುವಾರಿಯಲ್ಲಿ ವ್ಯಾಸರಾಜ ಮಠ

    ಸಂಬಂಧಿತ ಸುದ್ದಿ: ಏ.1ರಂದು ಶ್ರೀಮದ್ ವ್ಯಾಸರಾಜರ 480ನೇ ಆರಾಧನಾ ಮಹೋತ್ಸವ

    ಸಂಬಂಧಿತ ಸುದ್ದಿ: ವ್ಯಾಸರಾಜ ಮಠದ ಶ್ರೀ ಲಕ್ಷ್ಮೀಂದ್ರ ತೀರ್ಥರಿಂದ ಮುದ್ರಾಧಾರಣೆ, ಆಶೀರ್ವಚನ, ವರ್ಧಂತ್ಯುತ್ಸವ

    ಸಂಬಂಧಿತ ಸುದ್ದಿ: ಶ್ರೀ ಲಕ್ಷ್ಮೀಂದ್ರ ತೀರ್ಥರಿಂದ ಮಾ.16ರಂದು ವ್ಯಾಸರಾಜ ಮಠದಲ್ಲಿ ಮುದ್ರಾಧಾರಣೆ- ಆಶೀರ್ವಚನ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!