Saturday, September 21, 2024
spot_img
More

    Latest Posts

    ‌ಗಾಣಿಗ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಭರವಸೆ

    ಬೆಂಗಳೂರು: ಗಾಣಿಗ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮಕೈಗೊಳ್ಳುವುದಾಗಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯಲ್ಲಿ ತಾಲೂಕು ಗಾಣಿಗ ಅಭಿವೃದ್ಧಿ ಸಂಘವನ್ನು ಉದ್ಘಾಟಿಸಿದ ಅವರು, ಗಾಣಿಗ ಸಮಾಜದ ಶ್ರೇಯೋಭಿವೃದ್ಧಿಗಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುವುದಾಗಿ ಹೇಳಿದರು. ಅಲ್ಲದೆ ಗಾಣಿಗ ಸಮುದಾಯ ಭವನ ನಿರ್ಮಾಣಕ್ಕೂ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಗಾಣಿಗ ಸಮುದಾಯ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದು, ಸಮುದಾಯದವರು ಕೇಂದ್ರ ಸರ್ಕಾರದ ಮೂಲಕ ಲಭ್ಯವಿರುವ ಅನೇಕ ಉದ್ಯೋಗಾವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಂಸದೆ ಮಂಗಲಾ ಅಂಗಡಿ ಹೇಳಿದರು.

    ಶಿಕ್ಷಣ ಮಾತ್ರವಲ್ಲದೆ ಕೈಗಾರಿಕಾ ಕ್ಷೇತ್ರದಲ್ಲೂ ನಮ್ಮ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಸಂಘಟಿತ ಪ್ರಯತ್ನ ಆಗಬೇಕಾಗಿದೆ ಎಂದು ಜಿಲ್ಲಾ ಗಾಣಿಗ ಸಮುದಾಯದ ಅಧ್ಯಕ್ಷ ರಮೇಶ ಉಟಗಿ ಹೇಳಿದರು.

    ಅಲೌಕಿಕ ಜ್ಞಾನಮಂದಿರದ ಸಿದ್ಧಾನಂದ ಗುರೂಜಿ, ಗಿರೀಶ ಆನಂದ ಗುರೂಜಿ, ಅರಳೀಕಟ್ಟೆ ತೊಂಟೇಶ್ವರ ಮಠದ ಶಿವಮೂರ್ತಿ ದೇವರು, ಬಡೆಕೊಳ್ಳಮಠದ ಸದ್ಗುರು ನಾಗೇಂದ್ರ ಸ್ಬಾಮೀಜಿ, ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ ಇಟಗಿ, ಶೋಭಾ ಗಾಣಗಿ ಮುಂತಾದವರು ಉಪಸ್ಥಿತರಿದ್ದರು.

    ಸಂಬಂಧಿತ ಸುದ್ದಿ: ಕಲಬೆರಕೆ ಎಣ್ಣೆ ವಿರುದ್ಧ ಪ್ರಧಾನಿ ಮೋದಿಯವರಲ್ಲಿ ಮೊರೆ ಇಟ್ಟ ಮುಖಂಡ..

    ಸಂಬಂಧಿತ ಸುದ್ದಿ: ಬಿಹಾರ ರಾಜ್ಯ ಜೆಡಿಯು ಕಾರ್ಯದರ್ಶಿ ಆಗಿ ಶಕುಂತಲಾ ಗುಪ್ತ ನೇಮಕ

    ಸಂಬಂಧಿತ ಸುದ್ದಿ: ನೂತನ ಸಂಪುಟ ರಚನೆ ಬೆನ್ನಿಗೇ ಮತ್ತಷ್ಟು ಕ್ರಿಯಾಶೀಲರಾದ್ರು ಶಾಸಕ ದಿನಕರ ಶೆಟ್ಟಿ

    ಸಂಬಂಧಿತ ಸುದ್ದಿ: ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶುಭ ಕೋರಿದ ಬಿ.ಜೆ. ಪುಟ್ಟಸ್ವಾಮಿ

    ಸಂಬಂಧಿತ ಸುದ್ದಿ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ವಿದ್ಯಾರ್ಥಿಗಳು

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!