Saturday, September 21, 2024
spot_img
More

    Latest Posts

    ಬೆಂಗಳೂರಿನ ದೇವನಹಳ್ಳಿಯಲ್ಲಿ ಅ. 3ರಂದು ಗಾಣಿಗ ಸಮುದಾಯದ ಕಾರ್ಯಾಗಾರ

    ಬೆಂಗಳೂರು: ಗಾಣಿಗ ಸಮುದಾಯದ ಸಂಘಟನೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಹಮ್ಮಿಕೊಂಡಿರುವ “ಗಾಣಿಗ ಸಮುದಾಯ ಕಾರ್ಯಾಗಾರ” ಅಕ್ಟೋಬರ್ 3ರಂದು ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆಯಲಿದೆ.

    ದೇವನಹಳ್ಳಿಯ ಎಸ್‌ಎಸ್‌ಬಿ ಕನ್ವೆನ್ಷನ್‌ ಹಾಲ್‌ನಲ್ಲಿ ಬೆಳಗ್ಗೆ 9ಕ್ಕೆ ಈ ಕಾರ್ಯಾಗಾರ ಆರಂಭವಾಗಲಿದ್ದು, ಸಂಜೆ 5.30ರ ವರೆಗೂ ನಡೆಯಲಿದೆ. ಗಾಣಿಗ ಸಮಾಜದ ಮುಖಂಡ, ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಕಾರ್ಯಾಗಾರದ ಉಸ್ತುವಾರಿಯನ್ನು ದೇವನಹಳ್ಳಿ ಗೋಪಿ ಎಂದೇ ಹೆಸರುವಾಸಿ ಆಗಿರುವ ಜಿ.ಎನ್. ವೇಣುಗೋಪಾಲ್ ವಹಿಸಿಕೊಂಡಿದ್ದಾರೆ.

    ಅಲ್ಲದೆ ದೇವನಹಳ್ಳಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಗಾಣಿಗರ ಸಂಘ ಮತ್ತು ಗಾಣಿಗ ಸಮುದಾಯದ ವಿವಿಧ ಸಂಘ-ಸಂಘಟನೆಗಳ ಪದಾಧಿಕಾರಿಗಳು ಈ ಕಾರ್ಯಾಗಾರ ಆಯೋಜನೆಗೆ ಕೈಜೋಡಿಸಿದ್ದಾರೆ.

    ಅ.3ರ ಬೆಳಗ್ಗೆ ನೋಂದಣಿ-ಉಪಾಹಾರದ ಬಳಿಕ ಹತ್ತು ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಈ ವೇಳೆ ಗಾಣಿಗ ಸಮುದಾಯದ ವಿವಿಧ ಕ್ಷೇತ್ರಗಳ ಪ್ರಮುಖರು ತಮ್ಮ ವಿಚಾರ ಮಂಡಿಸಲಿದ್ದಾರೆ. ನಂತರ ಉದ್ಘಾಟನಾ ಭಾಷಣ, ಸಂವಾದ, ಮುಖ್ಯ ಅತಿಥಿಗಳ ಅಭಿಪ್ರಾಯ, ಸಭಾಧ್ಯಕ್ಷರ ಭಾಷಣ ನಡೆಯಲಿದೆ.

    ಗಾಣಿಗ ಸಮುದಾಯ ಕಾರ್ಯಾಗಾರ ಕುರಿತು ನಡೆದಿದ್ದ ಪೂರ್ವಭಾವಿ ಸಭೆಯ ದೃಶ್ಯ.

    ಮಧ್ಯಾಹ್ನ ಭೋಜನ ವಿರಾಮದ ಬಳಿಕ ವಿವಿಧ ಕ್ಷೇತ್ರದ ಹಿಂದುಳಿದ ವರ್ಗಗಳ ನಾಲ್ವರು ಪ್ರಮುಖರು ವಿಚಾರ ಮಂಡನೆ ಮಾಡಲಿದ್ದಾರೆ. ಸಂವಿಧಾನದ ಆಶಯಗಳು, ಹಿಂದುಳಿದ ವರ್ಗಗಳ ಹಕ್ಕುಗಳು ಮತ್ತು ಜವಾಬ್ದಾರಿಗಳ ಕುರಿತೂ ಚರ್ಚೆ ನಡೆಯಲಿದೆ. ಮಧ್ಯಾಹ್ನ 3.30ರ ಸುಮಾರಿಗೆ ಮುಖ್ಯ ಅತಿಥಿಗಳ ಅಭಿಪ್ರಾಯ ಮಂಡನೆ, ಅಧ್ಯಕ್ಷರ ಭಾಷಣದೊಂದಿಗೆ ಕಾರ್ಯಾಗಾರ ಸಮಾರೋಪಗೊಳ್ಳಲಿದೆ.

    ಗಾಣಿಗ ಸಮುದಾಯ ಕಾರ್ಯಾಗಾರಕ್ಕೆ ನೋಂದಾಯಿಸಿಕೊಳ್ಳಲು ಈ  ಕೆಳಗಿನ ಲಿಂಕ್‌ ಬಳಸಬಹುದು. https://forms.gle/4fUoVUfVnCJZr65d7

    ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..

    ಸಂಬಂಧಿತ ಸುದ್ದಿ: ‌ಗಾಣಿಗ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಭರವಸೆ

    ಸಂಬಂಧಿತ ಸುದ್ದಿ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ವಿದ್ಯಾರ್ಥಿಗಳು

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!