Sunday, September 22, 2024
spot_img
More

    Latest Posts

    ಅಂತ್ಯಸಂಸ್ಕಾರಕ್ಕೂ ಸಹಾಯ ಮಾಡಲಿದೆ ಗಾಣಿಗ ಸಮಾಜ ಅಭಿವೃದ್ಧಿ ಸಮಿತಿ

    ಬೆಂಗಳೂರು: ಒಬ್ಬ ವ್ಯಕ್ತಿಯ ಜೀವನದಲ್ಲಿ ಅಂತಿಮ‌ಸಂಸ್ಕಾರ ಎಂಬುದು ಅತ್ಯಂತ ಗೌರವಪೂರ್ವಕವಾಗಿ ನಡೆಯಬೇಕಾದ ಸಂಗತಿ. ಗಾಣಿಗ ಸಮಾಜದಲ್ಲಿ ಮೃತಪಟ್ಟವರಿಗೆ ಅಂಥ ಒಂದು ಗೌರವಪೂರ್ವಕ ಅಂತಿಮಸಂಸ್ಕಾರ ಕಲ್ಪಿಸಲು ಮತ್ತು ಕುಟುಂಬಸ್ಥರಿಗೆ ಅಂತ್ಯಸಂಸ್ಕಾರದ ವೆಚ್ಚ ನೀಡಲು ಶಿರಸಿಯ ಗಾಣಿಗ ಸಮಾಜ ಅಭಿವೃದ್ಧಿ ಸಮಿತಿ ನಿರ್ಧರಿಸಿದೆ.

    ಶಿರಸಿಯ ಗಾಣಿಗ ಸಮಾಜ ಅಭಿವೃದ್ಧಿ ಸಮಿತಿ ಮತ್ತು ಶ್ರೀಲಕ್ಷ್ಮೀನಾರಾಯಣ ದೇವಸ್ಥಾನ ಸಮಿತಿ ಅಕ್ಟೋಬರ್ 1ರಂದು ನಡೆಸಿದ್ದ ಜಂಟಿ ಸಭೆಯಲ್ಲಿ ಇಂಥದ್ದೊಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

    ಈ ಕಾರ್ಯದ ಜವಾಬ್ದಾರಿಗಾಗಿ ರಾಮದಾಸ ಗಣಪತಿ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಉಪಸಮಿತಿಯೊಂದನ್ನು ಕೂಡ ರಚಿಸಲಾಗಿದೆ. ಸಮಾಜಬಾಂಧವರು ತಮ್ಮ ಕುಟುಂಬಸ್ಥರು ಮೃತಪಟ್ಟಾಗ ಸಹಾಯಕ್ಕಾಗಿ ಉಪಸಮಿತಿಯ ಯಾರನ್ನಾದರೂ ಸಂಪರ್ಕಿಸಿದರೆ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ಗಾಣಿಗ ಸಮಾಜ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಜಿ. ಶೆಟ್ಟಿ ತಿಳಿಸಿದ್ದಾರೆ.

    ಹೆಚ್ಚಿನ ಮಾಹಿತಿಗಾಗಿ ಗಾಣಿಗ ಸಮಾಜ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಗಣೇಶ ವಿಠಲ ಶೆಟ್ಟಿ ಅಥವಾ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದ ಅಧ್ಯಕ್ಷ ದೀಪಕ ಹನುಮಂತ ಶೆಟ್ಟಿ ಅವರನ್ನು ಸಂಪರ್ಕಿಸಬಹುದು ಎಂದು ಚಂದ್ರಶೇಖರ ಶೆಟ್ಟಿಯವರು ತಿಳಿಸಿದ್ದಾರೆ.

    ಉಪಸಮಿತಿಯ ಪದಾಧಿಕಾರಿಗಳು

    • ರಾಮದಾಸ ಗಣಪತಿ ಶೆಟ್ಟಿ, ಅಧ್ಯಕ್ಷ: 9620413771
    • ಚಂದ್ರಹಾಸ ರಾಮ ಶೆಟ್ಟಿ, ಸದಸ್ಯ: 8971120105
    • ನಾಗೇಶ ಮಂಜುನಾಥ ಶೆಟ್ಟಿ, ಸದಸ್ಯ: 9845864674
    • ಸುರೇಶ್ ರಾಮ ಶೆಟ್ಟಿ, ಸದಸ್ಯ: 8277740887
    • ವೆಂಕಟೇಶ ಮಂಜಯ್ಯ ಶೆಟ್ಟಿ, ಸದಸ್ಯ: 9743252457
    • ಗಣೇಶ ವಿಠಲ ಶೆಟ್ಟಿ, ಸದಸ್ಯ: 9986541781
    • ದೀಪಕ ಹನುಮಂತ ಶೆಟ್ಟಿ, ಸದಸ್ಯ: 8217823191

    ಸಂಬಂಧಿತ ಸುದ್ದಿ: ನಮ್ಮದು ಸಣ್ಣ ಸಮಾಜ, ಕಡಿಮೆ ಜನಸಂಖ್ಯೆ ಎಂಬ ಭಾವನೆ ಬೇಡ; ಗಾಣಿಗ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಲಹೆ

    ಸಂಬಂಧಿತ ಸುದ್ದಿ: ಆದಿಕವಿ‌ ಪಂಪನ‌ ಜನ್ಮಸ್ಥಳದಲ್ಲಿ ಸ್ಥಾಪನೆಯಾಯಿತು ನೂತನ ಗಾಣಿಗ ಸಂಘ

    ಸಂಬಂಧಿತ ಸುದ್ದಿ: ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಗಾಣಿಗರೇ ನಿರ್ಣಾಯಕ; ರಮೇಶ ಭೂಸನೂರ ಗೆಲ್ಲುವ ಸಾಧ್ಯತೆ ಅತ್ಯಧಿಕ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!