Sunday, September 22, 2024
spot_img
More

    Latest Posts

    ಕಾತರಕಿಯ ಗುಡ್ಡದ ರಂಗನಾಥ ದೇವಸ್ಥಾನದಲ್ಲಿ ಗಾಣಿಗ ಸಮುದಾಯದಿಂದ ದೀಪೋತ್ಸವ

    ಬೆಂಗಳೂರು: ರಾಜ್ಯದ ಹಲವು ಪುರಾಣಪ್ರಸಿದ್ಧ ದೇವಸ್ಥಾನಗಳಲ್ಲಿ ಗಾಣಿಗ ಸಮುದಾಯದಿಂದಲೂ ದೀಪೋತ್ಸವ ಆಚರಿಸುವ ಪದ್ಧತಿ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಮಾತ್ರವಲ್ಲ, ಈಗಲೂ ಹಲವು ದೇವಸ್ಥಾನಗಳಲ್ಲಿ ಅದು ಮುಂದುವರಿಯುತ್ತಿದೆ.

    ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನ, ಕುಮಟಾ ತಾಲೂಕು ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನ, ಕುಮಟಾ ಚಿತ್ರಗಿಯ ಶ್ರೀರಾಮಚಂದ್ರ ದೇವಸ್ಥಾನದಲ್ಲಿ ಈ ರೀತಿ ಗಾಣಿಗ ಸಮುದಾಯದಿಂದ ದೀಪೋತ್ಸವ ನಡೆಯುತ್ತಿದ್ದು, ಈ ವರ್ಷದ ದೀಪೋತ್ಸವ ಈ ಮೇಲಿನ ಎಲ್ಲ ಕ್ಷೇತ್ರಗಳಲ್ಲಿ ಇತ್ತೀಚೆಗಷ್ಟೇ ನಡೆದಿದೆ.

    ಅದೇ ರೀತಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕಾತರಕಿ ಗ್ರಾಮದ ಶ್ರೀ ಗುಡ್ಡದ ರಂಗನಾಥ ಸ್ವಾಮಿ ದೇವಸ್ಥಾನದಲ್ಲೂ ಗಾಣಿಗ ಸಮುದಾಯದಿಂದ ದೀಪೋತ್ಸವ ನಡೆಯುತ್ತಿದೆ. ಇಲ್ಲಿ ಡಿ. 18ರಂದು  ಕಾರ್ತಿಕೋತ್ಸವ ಅಂಗವಾಗಿ ದೀಪೋತ್ಸವ ನಡೆಯಿತು. ದೇವಸ್ಥಾನದ ಸುತ್ತಮುತ್ತಲಿನ ಗ್ರಾಮದ ಜನರು ಮತ್ತು ಬಾಗಲಕೋಟೆ, ಬೀಳಗಿ, ಹುನಗುಂದ, ಇಳಕಲ್, ರೋಣ, ಗದಗ, ನರಗುಂದ ತಾಲ್ಲೂಕಿನ ಭಕ್ತರು  ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.

    ಪ್ರಕೃತಿಯ ಮಡಿಲಲ್ಲಿ ಗುಡ್ಡದ ಮೇಲೆ ಇರುವ ಶ್ರೀ ರಂಗನಾಥ ಸ್ವಾಮಿ ದೀಪೋತ್ಸವ ಕರಡಿ ಗ್ರಾಮದ ಗಾಣಿಗ ಸಮಾಜದವರಿಂದ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಈ ದೀಪೋತ್ಸವದಲ್ಲಿ ಯುವಕರಾದ ಶಿವಕುಮಾರ ಬಸರಕೋಡ, ರವಿ, ಶ್ರೀಶೈಲ, ಶರಣು, ಸಂಜಯ, ಮನೋಜ ಸೇರಿ ಸಮಾಜದ ಹಲವಾರು ಯುವಕರು ಪಾಲ್ಗೊಂಡಿದ್ದರು.

    ಸಂಬಂಧಿತ ಸುದ್ದಿ: ಪುರಾಣಪ್ರಸಿದ್ಧ ಗೋಕರ್ಣದಲ್ಲಿ ಗಾಣಿಗರಿಂದ ನಡೆಯಿತು ಕಾರ್ತಿಕ ಮಾಸದ ಪ್ರಥಮ ಪೂಜೆ

    ಸಂಬಂಧಿತ ಸುದ್ದಿ: ಚಿತ್ರಗಿ ಮಠದಲ್ಲಿ ವಿಜೃಂಭಣೆಯಿಂದ ನಡೆಯಿತು ಗಾಣಿಗ ಯುವ ಬಳಗದ ದೀಪೋತ್ಸವ

    ಸಂಬಂಧಿತ ಸುದ್ದಿ: ನ. 14ರಂದು ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಗಾಣಿಗರ ದೀಪೋತ್ಸವ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!