Sunday, September 22, 2024
spot_img
More

    Latest Posts

    ಬಾಲರ್ಕ ಫಿಟ್‌ನೆಸ್‌ ಟೀಮ್‌ ಚಾಂಪಿಯನ್‌; ಬಾಲರ್ಕ ಪವರ್‌ಲಿಫ್ಟರ್ಸ್‌ ಸ್ಟ್ರಾಂಗ್‌..

    ಬೆಂಗಳೂರು: ಪ್ರಪ್ರಥಮ ಬೆಂಗಳೂರು ಜಿಲ್ಲಾ ಪವರ್​​​ಲಿಫ್ಟಿಂಗ್ ಹಾಗೂ ಅಂತರಕಾಲೇಜು ಚಾಂಪಿಯನ್​ಷಿಪ್​ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪವರ್​ಲಿಫ್ಟರ್​ ವಿಶ್ವನಾಥ್​ ಭಾಸ್ಕರ್ ಗಾಣಿಗ ಅವರ ನೇತೃತ್ವದ ಬಾಲರ್ಕ ಫಿಟ್​ನೆಸ್​​ ‘ಟೀಮ್ ಚಾಂಪಿಯನ್​ಶಿಪ್’ ತನ್ನದಾಗಿಸಿಕೊಂಡಿದೆ. ಬಾಲರ್ಕದ ಪವರ್‌ಲಿಫ್ಟರ್ಸ್‌ 6 ಚಿನ್ನದ ಪದಕ ಹಾಗೂ 2 ಬೆಳ್ಳಿ ಮತ್ತು ಒಂದು ಕಂಚಿನ ಪದಕ ಪಡೆಯುವುದರ ಮೂಲಕ ಈ ಸಾಧನೆ ಮಾಡಿದ್ದಾರೆ.

    ಬೆಂಗಳೂರು ಜಿಲ್ಲಾಮಟ್ಟದ ಪವರ್​ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬಾಲರ್ಕ ಫಿಟ್‌ನೆಸ್‌ನ ದತ್ತಾತ್ರೇಯ ಸ್ಟ್ರಾಂಗ್​ಮ್ಯಾನ್​ ಆಫ್​ ಬೆಂಗಳೂರು ಹಾಗೂ ಬಾಲರ್ಕ ಫಿಟ್‌ನೆಸ್‌ನ ಸತ್ಯವತಿ ಸ್ಟ್ರಾಂಗ್ ವುಮನ್ ಆಫ್ ಬೆಂಗಳೂರು ಪ್ರಶಸ್ತಿಯನ್ನು ಗಳಿಸಿದ್ದಾರೆ.

    ಬಾಲರ್ಕ ಕೋಚ್‌ ವಿಶ್ವನಾಥ ಭಾಸ್ಕರ್‌ ಗಾಣಿಗ ಜೊತೆಗೆ ಜಿಲ್ಲಾ ಅಂತರಕಾಲೇಜು ಸ್ಟ್ರಾಂಗ್‌ ವುಮನ್‌ ಆಫ್‌ ಬೆಂಗಳೂರು ಪುರಸ್ಕೃತ ಸಿಮ್ರಾನ್ ಮಲಿಕ್

    ಹಾಗೇ ಬೆಂಗಳೂರು ಜಿಲ್ಲಾ ಅಂತರಕಾಲೇಜು ಪವರ್​ಲಿಫ್ಟಿಂಗ್ ಚಾಂಪಿಯನ್​ಷಿಪ್​ನಲ್ಲಿ ಸಿಮ್ರಾನ್ ಮಲ್ಲಿಕ್ ಚಿನ್ನದ ಪದಕ ಗೆಲ್ಲುವುದರ ಜತೆಗೆ ಈ ವಿಭಾಗದಲ್ಲಿ ಸ್ಟ್ರಾಂಗ್ ವುಮನ್​ ಆಫ್ ಬೆಂಗಳೂರು ಆಗಿ ಹೊರಹೊಮ್ಮಿದ್ದಾರೆ.ಈ ಚಾಂಪಿಯನ್​ಷಿಪ್​ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಲ್ಲಿ ನಡೆದಿತ್ತು.

    ಸಂಬಂಧಿತ ಸುದ್ದಿ: ಭಳಿರೆ ‘ಬಾಲರ್ಕ’.. ಇದು ಬಲಾಢ್ಯ ಭಾರತೀಯನ ಗರಡಿ!

    ಸಂಬಂಧಿತ ಸುದ್ದಿ: ಭಾರತದ ಬಲಾಢ್ಯ ಪುರುಷನ ಬಾಲರ್ಕಕ್ಕೀಗ ಮತ್ತೊಂದು ತಾಣ, ಮತ್ತಷ್ಟು ತ್ರಾಣ…

    ಸಂಬಂಧಿತ ಸುದ್ದಿ: ಕಿಕ್‌ ಬಾಕ್ಸಿಂಗ್‌ನಲ್ಲಿ ಗೆದ್ದ ಈ ಅವಳಿ ಸೋದರಿಯರು ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!