Saturday, September 21, 2024
spot_img
More

    Latest Posts

    ಸಚಿವ ಗೋಪಾಲಯ್ಯ ಅವರಿಂದ ಎಸ್‌ಜಿಇಸಿಟಿ ಅಕಾಡೆಮಿ ಉದ್ಘಾಟನೆ

    ಬೆಂಗಳೂರು: ಶ್ರೀಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟಬಲ್‌ ಟ್ರಸ್ಟ್‌ ಕಂಪ್ಯೂಟರ್‌ ತರಬೇತಿ ನೀಡಲೆಂದೇ ಆರಂಭಿಸಿರುವ ಎಸ್‌ಜಿಇಸಿಟಿ ಅಕಾಡೆಮಿಯನ್ನು ಸಚಿವ ಕೆ.ಗೋಪಾಲಯ್ಯ ಅವರು ಜುಲೈ 31ರಂದು ಉದ್ಘಾಟಿಸಿದರು.

    ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯ ಗಣೇಶ್‌ ಬ್ಲಾಕ್‌ನ ಜೆ.ಬಿ. ಕಾವಲ್‌ನ ನಂ. 14/5ರಲ್ಲಿನ ಎಸ್‌ಜಿಇಸಿಟಿ ಕಚೇರಿಯಲ್ಲಿ ಈ ಕೇಂದ್ರದ ಉದ್ಘಾಟನೆ ನಡೆಯಿತು. ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಲೆಕ್ಟ್ರಾನಿಕ್ಸ್‌ ಆ್ಯಂಡ್ ಇನ್‌ಫಾರ್ಮೇಷನ್‌ ಟೆಕ್ನಾಲಜಿಯಡಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.

    ಯುವಪೀಳಿಗೆ ಕೇಂದ್ರ ಸರ್ಕಾರದ ಮಾನ್ಯತೆ ಇರುವ ಈ ಕೇಂದ್ರದ ಸದ್ಬಳಕೆ ಮಾಡಿಕೊಳ್ಳುವಂತಾಗಬೇಕು. ಆ ಮೂಲಕ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಮತ್ತು ಆಧುನಿಕ ಕಂಪ್ಯೂಟರ್‌ ಕೌಶಲಗಳನ್ನು ಕಲಿತುಕೊಳ್ಳಬೇಕು ಎಂದು ಸಚಿವ ಗೋಪಾಲಯ್ಯ ಅವರು ಹೇಳಿದರು. ಅಲ್ಲದೆ, ಮುಂದಿನ ದಿನಗಳಲ್ಲಿ ಬಡವರಿಗಾಗಿ ಕೌಶಲ ಅಭಿವೃದ್ಧಿ ತರಬೇತಿಯನ್ನೂ ಈ ಕೇಂದ್ರದಲ್ಲಿ ನಡೆಸುವಂತಾಗಬೇಕು ಎಂದು ಸಲಹೆ ನೀಡಿದರು.

    ಸಚಿವ ಗೋಪಾಲಯ್ಯ ಅವರಿಂದ ಎಸ್‌ಜಿಇಸಿಟಿ ಅಕಾಡೆಮಿ ಉದ್ಘಾಟನೆ

    ಇದೇ ಸಂದರ್ಭದಲ್ಲಿ ಎಸ್‌ಜಿಇಸಿಟಿ ವತಿಯಿಂದ ಶಿಕ್ಷಣ ತಜ್ಞ ಎಸ್.‌ ರಾಮಲಿಂಗಂ, ಬಿಬಿಎಂಪಿ ಮಾಜಿ ಉಪಮಹಾಪೌರ ಎಸ್.ಹರೀಶ್‌, ನಿವೃತ್ತ ಆರಕ್ಷಕ ಅಧೀಕ್ಷಕ ಬಿ.ಎನ್.‌ ಓಬಳೇಶ್‌, ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ ನಿರ್ದೇಶಕ ಪ್ರೊ.ಜಿ. ವಿಶ್ವನಾಥ್‌ ಅವರನ್ನು ಎಸ್‌ಜಿಎಸಿಟಿ ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು.

    ಬಿಬಿಎಂಪಿ ಮಾಜಿ ಉಪಮಹಾಪೌರ ಎಸ್‌.ಹರೀಶ್‌ ಅವರಿಗೆ ಸನ್ಮಾನ
    ನಿವೃತ್ತ ಆರಕ್ಷಕ ಅಧೀಕ್ಷಕ ಬಿ.ಎನ್.‌ ಓಬಳೇಶ್‌ ಅವರಿಗೆ ಸನ್ಮಾನ
    ಶಿಕ್ಷಣ ತಜ್ಞ ಎಸ್.‌ ರಾಮಲಿಂಗಂ ಅವರಿಗೆ ಸನ್ಮಾನ
    ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ ನಿರ್ದೇಶಕ ಪ್ರೊ.ಜಿ. ವಿಶ್ವನಾಥ್‌ ಅವರಿಗೆ ಸನ್ಮಾನ

    ಈ ಅಕಾಡೆಮಿಗೆ ಆರ್ಥಿಕವಾಗಿ ಸಹಕಾರ ನೀಡಿದ ಬಿಡಬ್ಲ್ಯುಎಸ್‌ಎಸ್‌ಬಿ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಟಿ.ವಿ. ವೇಣುಗೋಪಾಲ್‌, ಕೇಂದ್ರ ಸರ್ಕಾರ ನಿವೃತ್ತ ಅಧಿಕಾರಿ ಶಕ್ತಿವೇಲು, ಮಲ್ಲಿಗೆ ಇಡ್ಲಿ ಮಾಲೀಕರಾದ ದೇವರಾಜ್, ಗೈನಕಾಲಜಿಸ್ಟ್ ಡಾ.ಪೂರ್ಣಿಮಾ ಮೈಸೂರು, ಸೇಲ್ಸ್‌ ಟ್ಯಾಕ್ಸ್‌ನ ನಿವೃತ್ತ ಸೂಪರಿಂಟೆಂಡೆಂಟ್‌ ಎಂ.ಸಿ. ಕೇಶವಮೂರ್ತಿ, ನಿವೃತ್ತ ಸರ್ಕಾರಿ ಅಧಿಕಾರಿ ಭವಾನಿ ಅವರನ್ನು ಕೂಡ ಸನ್ಮಾನಿಸಲಾಯಿತು. ನಿವೃತ್ತ ಕೆಎಎಸ್‌ ಅಧಿಕಾರಿ, ಎಸ್‌ಜಿಇಸಿಟಿ ಸಂಸ್ಥಾಪಕ ಟ್ರಸ್ಟೀ ಆರ್‌. ನಾಗರಾಜ ಶೆಟ್ಟಿ ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

    ಆಗಸ್ಟ್‌ 1ರಿಂದ ಈ ಅಕಾಡೆಮಿಗೆ ಪ್ರವೇಶಾತಿ ಆರಂಭವಾಗಿದ್ದು, ಎಸ್‌ಸಿ-ಎಸ್‌ಟಿ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು ಎಂದು ಆರ್.ನಾಗರಾಜ ಶೆಟ್ಟಿ ತಿಳಿಸಿದ್ದಾರೆ.

    ಸಂಬಂಧಿತ ಸುದ್ದಿ: ಎಸ್‌ಜಿಇಸಿಟಿ ಅಧಿಕೃತ ಕಚೇರಿ ಕಾರ್ಯಾರಂಭ

    ಸಂಬಂಧಿತ ಸುದ್ದಿ: ಬಾಲರ್ಕ ಫಿಟ್‌ನೆಸ್‌ ಟೀಮ್‌ ಚಾಂಪಿಯನ್‌; ಬಾಲರ್ಕ ಪವರ್‌ಲಿಫ್ಟರ್ಸ್‌ ಸ್ಟ್ರಾಂಗ್‌..

    ಸಂಬಂಧಿತ ಸುದ್ದಿ: ಕರಾಟೆಯಲ್ಲಿ ಸುಂಟರಗಾಳಿ ಎಬ್ಬಿಸಿದ ಶಶಾಂಕ್​; ಟೊರ್ನಡೊ ಕಿಕ್​ನಲ್ಲಿ ನೊಬೆಲ್ ವರ್ಲ್ಡ್​ ರೆಕಾರ್ಡ್

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!