Saturday, September 21, 2024
spot_img
More

    Latest Posts

    ಸೋಮಕ್ಷತ್ರಿಯ ಗಾಣಿಗ ಸಮಾಜದಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ವಿದ್ಯಾರ್ಥಿವೇತನ

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿರುವ ಸೋಮಕ್ಷತ್ರಿಯ ಗಾಣಿಗ ಸಮಾಜ (ರಿ.) ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಹಮ್ಮಿಕೊಳ್ಳುವ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ, ಕಾರ್ತಿಕ ದೀಪಾರಾಧನೆ ಮತ್ತು ವಿದ್ಯಾರ್ಥಿ ವೇತನ ವಿತರಣೆ ನಿನ್ನೆ ನೆರವೇರಿತು.

    ಚಾಮರಾಜಪೇಟೆಯಲ್ಲಿರುವ ಶ್ರೀವ್ಯಾಸರಾಜ ಭವನದಲ್ಲಿ ನ. 6ರ ರವಿವಾರ ಈ ಕಾರ್ಯಕ್ರಮ ನಡೆಯಿತು. ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಎಚ್‌.ಟಿ.ನರಸಿಂಹ ಮತ್ತು ವಿಮಲಾ ದಂಪತಿಯ ಸಂಕಲ್ಪದೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣಪೂಜೆ ನೆರವೇರಿತು.

    ಪ್ರತಿ ವರ್ಷ ಸೋಮಕ್ಷತ್ರಿಯ ಗಾಣಿಗ ಸಮಾಜದ ಮಹಿಳಾ ಸಮಿತಿ ಇದನ್ನು ಆಯೋಜಿಸುತ್ತಿದ್ದು, ಇದೇ ಸಂದರ್ಭದಲ್ಲಿ ಕಾರ್ತಿಕ ದೀಪಾರಾಧನೆ, ಸಮಾಜದ ಮಹಿಳೆಯರಿಂದ ವಿಷ್ಣುಸಹಸ್ರನಾಮ ಪಾರಾಯಣ ಕೂಡ ನಡೆಯುತ್ತದೆ.

    ಇದಕ್ಕೂ ಮೊದಲು ಸಮಾಜದ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ನಡೆಯಿತು. ಈ ಸಲ ಸಮಾಜದ 73 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

    ಈ ಸಮಾರಂಭದಲ್ಲಿ ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ ಬಿ.ಎಸ್.ಮಂಜುನಾಥ, ಅಧ್ಯಕ್ಷ ಎಚ್.ಟಿ.ನರಸಿಂಹ, ಸೋಮಕ್ಷತ್ರಿಯ ಗಾಣಿಗ ಸಮುದಾಯ ಭವನ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಕೆ.ಎಂ. ಲಕ್ಷ್ಮಣ, ವಿದ್ಯಾನಿಧಿ ದತ್ತಿನಿಧಿ ದಾನಿಗಳಲ್ಲೊಬ್ಬರಾದ ತೋನ್ಸೆ ಪ್ರಕಾಶ್ ರಾವ್, ಭಾಸ್ಕರ್‌ ಗಾಣಿಗ ಮದ್ದುಗುಡ್ಡೆ, ಶ್ರೀವೇಣುಗೋಪಾಲಕೃಷ್ಣ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಎಂ.ಗೋಪಾಲಕೃಷ್ಣ ಹಾಗೂ ಸಂಘದ ಇತರ ಪದಾಧಿಕಾರಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು. ಪೂಜೆ ಬಳಿಕ ರಾತ್ರಿ ಪ್ರಸಾದ ವಿತರಣೆ ನಡೆಯಿತು.

    ವಿದ್ಯಾರ್ಥಿ ವೇತನಕ್ಕೆ ದೇಣಿಗೆ ನೀಡಿದ ದಾನಿಗಳು

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಯಾರಿವರು.. ಎಲ್ಲಿದ್ದರು ಇಷ್ಟು ದಿನ?; ಇದು ‘ಕ್ಷಯ’ ಹುಟ್ಟುಹಾಕಿದ ಪ್ರಶ್ನೆ!

    ಸಂಬಂಧಿತ ಸುದ್ದಿ: ಬೆಂಗಳೂರು ನಗರ ಜಿಲ್ಲೆ ಸ್ಪೆಷಲ್‌ ಡೆಪ್ಯುಟಿ ಕಮಿಷನರ್‌ ಆಗಿ ಡಾ. ವಾಸಂತಿ ಅಮರ್‌ ನೇಮಕ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!