Saturday, September 21, 2024
spot_img
More

    Latest Posts

    ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ನೆರವೇರಿತು ಗಣಯಾಗ, ವಿಶೇಷ ಚೌತಿ ಪೂಜೆ      

    ಬೆಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮದ ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ  “ಲಕ್ಷ್ಮೀ ಸಹಿತ ದಶಭುಜ ಗಣಪತಿ” ದೇವರಿಗೆ ಗಣಯಾಗ ಮತ್ತು  ಚೌತಿ ಪೂಜೆ ಮಂಗಳವಾರ ನಡೆಯಿತು.

    ಕ್ಷೇತ್ರದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಮಾರ್ಗದರ್ಶನದಲ್ಲಿ ಗಣಯಾಗ ಸಹಿತ ಚೌತಿ  ಪೂಜೆ ನೆರವೇರಿತು. ಇದೇ ವೇಳೆ ಗಾಯತ್ರೀ ದೇವಿ ಮತ್ತು ಶ್ರೀ ಗುರು ರಾಘವೇಂದ್ರ ಸ್ವಾಮಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

    ಪಿಲಾತಬೆಟ್ಟು ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಎಂ.ಬೂಬ ಸಪಲ್ಯ ಮುಂಡಬೈಲು, ಸೇವಾರ್ಥಿ ಕೆ.ಬಾಬು ಸಪಲ್ಯ ವಗ್ಗ,  ಮೋಹನ್ ಕೆ. ಶ್ರೀಯಾನ್ ರಾಯಿ, ಪ್ರಮುಖರಾದ ಜಗದೀಶ ಕುಂದರ್ ಭಂಡಾರಿಬೆಟ್ಟು, ಜಯ ಪೂಜಾರಿ ಪಿಲಿಂಗಾಲು, ಚೇತನ್ ಪಿಲಿಂಗಾಲು, ಚಿದಾನಂದ ನಾಯ್ಕ್ ದಂಡೆ, ಅಭಿಷೇಕ್ ಪಿಲಿಂಗಾಲು, ಹರೀಶ ಪಿಲಿಂಗಾಲು, ಶಶಿಕಲಾ ಪೂಜಾರಿ, ಸುಪ್ರೀತಾ ಪೂಜಾರಿ  ಮತ್ತಿತರರು ಇದ್ದರು.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ರಕ್ಷಾಬಂಧನಕ್ಕೆ ಶಾಲಾ ಮಕ್ಕಳಿಂದಲೇ ನಡೆಯಿತು ರಾಖಿಗಳ ತಯಾರಿ!

    ಸಂಬಂಧಿತ ಸುದ್ದಿ: ಎಸ್‌ಜಿಇಸಿಟಿಯಿಂದ ಪ್ರತಿಭಾ ಪುರಸ್ಕಾರ; ಅರ್ಜಿ ಸಲ್ಲಿಸಲು ಇನ್ನು ಮೂರೇ ದಿನ ಬಾಕಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!