Friday, May 17, 2024
spot_img
More

    Latest Posts

    ರಕ್ಷಾಬಂಧನಕ್ಕೆ ಶಾಲಾ ಮಕ್ಕಳಿಂದಲೇ ನಡೆಯಿತು ರಾಖಿಗಳ ತಯಾರಿ!

    ಬೆಂಗಳೂರು: ರಕ್ಷಾಬಂಧನಕ್ಕೆ ಶಾಲೆಗಳಿಗೆ ಕೆಲವು ಸಂಘಟನೆಗಳವರು ಹೋಗಿ ಮಕ್ಕಳಿಗೆ ರಾಖಿ ಕಟ್ಟಿ ಬರುವುದು, ಇಲ್ಲವೇ ಮಕ್ಕಳೇ ಖರೀದಿಸಿದ ರಾಖಿ ತಂದು ಕಟ್ಟುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಶಾಲೆಯಲ್ಲಿ ವಿಶೇಷವಾಗಿ ರಕ್ಷಾಬಂಧನವನ್ನು ಆಚರಿಸಲಾಗಿದೆ.

    ಇಲ್ಲಿನ ಮಕ್ಕಳು ರಕ್ಷಾಬಂಧನಕ್ಕಾಗಿ ತಾವೇ ರಾಖಿ ತಯಾರಿಸಿದ್ದು ವಿಶೇಷ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕಾಳಾವಾರದ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಈ ಕಾರ್ಯವನ್ನು ಮಾಡಿದ್ದಾರೆ. ಈ ಶಾಲೆಯ ಚಿತ್ರಕಲಾ ಶಿಕ್ಷಕಿ ಪ್ರತಿಭಾ ಕುಂದಾಪುರ ಅವರ ಮಾರ್ಗದರ್ಶನದ ಮೇರೆಗೆ ಮಕ್ಕಳು ಸ್ವತಃ ರಾಖಿ ತಯಾರಿಸಿದ್ದಾರೆ.

    ಮಕ್ಕಳೇ ತಯಾರಿಸಿದ ರಾಖಿಗಳು

    ಶಿಕ್ಷಕಿ ಪ್ರತಿಭಾ ಅವರು ಮಕ್ಕಳಿಗೆ ರಾಖಿ ತಯಾರಿ ಕಲಿಸಿಕೊಟ್ಟಿದ್ದು, ಮಕ್ಕಳು ತಯಾರಿಸಿದ್ದ ರಾಖಿಯನ್ನು ಮಾರಾಟ ಮಾಡಲು ಮೇಳವನ್ನು ಕೂಡ ನಡೆಸಲಾಗಿದೆ. ಅಲ್ಲದೆ, ಇಲ್ಲಿನ ರಕ್ಷಾಬಂಧನಕ್ಕೆ ಈ ಮಕ್ಕಳು ತಯಾರಿಸಿದ್ದ ರಾಖಿಗಳನ್ನೇ ಬಳಸಿಕೊಳ್ಳಲಾಗಿದೆ.

    ಮಕ್ಕಳೊಂದಿಗೆ ಅಧ್ಯಾಪಕ ವೃಂದ
    ಮಕ್ಕಳಿಗೆ ರಾಖಿ ತಯಾರಿ ಹೇಳಿಕೊಡುತ್ತಿರುವ ಚಿತ್ರಕಲಾ ಶಿಕ್ಷಕಿ ಪ್ರತಿಭಾ ಕುಂದಾಪುರ

    ಶಿಕ್ಷಕಿ ಪ್ರತಿಭಾ ಕುಂದಾಪುರ ಅವರ ಈ ಕಲ್ಪನೆಗೆ ಶಾಲಾ ಭೋದಕ ವರ್ಗ ಸಂತೋಷ ವ್ಯಕ್ತಪಡಿಸಿದ್ದು, ಮಕ್ಕಳು ಕೂಡ ಸ್ವತಃ ರಾಖಿ ತಯಾರಿಸುವುದನ್ನು ಕಲಿಯುವ ಮೂಲಕ ರಕ್ಷಾಬಂಧನ ಆಚರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಸಂತೋಷಪಟ್ಟಿದ್ದಾರೆ.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ರಾಜ್ಯಮಟ್ಟದ ಸೀನಿಯರ್​ ಪವರ್​ಲಿಫ್ಟಿಂಗ್ ಚಾಂಪಿಯನ್‌ಷಿಪ್: ಬಾಲಾರ್ಕದ ವಿಶ್ವನಾಥ್​ಗೆ ಚಿನ್ನದ ಪದಕ

    ಸಂಬಂಧಿತ ಸುದ್ದಿ: ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಸೆ. 16ರವರೆಗೂ ಇರಲಿದೆ ಸೋಣೆ ಆರತಿ; ಪೂಜೆ ಸಲ್ಲಿಕೆಗೆ ಇಲ್ಲಿದೆ ಮಾಹಿತಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!