Saturday, September 21, 2024
spot_img
More

    Latest Posts

    ಕುಮಟಾ ಗಾಣಿಗ ಯುವ ಬಳಗಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

    ಬೆಂಗಳೂರು: ಸಾಮಾಜಿಕವಾಗಿ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಬಂದಿರುವ ಉತ್ತರಕನ್ನಡ ಜಿಲ್ಲೆಯ ಕುಮಟಾ ಗಾಣಿಗ  ಯುವ ಬಳಗಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

    ಕುಮಟಾ ಕೊಪ್ಪಳಕರವಾಡಿಯಲ್ಲಿರುವ ಉತ್ತರಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ (ರಿ) ಕಚೇರಿಯಲ್ಲಿ ಸೆ. 23ರ ರವಿವಾರ ನಡೆದ ಕುಮಟಾ ಗಾಣಿಗ ಯುವ ಬಳಗ (ರಿ.) ಸರ್ವ ಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

    ಕುಮಟಾ ಗಾಣಿಗ ಯುವ ಬಳಗದ ನೂತನ ಅಧ್ಯಕ್ಷರಾಗಿ ಪ್ರಶಾಂತ್‌ ಅಶೋಕ್‌ ಶೆಟ್ಟಿ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ಮಾರುತಿ ಶಿವಾನಂದ ಶೆಟ್ಟಿ, ಗೌತಮ್‌ ನಾಗೇಶ್‌ ಶೆಟ್ಟಿ ಆಯ್ಕೆ ಆಗಿದ್ದಾರೆ.

    ಗಾಣಿಗ ಯುವ ಬಳಗ (ರಿ) ಕುಮಟಾ ಇದು 2020ರ ಮಾರ್ಚ್‌ 7ರಂದು ವಾಟ್ಸ್ಯಾಪ್‌ ಗ್ರೂಪ್‌ ಮೂಲಕ ಆರಂಭಗೊಂಡಿದ್ದು, ಇದೀಗ ಮೂರು ವರ್ಷಗಳನ್ನು ಪೂರೈಸಿದೆ. ನಂತರ 2020ರ ಅಕ್ಟೋಬರ್‌ 2ರಂದು ಮೊದಲ ಸಲ ಪದಾಧಿಕಾರಿಗಳನ್ನು ಆಯ್ಕೆ ಮಾಡಿತ್ತು. ಈ ವರ್ಷದ ಮಾ. 31ಕ್ಕೆ ಬಳಗವು ಎರಡನೇ ಆರ್ಥಿಕ ವರ್ಷವನ್ನು ಪೂರ್ಣಗೊಳಿಸಿದ್ದು, ಮೂರನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ.

    ಬಳಗವು 2020-2021 ಮತ್ತು  2021-2022 ಹಾಗೂ 2022-2023ನೇ ಸಾಲಿನ ಖರ್ಚು-ವೆಚ್ಚಗಳ ಲೆಕ್ಕಪತ್ರವನ್ನು ನಿನ್ನೆ ನಡೆದ ಸರ್ವಸದಸ್ಯರ ಸಭೆಯಲ್ಲಿ ಮಂಡಿಸಿದೆ. ಲೆಕ್ಕದ ಕುರಿತು ಹೆಚ್ಚಿನ   ಮಾಹಿತಿಗಾಗಿ ಯುವ ಬಳಗದ 24*7 ಸಹಾಯವಾಣಿ ಸಂಖ್ಯೆ -9742252260 ಸಂಪರ್ಕಿಸಬಹುದು ಎಂದು ಗಾಣಿಗ ಯುವ ಬಳಗದ ನಿಕಟಪೂರ್ವ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್. ಶೆಟ್ಟಿ ತಿಳಿಸಿದ್ದಾರೆ.

    ಲೆಕ್ಕಪತ್ರ ಮಂಡನೆ

    ಈ ಬಳಗದ ಸೇವೆಯು ಸಾರ್ಥಕಗೊಳ್ಳಬೇಕಾದರೆ ಎಲ್ಲ ಪದಾಧಿಕಾರಿಗಳ ಹಾಗೂ ಸಮಾಜ ಬಾಂಧವರ ಸಹಕಾರ ಪ್ರೋತ್ಸಾಹ ಸಲಹೆ ಸೂಚನೆಗಳೇ ಕಾರಣವಾಗಿರುವುದರಿಂದ ವರದಿಯ ವರ್ಷದಲ್ಲಿ ಯುವ ಬಳಗವು ಸಾಧಿಸಿದ  ಪ್ರಗತಿಯ ಯಶಸ್ಸಿಗೆ ತಾವೇ ಕಾರಣವೆಂದು ನಂಬಿ ತಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿರುವುದಾಗಿ ಗಣೇಶ್‌ ಪ್ರಸಾದ್‌ ಶೆಟ್ಟಿ ತಿಳಿಸಿದ್ದಾರೆ.

    ನೂತನ ಪದಾಧಿಕಾರಿಗಳ ವಿವರ

    • ಅಧ್ಯಕ್ಷ: ಪ್ರಶಾಂತ ಅಶೋಕ್‌ ಶೆಟ್ಟಿ
    • ಉಪಾಧ್ಯಕ್ಷರು: ಮಾರುತಿ ಶಿವಾನಂದ ಶೆಟ್ಟಿ, ಗೌತಮ್‌ ನಾಗೇಶ್‌ ಶೆಟ್ಟಿ
    • ಗೌರವಾಧ್ಯಕ್ಷ: ಗಣಪತಿ ಆನಂದ ಶೆಟ್ಟಿ
    • ಪ್ರಧಾನ ಕಾರ್ಯದರ್ಶಿ: ಗಣೇಶ್‌ ಪ್ರಸಾದ್‌ ಎನ್.‌ ಶೆಟ್ಟಿ
    • ಸಹ ಕಾರ್ಯದರ್ಶಿ: ಸುಬ್ರಹ್ಮಣ್ಯ ಎಸ್.‌ ಶೆಟ್ಟಿ
    • ಖಜಾಂಚಿ: ಶ್ರೀಧರ ಆನಂದ ಶೆಟ್ಟಿ
    • ಉಪ ಖಜಾಂಚಿ: ವಿನಾಯಕ ಬಿ. ಶೆಟ್ಟಿ
    • ಪ್ರಧಾನ ಸಂಘಟನಾ ಕಾರ್ಯದರ್ಶಿ: ಗೋಪಾಲಕೃಷ್ಣ ಎಂ. ಶೆಟ್ಟಿ
    • ಸಂಘಟನಾ ಕಾರ್ಯದರ್ಶಿ: ರಾಘವೇಂದ್ರ ಎಂ. ಶೆಟ್ಟಿ
    • ಸಾಮಾಜಿಕ ಜಾಲತಾಣ: ಗಣೇಶ್‌ ವಿ. ಶೆಟ್ಟಿ
    • ಕಾರ್ಯಕ್ರಮ ಸಂಯೋಜಕ: ದತ್ತಾತ್ರೇಯ ಎಂ. ಶೆಟ್ಟಿ
    • ಕಾನೂನು ಸಲಹೆಗಾರ: ವಿನಾಯಕ ಎಸ್.‌ ಶೆಟ್ಟಿ

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ: ಸ್ವಾಮೀಜಿದ್ವಯರ ದರ್ಶನ-ಆಶೀರ್ವಾದ ಪಡೆದ ಕುಮಟಾ ಗಾಣಿಗ ಯುವ ಬಳಗ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!