Friday, May 17, 2024
spot_img
More

    Latest Posts

    ತನ್ನದೇ ದಾಖಲೆ ಮುರಿದು ಮತ್ತೊಂದು ದಾಖಲೆ ಸೃಷ್ಟಿಸಿದ ವಿಶ್ವನಾಥ ಭಾಸ್ಕರ ಗಾಣಿಗ

    ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್, ಜೆರಾಯ್ ಸ್ಟ್ರಾಂಗ್ ಮ್ಯಾನ್ ಆಫ್ ಇಂಡಿಯಾ ಕೂಡ ಆಗಿರುವ ವಿಶ್ವನಾಥ ಭಾಸ್ಕರ ಗಾಣಿಗ ತಮ್ಮದೇ ದಾಖಲೆಯನ್ನು ಮುರಿದು ಮತ್ತೊಂದು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಇಂಥದ್ದೊಂದು ಸಾಧನೆ ಮಾಡಿರುವ ಏಕೈಕ ಪವರ್ ಲಿಫ್ಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

    ಮಂಗಳೂರಿನಲ್ಲಿ ಜನವರಿ 9 ಮತ್ತು 10ರಂದು ಕುದ್ರೋಳಿಯ ಶ್ರೀಗೋಕರ್ಣನಾಥ ಕ್ಷೇತ್ರದ ಗ್ಲಾಸ್ ಹೌಸ್‌ನಲ್ಲಿ ನಡೆದ ಕರ್ನಾಟಕ ಸ್ಟೇಟ್ ಸೀನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಇವರು ಒಟ್ಟು 827.5 ಕೆ.ಜಿ. ಲಿಫ್ಟ್ ಮಾಡಿದ್ದಲ್ಲದೆ ಚಿನ್ನದ ಪದಕವನ್ನೂ ಗಳಿಸಿದ್ದಾರೆ. ಮಾತ್ರವಲ್ಲ, ಇದೇ ಸಂದರ್ಭದಲ್ಲಿ ಇವರು ತಮ್ಮ ಹೆಸರಿನಲ್ಲೇ ಇದ್ದ ಹಳೆಯ ದಾಖಲೆಯನ್ನು ಮುರಿದು ಹೊಸದೊಂದು ದಾಖಲೆಯನ್ನೂ ಮಾಡಿದ್ದಾರೆ. ರಾಜ್ಯಮಟ್ಟದ ಡೆಡ್‌ಲಿಫ್ಟ್ ವಿಭಾಗದಲ್ಲಿ 332.5 ಕೆ.ಜಿ. ಲಿಫ್ಟ್ ಮಾಡಿ ದಾಖಲೆ ಮೆರೆದಿದ್ದಾರೆ. ಇದು ರಾಜ್ಯದಲ್ಲಿನ ಇದುವರೆಗಿನ ಗರಿಷ್ಠ ಡೆಡ್‌ಲಿಫ್ಟ್ ಆಗಿರುತ್ತದೆ.

    ಸಂಬಂಧಿತ ಸುದ್ದಿ: ಭಳಿರೆ ‘ಬಾಲರ್ಕ’.. ಇದು ಬಲಾಢ್ಯ ಭಾರತೀಯನ ಗರಡಿ! 

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!