Sunday, September 22, 2024
spot_img
More

    Latest Posts

    ಮೇ 9ರಂದು ಮಂಗಳೂರಿನಲ್ಲಿ ‘ವಿಶ್ವ ಗಾಣಿಗ ಟ್ರೋಫಿ-2021: ಸೀಸನ್-2’

    ಬೆಂಗಳೂರು: ‘ವಿಶ್ವ ಗಾಣಿಗರ ಚಾವಡಿ (ರಿ.)’ ಸೋಷಿಯಲ್ ಮೀಡಿಯಾ ತಂಡ ಆಯೋಜಿಸಿರುವ ‘ವಿಶ್ವ ಗಾಣಿಗ ಟ್ರೋಫಿ-2021: ಸೀಸನ್-2’ ಕ್ರಿಕೆಟ್ ಪಂದ್ಯಾವಳಿಯು ಮೇ 9ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಗಾಣಿಗ ಸಮಾಜದ ಆಟಗಾರರನ್ನಷ್ಟೇ ಒಳಗೊಂಡಿರುವ ಗರಿಷ್ಠ 32 ತಂಡಗಳಿಗೆ ಅವಕಾಶ ಇರಲಿದೆ.

    ವಿಶ್ವ ಗಾಣಿಗರ ಚಾವಡಿಯು ಪುರುಷರಿಗಾಗಿ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಂಡಿದ್ದರೆ, ಮಹಿಳೆಯರಿಗಾಗಿ ಲಗೋರಿ ಪಂದ್ಯಾವಳಿಯನ್ನು ಹಮ್ಮಿಕೊಂಡಿದೆ. ಇದು ಕೂಡ ಮೇ 9ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲೇ ನಡೆಯಲಿದೆ.

    ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ ಟ್ರೋಫಿ, 15,555 ರೂಪಾಯಿ ನಗದು ಹಾಗೂ ರನ್ನರ್ ಅಪ್ ತಂಡಕ್ಕೆ ಟ್ರೋಫಿ, 9,999 ರೂಪಾಯಿ ನಗದು ನೀಡಲಾಗುವುದು. ಜೊತೆಗೆ ಉತ್ತಮ ಆಟ ಪ್ರದರ್ಶಿಸಿದವರಿಗೆ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಯೂ ಇರಲಿದೆ. ಭಾಗವಹಿಸಲು ಇಚ್ಛಿಸುವ ಪ್ರತಿ ತಂಡ ಪ್ರವೇಶ ಶುಲ್ಕವಾಗಿ 1,500 ರೂಪಾಯಿ ಪಾವತಿಸಬೇಕಿದೆ.

    ಮಹಿಳೆಯರ ಲಗೋರಿ ಸ್ಪರ್ಧೆಯಲ್ಲಿ ಪ್ರತಿ ತಂಡದಲ್ಲಿ ಹತ್ತು (7+3) ಆಟಗಾರರು ಇರಲಿದ್ದು, ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ ಟ್ರೋಫಿ ಮತ್ತು 4,444 ರೂಪಾಯಿ ನಗದು, ದ್ವಿತೀಯ ಬಹುಮಾನವಾಗಿ ಟ್ರೋಫಿ ಮತ್ತು 2,222 ರೂಪಾಯಿ ನಗದು ನೀಡಲಾಗುವುದು. ಇಲ್ಲಿಯೂ ಪ್ರತಿ ತಂಡ 250 ರೂಪಾಯಿ ಪ್ರವೇಶ ಶುಲ್ಕ ಪಾವತಿಸಬೇಕಿದೆ.

    ಭಾಗವಹಿಸುವ ತಂಡಗಳಿಗೆ ಷರತ್ತುಗಳು

    ಇದು ಗಾಣಿಗ ಸಮಾಜದ ಸದಸ್ಯರಿಗೆ ಸೀಮಿತವಾಗಿ ನಡೆಸುವ ಪಂದ್ಯಾವಳಿಗಳು ಆಗಿರುವುದರಿಂದ ಎಲ್ಲ ತಂಡಗಳವರೂ ಈ ಕೆಳಗಿನ ಷರತ್ತುಗಳಿಗೆ ಬದ್ಧರಾಗಿರಬೇಕು.

    • ಗಾಣಿಗ ಸಮಾಜದವರೆಂದು ದೃಢಪಡಿಸುವ ಗುರುತಿನ ಚೀಟಿ ಅಥವಾ ಜಾತಿ ಪ್ರಮಾಣಪತ್ರ ಅಥವಾ ಹತ್ತಿರದ ಗಾಣಿಗ ಸಂಘದಿಂದ ದೃಢಪಡಿಸಿದ ಪತ್ರ (ಈ ಪತ್ರದಲ್ಲಿ ಆಟಗಾರನ ಭಾವಚಿತ್ರ ಇರಬೇಕು ಮತ್ತು ಸಂಘದ ರಬ್ಬರ್ ಸ್ಟ್ಯಾಂಪ್ ಅರ್ಧ ಭಾವಚಿತ್ರದ ಮೇಲೂ ಅರ್ಧಪತ್ರದ ಮೇಲೂ ಇರುವಂತೆ ನೋಡಿಕೊಳ್ಳುವುದು ಕಡ್ಡಾಯ.)
    • ಆಟಗಾರರಿಗೆ ವಯಸ್ಸಿನ ಮಿತಿ ಇರುವುದಿಲ್ಲ.
    • 2021ರ ಏಪ್ರಿಲ್ 25ರ ಒಳಗೆ ಪ್ರವೇಶ ಶುಲ್ಕವನ್ನು ಕಡ್ಡಾಯವಾಗಿ ತಲುಪಿಸಬೇಕು.
    • 2021ರ ಮೇ 2ರಂದು ಲಾರ್ಡ್ಸ್ ಎತ್ತಲಾಗುವುದು. ಇದಕ್ಕೆ ಪೂರ್ಣ ಪ್ರವೇಶ ಶುಲ್ಕ ಪಾವತಿಸಿದ ತಂಡಗಳನ್ನು ಮಾತ್ರ ಪರಿಗಣಿಸಲಾಗುವುದು.
    • ತೀರ್ಪುಗಾರರ ಹಾಗೂ ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ.
    • ಕೊಟ್ಟ ಸಮಯಕ್ಕೆ ಹಾಜರಾಗದ ತಂಡವನ್ನು ಟೂರ್ನಿಯಿಂದ ಕೈ ಬಿಡಲಾಗುವುದು ಮತ್ತು ಎದುರಾಳಿ ತಂಡವನ್ನು ವಿಜಯೀ ತಂಡವೆಂದು ಘೋಷಿಸಿ ಮುಂದಿನ ಹಂತಕ್ಕೆ ತೇರ್ಗಡೆ ನೀಡಲಾಗುವುದು.
    • ಪಂದ್ಯ ಟೈ ಆದಲ್ಲಿ ನಾಣ್ಯ ಚಿಮ್ಮಿಸುವ ಮೂಲಕ ವಿಜಯೀ ತಂಡವನ್ನು ಆಯ್ಕೆ ಮಾಡಲಾಗುವುದು.
    • ಪ್ರವೇಶ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿದ ನಂತರ ಯಾವುದೇ ಕಾರಣಕ್ಕೂ ಪಾವತಿಸಿದ ಪ್ರವೇಶ ಶುಲ್ಕ ಹಿಂದಿರುಗಿಸಲಾಗುವುದಿಲ್ಲ.
    • ಕ್ರಿಕೆಟ್ ಪಂದ್ಯಾವಳಿಗೆ ಪ್ರಥಮವಾಗಿ ಪ್ರವೇಶ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿದ 32 ತಂಡಗಳಿಗೆ ಮಾತ್ರ ಅವಕಾಶ.
    • ತಂಡದ ನಾಯಕನಿಗೆ ಮಾತ್ರ ತೀರ್ಪುಗಾರರು ಮತ್ತು ಆಯೋಜಕರ ಜೊತೆಗೆ ಚರ್ಚಿಸಲು ಅವಕಾಶ ಇರುತ್ತದೆ.
    • ನಿಯಮಗಳನ್ನು ಉಲ್ಲಂಘಿಸಿದ ತಂಡವನ್ನು ಯಾವುದೇ ಸಂದರ್ಭದಲ್ಲೂ ಟೂರ್ನಿಯಿಂದ ಕೈ ಬಿಡಲಾಗುವುದು.
    • ಕ್ರಿಕೆಟ್ ಪಂದ್ಯಾವಳಿಗೆ ಗರಿಷ್ಠ 15 ಮಂದಿ, ಲಗೋರಿಯಲ್ಲಿ ಗರಿಷ್ಠ 10 ಜನ ಇರುವ ತಂಡದ ಆಟಗಾರರ ಹೆಸರು ವಿಳಾಸ ಹಾಗೂ ಭಾವಚಿತ್ರಗಳನ್ನು ಕಡ್ಡಾಯವಾಗಿ ಮೇ 2ರ ಒಳಗೆ ನಮಗೆ ತಲುಪಿಸಬೇಕು.

    ನೋಂದಣಿಗೆ ಸಂಪರ್ಕಿಸಬೇಕಾದ ಸಂಖ್ಯೆಗಳು

    80506 63832
    96866 87897
    74111 59548
    96323 41064

    ಸಂಬಂಧಿತ ಸುದ್ದಿ: ದೊಡ್ಮನೆ ಹುಡುಗ್ರಿಗೆ ಗಾಣಿಗ ಪ್ರೀಮಿಯರ್ ಕಪ್, ಕುಮಟಾ ಚಾಲೆಂಜರ್ಸ್‌ಗೆ ರನ್ನರ್ ಅಪ್ 

    ಸಂಬಂಧಿತ ಸುದ್ದಿ: ಅಂತಾರಾಷ್ಟ್ರೀಯ ಸೈಕ್ಲಿಂಗ್ ಸಾಧಕ ರಾಜು ಭಾಟಿಗೆ ಏಕಲವ್ಯ ಪ್ರಶಸ್ತಿ ಪ್ರದಾನ 

    ಸಂಬಂಧಿತ ಸುದ್ದಿ: ಬಾಲ್ ಬ್ಯಾಡ್ಮಿಂಟನ್ ಪ್ರತಿಭೆ ಜಯಲಕ್ಷ್ಮಿಗೆ ಕ್ರೀಡಾರತ್ನ ಪ್ರಶಸ್ತಿ ಪ್ರದಾನ 

    ಸಂಬಂಧಿತ ಸುದ್ದಿ: ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವನಾಥ್‌ಗೆ ಮತ್ತೆ 3 ಚಿನ್ನದ ಪದಕ 

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!