Saturday, September 21, 2024
spot_img
More

    Latest Posts

    ನಾಳೆಯಿಂದ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಹಾಗೂ ದುರ್ಗಾಹೋಮ

    ಬೆಂಗಳೂರು: ಉತ್ತರಕನ್ನಡ ಜಿಲ್ಲೆ ಶಿರಸಿ ತಾಲೂಕಿನ‌ ಹುಲೇಕಲ್‌ನಲ್ಲಿರುವ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಅಕ್ಟೊಬರ್ 7ರಿಂದ 15ರ ವರೆಗೆ ಶರನ್ನವರಾತ್ರಿ ಉತ್ಸವ ಜರುಗಲಿದ್ದು, ದುರ್ಗಾ ಹೋಮ‌ ಕೂಡ ನೆರವೇರಲಿದೆ.

    ಅ.7ರಂದು ಘಟಸ್ಥಾಪನೆಯೊಂದಿಗೆ ನವರಾತ್ರಿ ಉತ್ಸವ ಆರಂಭವಾಗಲಿದ್ದು, ಅ.15ರ ವಿಜಯದಶಮಿಯಂದು ಸಮಾರೋಪಗೊಳ್ಳಲಿದೆ. ದುರ್ಗಾಷ್ಟಮಿ ದಿನವಾದ ಅ.13ರಂದು ದುರ್ಗಾಹೋಮ ನಡೆಯಲಿದೆ.

    ಶರನ್ನವರಾತ್ರಿ ಪ್ರಯುಕ್ತ ಸಂಕಲ್ಪ ಸೇವೆ, ಎಳ್ಳೆಣ್ಣೆ ನಂದಾದೀಪ, ತುಪ್ಪದ ನಂದಾದೀಪ, ದುರ್ಗಾ ಸಪ್ತಶತಿ ಪಾರಾಯಣ, ಮಹಾನೈವೇದ್ಯ ಸಮರ್ಪಣೆ, ಒಂದು ದಿನದ ಸರ್ವ ಸೇವಾ ನಡೆಯಲಿದೆ. ದುರ್ಗಾ ಹೋಮಕ್ಕೆ ಸಾಮೂಹಿಕ ಅಥವಾ ವೈಯಕ್ತಿಕ ಸಂಕಲ್ಪ, ವಿಶೇಷ ಸಂಕಲ್ಪ ವ್ಯವಸ್ಥೆ ಇರಲಿದ್ದು, ಭಕ್ತರು ಸಂಪೂರ್ಣವಾಗಿ ದುರ್ಗಾಹೋಮದ ಪ್ರಾಯೋಜಕತ್ವವನ್ನು ಕೂಡ ವಹಿಸಿಕೊಳ್ಳಬಹುದು.

    ಸೇವೆಯ ಕುರಿತ ಹೆಚ್ಚಿನ ವಿವರಗಳಿಗೆ 6362535375, 8277456018 ಮೊಬೈಲ್‌ಫೋನ್ ಸಂಖ್ಯೆಗಳನ್ನು ಸಂಪರ್ಕಿಸಬಹುದು.

    ಸಂಬಂಧಿತ ಸುದ್ದಿ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ವಿದ್ಯಾರ್ಥಿಗಳು

    ಸಂಬಂಧಿತ ಸುದ್ದಿ: ಮತ್ತೆ ಗಾಣಿಗ ಸಮಾಜದ ಉಸ್ತುವಾರಿಯಲ್ಲಿ ವ್ಯಾಸರಾಜ ಮಠ

    ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!