Saturday, September 21, 2024
spot_img
More

    Latest Posts

    ಚಾಮರಾಜಪೇಟೆ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಷನ್ ಪ್ರಪ್ರಥಮ ಅಧ್ಯಕ್ಷರಾಗಿ ಬಿ.ಎಸ್. ಸುಬ್ಬಣ್ಣ


    ಬೆಂಗಳೂರು: ರಾಜಧಾನಿಯ ದಕ್ಷಿಣ ಬೆಂಗಳೂರಿನ ಪ್ರಮುಖ ಬಡಾವಣೆ ಆಗಿರುವ ಚಾಮರಾಜಪೇಟೆಯ ನಿವಾಸಿಗರು ಸಂಘವೊಂದನ್ನು ಸ್ಥಾಪಿಸಿದ್ದು, ‘ಚಾಮರಾಜಪೇಟೆ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಷನ್ (ರಿ.)’ ಹೆಸರಿನಲ್ಲಿ ಅದು ಉದ್ಘಾಟನೆ ಆಗಲಿದೆ.

    ‘ಚಾಮರಾಜಪೇಟೆ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಷನ್ (ರಿ.)’ ಇದರ ಪ್ರಪ್ರಥಮ ಅಧ್ಯಕ್ಷರಾಗಿ ಗಾಣಿಗ ಸಮಾಜದ ಬಿ‌.ಎಸ್. ಸುಬ್ಬಣ್ಣ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಅ.16ರ ಶನಿವಾರ ಸಂಜೆ ಚಾಮರಾಜಪೇಟೆ ಮಕ್ಕಳಕೂಟ ಆವರಣದಲ್ಲಿ ಸಸಿ ನೆಡುವ ಮೂಲಕ ಸಂಘದ ಉದ್ಘಾಟನೆ ಆಗಲಿದೆ.

    ಚಾಮರಾಜಪೇಟೆ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಷನ್‌ ಗೌರವಾಧ್ಯಕ್ಷರಾಗಿ ಡಾ.ಎ. ಪ್ರಕಾಶ್, ಉಪಾಧ್ಯಕ್ಷರಾಗಿ ಎ.ಪಿ.ಗಂಗಾಧರ್, ಡಾ.ಎನ್.ಎಸ್. ಕೃಷ್ಣಮೂರ್ತಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

    ಕಾರ್ಯದರ್ಶಿ ಆಗಿ ರಾಘವೇಂದ್ರ ಹೆಬ್ಬಾರ್, ಜಂಟಿ ಕಾರ್ಯದರ್ಶಿಯಾಗಿ ವೈ.ಸಿ. ರಮೇಶ್, ಎಂ.ರಾಘವೇಂದ್ರ, ಖಜಾಂಚಿಯಾಗಿ ಡಿ.ಎಸ್. ಶ್ರೀನಾಥ್, ಸಂಚಾಲಕರಾಗಿ ಎಸ್.ಎನ್. ವೆಂಕಟೇಶ್ ಕುಮಾರ್, ಬಿ.ಎಸ್. ರಾಧಾನಂದನ್ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

    ಕಾರ್ಯಕಾರಿ ಸಮಿತಿ ಸದಸ್ಯರು: ಕಮಾಂಡರ್ ಎಂ.ಎಸ್. ಶ್ರೀಕಾಂತ್, ಎನ್.ಎಸ್. ರಾಧಾಕೃಷ್ಣ ಶೆಟ್ಟಿ, ಸಂದೀಪ್ ಕಿಂಚ, ಜಿ.ವಿ. ರುದ್ರಪ್ರಸಾದ್, ಡಾ.ವಿ.ವಿ. ಪವಾರ್, ಮಂಜುನಾಥ್, ಡಾ.ಟಿ. ಕಲ್ಯಾಣ್‌ಕುಮಾರ್, ಬಿ.ಎಸ್.ಕೃಷ್ಣಮೂರ್ತಿ, ಕೆ.ಜಿ. ನಾಗಭೂಷಣ್, ಎನ್.ಆರ್. ರವೀಶ್, ಬಿ.ರಘುನಂದ, ಬಿ.ಎಸ್. ಭರತ್, ಮನ್‌ಶುಕ್‌ಲಾಲ್, ಬಿ.ಕೆ. ಪ್ರಭುಕುಮಾರ್ ಬ್ಯಾಡಗಿ.

    ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..

    ಸಂಬಂಧಿತ ಸುದ್ದಿ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ವಿದ್ಯಾರ್ಥಿಗಳು

    ಸಂಬಂಧಿತ ಸುದ್ದಿ: ನಮ್ಮದು ಸಣ್ಣ ಸಮಾಜ, ಕಡಿಮೆ ಜನಸಂಖ್ಯೆ ಎಂಬ ಭಾವನೆ ಬೇಡ; ಗಾಣಿಗ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಲಹೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!