Sunday, September 22, 2024
spot_img
More

    Latest Posts

    ಗಾಣಿಗ ಯುವ ಬಳಗದ ರಕ್ತದಾನ-ಜೀವದಾನ ಯೋಜನೆ ಕಾರ್ಯಾರಂಭ

    ಬೆಂಗಳೂರು: ಕುಮಟಾ ಗಾಣಿಗ ಯುವ ಬಳಗ ಹಮ್ಮಿಕೊಂಡಿರುವ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ರಕ್ತದಾನ-ಜೀವದಾನ ಕಾರ್ಯಾರಂಭಿಸಿದೆ. ಗಾಣಿಗ ಯುವ ಬಳಗದ ಪದಾಧಿಕಾರಿಗಳಾದ ಸುಬ್ರಹ್ಮಣ್ಯ ಎಸ್.‌ ಶೆಟ್ಟಿ ಹಾಗೂ ಗೌತಮ್‌ ಎನ್‌. ಶೆಟ್ಟಿ ಅವರು ಬಳಗದ ವತಿಯಿಂದ ರಕ್ತದಾನ ಮಾಡುವ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

    ಅಗತ್ಯ ಇರುವವರಿಗೆ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಪೂರೈಸುವ ನಿಟ್ಟಿನಲ್ಲಿ ಗಾಣಿಗ ಯುವ ಬಳಗ ಈ ರಕ್ತದಾನ-ಜೀವದಾನ ಯೋಜನೆ ಹಮ್ಮಿಕೊಂಡಿದೆ. ರಕ್ತದಾನ ಮಾಡಲು ಬಯಸುವವರು ಹಾಗೂ ರಕ್ತದ ಅಗತ್ಯ ಇರುವವರು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬಹುದು ಎಂದು ಗಾಣಿಗ ಯುವ ಬಳಗದ ಅಧ್ಯಕ್ಷ ಗಣೇಶ್‌ ಪ್ರಸಾದ್‌ ಶೆಟ್ಟಿ ತಿಳಿಸಿದ್ದಾರೆ.

    ಆಸಕ್ತರು ಗಾಣಿಗ ಯುವಬಳಗವನ್ನು ಸಹಾಯವಾಣಿ (9742252260) ಸಂಪರ್ಕಿಸಿ, ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ನೋಡಿ.

    ರಕ್ತದಾನಕ್ಕೂ ತಂಡ ಕಟ್ಟಲು ಸಜ್ಜಾದ ಗಾಣಿಗ ಯುವ ಬಳಗ

    ಸಂಬಂಧಿತ ಸುದ್ದಿ: ಪುರಾಣಪ್ರಸಿದ್ಧ ಗೋಕರ್ಣದಲ್ಲಿ ಗಾಣಿಗರಿಂದ ನಡೆಯಿತು ಕಾರ್ತಿಕ ಮಾಸದ ಪ್ರಥಮ ಪೂಜೆ

    ಸಂಬಂಧಿತ ಸುದ್ದಿ: ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕಿ ಶಾರದಾ ಶೆಟ್ಟಿ ಉಪಸ್ಥಿತಿಯಲ್ಲಿ ವಿಧ್ಯುಕ್ತವಾಗಿ ಉದ್ಘಾಟನೆ ಆಗಲಿದೆ ಗಾಣಿಗ ಯುವ ಬಳಗ

    ಸಂಬಂಧಿತ ಸುದ್ದಿ: ಭಳಿರೆ ‘ಬಾಲರ್ಕ’.. ಇದು ಬಲಾಢ್ಯ ಭಾರತೀಯನ ಗರಡಿ!

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!