Saturday, September 21, 2024
spot_img
More

    Latest Posts

    ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳಿಗಾಗಿ ಯುವ ಮಾನಸ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಸ್ಥಾಪನೆ

    ಬೆಂಗಳೂರು: ಗಾಣಿಗ ಸಮಾಜದ ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಒದಗಿಸುವ ಹಾಗೂ ಅವರಿಗೆ ಸೂಕ್ತ ಮಾರ್ಗದರ್ಶನ ಕಲ್ಪಿಸುವ ನಿಟ್ಟಿನಲ್ಲಿ ಯುವ ಮಾನಸ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಸ್ಥಾಪನೆಯಾಗಿದೆ.

    ಉದ್ಯಮಿ, ಶಿವಮೊಗ್ಗದ ಶ್ರೀರಾಮ್‌ ರೆಸಿಡೆನ್ಸಿ ಮಾಲೀಕ ಎಚ್.‌ ಸುಬ್ಬಯ್ಯ ಗಾಣಿಗ ಅವರ ಕನಸಿನ ಕೂಸಾದ ಈ ಟ್ರಸ್ಟ್‌ 2021ರ ಸೆಪ್ಟೆಂಬರ್‌ 27ರಂದು ನೋಂದಣಿಯಾಗಿ ಅಸ್ತಿತ್ವಕ್ಕೆ ಬಂದಿದ್ದು, ನ. 28ರಂದು ಕುಂದಾಪುರ ಸಮೀಪದ ಉಪ್ಪುಂದದಲ್ಲಿ ಟ್ರಸ್ಟ್‌ನದ್ದೇ ಆದ ಕಚೇರಿಯನ್ನು ಕೂಡ ತೆರೆಯಲಾಗಿದೆ.

    ಸುಬ್ಬಯ್ಯ ಗಾಣಿಗ ಅವರು ಸಂಸ್ಥಾಪಕರಾಗಿರುವ ಈ ಟ್ರಸ್ಟ್‌ ಗಾಣಿಗ ಸಮುದಾಯಕ್ಕೆ ಉದಾತ್ತವಾದ ಶೈಕ್ಷಣಿಕ ಧ್ಯೇಯೋದ್ದೇಶವನ್ನು ಹೊಂದಿದೆ. ಗಾಣಿಗ ಸಮಾಜದಲ್ಲಿನ ಆರ್ಥಿಕವಾಗಿ ದುರ್ಬಲವಾಗಿರುವ ಹಾಗೂ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಾರ್ಗದರ್ಶನ ಮಾಡುವ ಜೊತೆಗೆ ಆರ್ಥಿಕವಾಗಿಯೂ ನೆರವಾಗಲಿದೆ. ನಮ್ಮ ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿ ಇರುವ ಹಾಗೂ ಉನ್ನತ ಹುದ್ದೆಯಿಂದ ನಿವೃತ್ತಿಯಾದ ವ್ಯಕ್ತಿಗಳಿಂದ ಈ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುವುದು.

    ಸದ್ಯಕ್ಕೆ ಶಿವಮೊಗ್ಗ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಯ ಗಾಣಿಗ ಸಮಾಜದ ವಿದ್ಯಾರ್ಥಿಗಳಿಗೆ ಸೀಮಿತವಾಗಿ ಈ ಟ್ರಸ್ಟ್‌ ಕಾರ್ಯನಿರ್ವಹಿಸಲಿದ್ದು, ಮುಂದೆ ಕಾರ್ಯವ್ಯಾಪ್ತಿ ವಿಸ್ತಾರಗೊಳಿಸುವ ಯೋಚನೆಯನ್ನೂ ಹೊಂದಿದೆ.

    ಗಾಣಿಗ ಸಮಾಜದ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಕೆಎಎಸ್, ಐಎಎಸ್, ಐಪಿಎಸ್, ಐಎಫ್ಎಸ್, ಐಆರ್‌ಎಸ್ ಮುಂತಾದ ಉನ್ನತ ಉದ್ಯೋಗಾವಕಾಶದ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲಾಗುವುದು. ಅಂಥ ವಿದ್ಯಾರ್ಥಿಗಳನ್ನು ಮಂಗಳೂರು-ಬೆಂಗಳೂರು ಮುಂತಾದೆಡೆಗೆ ಕಳುಹಿಸಿ ತರಬೇತಿ ನೀಡುವ ಜೊತೆಗೆ ಈ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ/ಶ್ರೇಣಿ ಪಡೆದು ಉತ್ತೀರ್ಣರಾಗುವಂತೆ ಮಾಡುವ ಉದ್ದೇಶವನ್ನೂ ಹೊಂದಿದೆ. ಆ ಮೂಲಕ ಸಮಾಜವನ್ನು ಸಶಕ್ತಗೊಳಿಸುವ ಮಹದಾಶಯ ಕೂಡ ಈ ಟ್ರಸ್ಟ್‌ನದ್ದಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಉಡುಪಿ ಜಿಲ್ಲೆಯ ಸಮಾಜ ಬಾಂಧವರು ಟ್ರಸ್ಟಿಗಳಾದ ಮಂಜುನಾಥ ಗಾಣಿಗ ಸೇಲಂ; ಬೈಂದೂರು ಶಿವಮೊಗ್ಗ ಜಿಲ್ಲೆಯ ಸಮಾಜಬಾಂಧವರು ಸುಬ್ಬಯ್ಯ ಗಾಣಿಗ; ಉತ್ತರ ಕನ್ನಡ ಜಿಲ್ಲೆಯ ಸಮಾಜಬಾಂಧವರು ಸುಭಾಷ್ ಶೆಟ್ಟಿ ಅವರನ್ನು ಸಂಪರ್ಕಿಸಬಹುದು.

    2022ರ ಫೆಬ್ರವರಿ ತಿಂಗಳಲ್ಲಿ ಯುವ ಮಾನಸ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ನ ಅಧಿಕೃತ ಉದ್ಘಾಟನಾ ಸಮಾರಂಭ ಮತ್ತು ನಮ್ಮ ಸಮಾಜದ ಗಣ್ಯಾತಿಗಣ್ಯರನ್ನು ಸನ್ಮಾನಿಸಿ ಅವರನ್ನು ಗುರುತಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗೆ ಯು. ಅನಂತ ಗಾಣಿಗ (9740541279) ಅವರನ್ನು ಸಂಪರ್ಕಿಸಬಹುದು ಎಂದು ಟ್ರಸ್ಟಿಗಳು ತಿಳಿಸಿದ್ದಾರೆ.

    ಸಮಾಜದ ವಿದ್ಯಾರ್ಥಿಗಳು ಕೇವಲ ಪದವಿ, ಸ್ನಾತಕೋತ್ತರ ಪದವಿ ಮಾತ್ರವಲ್ಲದೆ ಇಂಥ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆಗೆ ಏರಿದಲ್ಲಿ ಗಾಣಿಗ ಸಮುದಾಯ ಮತ್ತಷ್ಟು ಸಶಕ್ತಗೊಂಡು, ಎಲ್ಲರೂ ಗುರುತಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

    ಟ್ರಸ್ಟಿಗಳು

    • ಎಚ್.‌ ಸುಬ್ಬಯ್ಯ ಗಾಣಿಗ
    • ಶುಭಕರ
    • ಯು. ಅನಂತ ಗಾಣಿಗ
    • ಸಂತೋಷ್‌ ಆನಂದ್‌
    • ಸುಭಾಷ್‌ ಶೆಟ್ಟಿ
    • ಸವಿತಾ
    • ನವೀನ್‌ ನಾರಾಯಣ
    • ಶಿವಾನಂದ ಗಾಣಿಗ
    • ಎಚ್.‌ ಮಂಜುನಾಥ ಗಾಣಿಗ
    • ಮಂಜುನಾಥ ಎನ್.‌ ಗಾಣಿಗ

    ಯುವ ಮಾನಸ ಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟಬಲ್‌ ಟ್ರಸ್ಟ್‌ ಪದಾಧಿಕಾರಿಗಳು

    • ಸಂಸ್ಥಾಪಕ ಅಧ್ಯಕ್ಷ: ಎಚ್.‌ ಸುಬ್ಬಯ್ಯ ಗಾಣಿಗ, ಶಿವಮೊಗ್ಗ
    • ಜಂಟಿ ಅಧ್ಯಕ್ಷ: ಸುಭಾಷ್‌ ಶೆಟ್ಟಿ, ಭಟ್ಕಳ
    • ಜಂಟಿ ಅಧ್ಯಕ್ಷ: ಮಂಜುನಾಥ ಎನ್.‌ ಗಾಣಿಗ, ಗಂಗೊಳ್ಳಿ
    • ಖಜಾಂಚಿ: ಯು. ಅನಂತ ಗಾಣಿಗ
    • ಕಾರ್ಯದರ್ಶಿ: ಸುಧಾಕರ ನಾವುಂದ
    • ಜಂಟಿ ಕಾರ್ಯದರ್ಶಿ: ಸವಿತಾ

    ಸಂಬಂಧಿತ ಸುದ್ದಿ: ಕರಾವಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹೋದರ ಸೋಮಭಾಯಿ; 4 ದಿನಗಳ ಪ್ರವಾಸದ ಬಳಿಕ ಗುಜರಾತ್‌ಗೆ ನಿರ್ಗಮನ

    ಸಂಬಂಧಿತ ಸುದ್ದಿ: ಬಾರ್ಕೂರು ದೇವಳದಲ್ಲಿ ಸಂಭ್ರಮದ ದೀಪೋತ್ಸವ, ಹಾರಾಡಿ ರಾಮ ಗಾಣಿಗ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ..

    ಸಂಬಂಧಿತ ಸುದ್ದಿ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ವಿದ್ಯಾರ್ಥಿಗಳು

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!