Saturday, September 21, 2024
spot_img
More

    Latest Posts

    ಭಾರತದ ಬಲಾಢ್ಯ ಪುರುಷನ ಬಾಲರ್ಕಕ್ಕೀಗ ಮತ್ತೊಂದು ತಾಣ, ಮತ್ತಷ್ಟು ತ್ರಾಣ…

    ಬೆಂಗಳೂರು: ಭಾರತದ ಬಲಾಢ್ಯ ಪುರುಷ (ಸ್ಟ್ರಾಂಗ್‌ಮ್ಯಾನ್‌ ಆಫ್‌ ಇಂಡಿಯಾ) ಮನ್ನಣೆಗೆ ಪಾತ್ರರಾಗಿರುವ, ಅಂತಾರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟರ್‌ ವಿಶ್ವನಾಥ ಭಾಸ್ಕರ್‌ ಗಾಣಿಗ ಅವರ ಬಾಲರ್ಕ ಫಿಟ್‌ನೆಸ್‌ ಆ್ಯಂಡ್ ಫಿಸಿಯೋಥೆರಪಿ ಕೇಂದ್ರ ವಿಸ್ತಾರಗೊಂಡಿದ್ದು, ಫಿಸಿಯೋಥೆರಪಿಗೆಂದೇ ಮತ್ತೊಂದು ತಾಣ ಸಿಕ್ಕಿದೆ, ಮತ್ತಷ್ಟು ತ್ರಾಣವೂ ದಕ್ಕಿದೆ.

    ವಿಶ್ವನಾಥ ಭಾಸ್ಕರ್‌ ಗಾಣಿಗ ಹಾಗೂ ಡಾ.ರೇಣು ಅವರು ಜೊತೆಯಾಗಿ ಆರಂಭಿಸಿರುವ ಬಾಲರ್ಕ ಫಿಟ್‌ನೆಸ್‌ ಆ್ಯಂಡ್ ಫಿಸಿಯೋಥೆರಪಿ ಇದುವರೆಗೆ ಒಂದೇ ಸ್ಥಳದಲ್ಲಿ ಒಟ್ಟಿಗೇ ಕಾರ್ಯನಿರ್ವಹಿಸುತ್ತಿತ್ತು. ಆದರೆ ಇದೀಗ ಫಿಸಿಯೋಥೆರಪಿಗೇ ಪ್ರತ್ಯೇಕ ಸ್ಥಳವನ್ನು ಪಡೆಯಲಾಗಿದ್ದು, ಹೊಸದಾಗಿ ಫಿಸಿಯೋಥೆರಪಿ ಕೇಂದ್ರ ತೆರೆಯಲಾಗಿದೆ. ಡಿ. 9ರಂದು ನೂತನ ಫಿಸಿಯೋಥೆರಪಿ ಕೇಂದ್ರ ಗಣಹೋಮ ಮತ್ತಿತರ ಪೂಜೆಯೊಂದಿಗೆ ಶಾಸ್ತ್ರೋಕ್ತವಾಗಿ ಚಾಲನೆ ಪಡೆದಿದೆ.

    ಬಾಲರ್ಕ ಫಿಟ್‌ನೆಸ್‌ ಆ್ಯಂಡ್ ಫಿಸಿಯೋಥೆರಪಿಯ ಪೂಜೆಯಲ್ಲಿ ವಿಶ್ವನಾಥ ಭಾಸ್ಕರ ಗಾಣಿಗ ಮತ್ತು ಡಾ.ರೇಣು

    ಬೆಂಗಳೂರಿನ ಸೌತ್‌ ಎಂಡ್‌ ಸರ್ಕಲ್‌ ಬಳಿ ಇರುವ ಮೆಟ್ರೋ ಸ್ಟೇಷನ್‌ಗೆ ಪಕ್ಕದಲ್ಲೇ ಬಾಲರ್ಕ ಫಿಟ್‌ನೆಸ್‌ ಆ್ಯಂಡ್ ಫಿಸಿಯೋಥೆರಪಿ ಕೇಂದ್ರವಿದ್ದು, ಇಲ್ಲಿ ಆರೋಗ್ಯ ದೃಷ್ಟಿಯಿಂದ ಮತ್ತು ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಸಲುವಾಗಿ ದೇಹ ಹುರಿಗೊಳಿಸಿಕೊಳ್ಳುವವರಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ. ಅಲ್ಲದೆ ಫಿಟ್‌ನೆಸ್‌ಗೋಸ್ಕರ ದೇಹವನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಬಯಸುವವರಿಗೆ ಇಲ್ಲಿ ಫಿಟ್‌ನೆಸ್‌ ಟಿಪ್ಸ್‌ ಮತ್ತು ದೀರ್ಘಕಾಲದ ನೋವು ಇತ್ಯಾದಿ ದೈಹಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಫಿಸಿಯೋಥೆರಪಿ ಮೂಲಕ ಚಿಕಿತ್ಸೆಯನ್ನೂ ನೀಡಲಾಗುತ್ತದೆ. ಬಾಲರ್ಕ ಫಿಟ್‌ನೆಸ್‌ ಆ್ಯಂಡ್ ಫಿಸಿಯೋಥೆರಪಿ ಕುರಿತ ಹೆಚ್ಚಿನ ಮಾಹಿತಿ ಹಾಗೂ ಅಪಾಯಿಂಟ್‌ಮೆಂಟ್‌ಗೆ 9164526417 ಸಂಪರ್ಕಿಸಬಹುದು.

    ಬಾಲರ್ಕ ಫಿಟ್‌ನೆಸ್‌ ಆ್ಯಂಡ್ ಫಿಸಿಯೋಥೆರಪಿ ನೂತನ ಕೇಂದ್ರ ಉದ್ಘಾಟನೆಯ ಸಂತೋಷದ ಕ್ಷಣಗಳು

    ವಿಶ್ವನಾಥ ಭಾಸ್ಕರ ಗಾಣಿಗ ಕುರಿತ ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಸುದ್ದಿ ಓದಿ..

    ಸಂಬಂಧಿತ ಸುದ್ದಿ: ನಿಲುಗಡೆ-ಸಂಚಾರ ಸಮಸ್ಯೆ ಬಗ್ಗೆ ಪೊಲೀಸರ ಗಮನ ಸೆಳೆದ ಚಾಮರಾಜಪೇಟೆ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘ

    ಸಂಬಂಧಿತ ಸುದ್ದಿ: ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ-ಅಧ್ಯಕ್ಷರಾಗಿ ಮಂಜುನಾಥ-ನರಸಿಂಹ ಅವಿರೋಧ ಆಯ್ಕೆ

    ಸಂಬಂಧಿತ ಸುದ್ದಿ: ಮಹಾರಾಷ್ಟ್ರದ ಕ್ರಿಕೆಟ್ ಕ್ಷೇತ್ರದಲ್ಲಿ ‘ಯಶಸ್’ ಸಾಧಿಸುತ್ತಿರುವ ‘ಗಾಣಿಗ ಬ್ರಿಲಿಯಂಟ್’

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!