Sunday, September 22, 2024
spot_img
More

    Latest Posts

    ಜ.2ರಂದು ನಡೆಯಲಿದೆ ವಿಶ್ವ ಗಾಣಿಗ ಟ್ರೋಫಿ-2022

    ಬೆಂಗಳೂರು: ವಿಶ್ವ ಗಾಣಿಗರ ಚಾವಡಿ (ರಿ.) ಸೋಷಿಯಲ್ ಮೀಡಿಯಾ ತಂಡ ಹಮ್ಮಿಕೊಂಡಿರುವ ‘ವಿಶ್ವ ಗಾಣಿಗ ಟ್ರೋಫಿ-2022’ ಜನವರಿ 2ರಂದು ನಡೆಯಲಿದೆ. ಮಂಗಳೂರಿನ ಕೇಂದ್ರ ಮೈದಾನದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಇದರಲ್ಲಿ ಪುರುಷರಿಗಾಗಿ ನಿಗದಿತ ಓವರ್‌ಗಳ ಅಂಡರ್ ಆರ್ಮ್ ಲೆಗ್ ಸ್ಪಿನ್ ಶೈಲಿಯ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಪಂದ್ಯಾವಳಿ ಪ್ರಥಮ ಬಹುಮಾನ ವಿಜೇತ ತಂಡಕ್ಕೆ ವಿಶ್ವ ಗಾಣಿಗ ಟ್ರೋಫಿ ಜೊತೆಗೆ 15,555 ಹಾಗೂ ದ್ವಿತೀಯ ಬಹುಮಾನ ವಿಜೇತ ತಂಡಕ್ಕೆ ವಿಶ್ವ ಗಾಣಿಗ ಟ್ರೋಫಿ ಜೊತೆಗೆ 9,999 ರೂ. ನಗದು ಬಹುಮಾನ ನೀಡಲಾಗುವುದು. ಅಲ್ಲದೆ ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಪ್ರಶಸ್ತಿ ಕೂಡ ನೀಡಿ ಗೌರವಿಸಲಾಗುವುದು.

    ಇನ್ನು ಮಹಿಳೆಯರಿಗಾಗಿ ಲಗೋರಿ ಪಂದ್ಯಾವಳಿ ಆಯೋಜಿಸಲಾಗಿದೆ. ಇದರಲ್ಲಿ ಪ್ರಥಮ ಬಹುಮಾನ ವಿಜೇತ ತಂಡಕ್ಕೆ ವಿಶ್ವ ಗಾಣಿಗ ಟ್ರೋಫಿ ಜೊತೆಗೆ 4,444 ರೂ. ಹಾಗೂ ದ್ವಿತೀಯ ಬಹುಮಾನ ವಿಜೇತ ತಂಡಕ್ಕೆ ವಿಶ್ವ ಗಾಣಿಗ ಟ್ರೋಫಿ ಜೊತೆಗೆ 2,222 ರೂ. ನಗದು ಬಹುಮಾನ ನೀಡಲಾಗುತ್ತದೆ. ಇಲ್ಲಿಯೂ ಪಂದ್ಯ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಗುವುದು.  ಕ್ರಿಕೆಟ್ ಪಂದ್ಯಾವಳಿಗೆ ಪ್ರತಿ ತಂಡ 1,500 ರೂ. ಪ್ರವೇಶ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಲಗೋರಿ ಪಂದ್ಯಾವಳಿಗೆ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

    ಹೆಚ್ಚಿನ‌ ಮಾಹಿತಿಗೆ ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.

    • 8050663832
    • 9686687897
    • 7411159548
    • 9632341064

    ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವ ತಂಡಗಳು

    1. ಕರ್ಕೇರ ಬ್ರದರ್ಸ್‌ ಫರಂಗಿಪೇಟೆ
    2. ಕೀರ್ತಿ ಕಲಾವೃಂದ ಕೀರ್ತೇಶ್ವರ ಮಂಜೇಶ್ವರ
    3. ವೈದ್ಯನಾಥ ಗಾಣಿಗಾಸ್‌ ಅತ್ತಾವರ
    4. ಎಮ್‌ಪಿಸಿ ಬಜಿಲಕೇರಿ
    5. ಕೂಲ್‌ ಗೈಸ್‌ ಕೀರ್ತೇಶ್ವರ, ಮಂಜೇಶ್ವರ
    6. ಕೂಲ್‌ ಗೈಸ್‌ ಕೀರ್ತೇಶ್ವರ, ಮಂಜೇಶ್ವರ-ಬಿ
    7. ಶೀದುರ್ಗಾ ಕ್ರಿಕೆಟರ್ಸ್‌ ಪಾಣೆಮಂಗಳೂರು
    8. ಉಬಾರ್‌ ಗಾಣಿಗಾಸ್‌, ಉಬಾರ್
    9. ವೀರಾಂಜನೇಯ ಕ್ರಿಕೆಟರ್ಸ್‌ ತಲಪಾಡಿ
    10. ಟೀಮ್‌ ವಿಜಿಸಿ
    11. ಸಪಲಿಗ ಸ್ಟ್ರೈಕರ್ಸ್‌
    12. ಎಎಫ್‌ಸಿ ಮಂಜೇಶ್ವರ
    13. ಫ್ರೆಂಡ್ಸ್‌ ಜಕ್ರಿಬೆಟ್ಟು, ಬಂಟ್ವಾಳ
    14. ಸಪಲಿಗ ಬ್ರದರ್ಸ್‌, ಮುಂಡ್ಕೂರು
    15. ಬ್ರದರ್ಸ್‌ ಕುರ್ನಾಡ್‌
    16. ಶ್ರೀಕ್ಷೇತ್ರ ಒಡದಕರಿಯ ಗಾಣಿಗ ಕ್ರಿಕೆಟರ್ಸ್‌, ಬೆಳ್ತಂಗಡಿ
    17. ಯಂಗ್‌ ಬ್ರದರ್ಸ್‌ ಕುರಿಯಾಳ
    18. ಗಾಣಿಗ ಬ್ರದರ್ಸ್‌, ವಗ್ಗ
    19. ಆಂಜನೇಯ, ಕಣ್ವತೀರ್ಥ
    20. ಮಾರಿಯಮ್ಮ ಕ್ರಿಕೆಟರ್ಸ್‌, ಉರ್ವ
    21. ಮಳಲಿ ಗಾಣಿಗ ಸಂಘ, ಮಳಲಿ
    22. ಮಂಜನಾಡಿ ವಾರಿಯರ್ಸ್‌, ಮಂಜನಾಡಿ

    ಭಾನುವಾರ ಬೆಳಗ್ಗೆ 10 ಗಂಟೆಗೆ ಮಂಗಳೂರು ಕೇಂದ್ರ ಮೈದಾನದಲ್ಲಿ ಲಾರ್ಡ್ಸ್ ನಡೆಯಲಿದೆ. ಕೂಡಲೇ ಸಂಪೂರ್ಣ ಶುಲ್ಕ ಪಾವತಿಸಿ ತಂಡದ ಹೆಸರು ನೋಂದಾಯಿಸಿಕೊಳ್ಳಬೇಕು. ಎಲ್ಲ ಆಟಗಾರರು 2 ಡೋಸ್ ಲಸಿಕೆ ಪಡೆದಿರಬೇಕು. ನಿಮಗೆ ನೀಡಿರುವ ಪಿಡಿಎಫ್ ಪುಟದ ಪ್ರಿಂಟ್ ತೆಗೆದು ಎಲ್ಲ ಆಟಗಾರರ ಹೆಸರು, ಊರು, ಮೊಬೈಲ್‌ಫೋನ್‌ ಸಂಖ್ಯೆ ಮತ್ತು ಸಹಿ ಪಡೆದು ಲಾರ್ಡ್ಸ್ ದಿನ ಪ್ರತಿ ತಂಡದ ಆಟಗಾರರಲ್ಲಿ ಕನಿಷ್ಠ ಒಬ್ಬರು ಉಪಸ್ಥಿತರಿದ್ದು ಆಟಗಾರರ ವಿವರ ಹಾಗೂ ದಾಖಲೆಯನ್ನು ತೋರಿಸಿ ಅನುಮೋದನೆ ಪಡೆದುಕೊಳ್ಳಬೇಕು ಎಂಬುದಾಗಿ ಆಯೋಜಕರು ತಿಳಿಸಿದ್ದಾರೆ.

    ಸಂಬಂಧಿತ ಸುದ್ದಿ: ದೊಡ್ಮನೆ ಹುಡುಗ್ರಿಗೆ ಗಾಣಿಗ ಪ್ರೀಮಿಯರ್ ಕಪ್, ಕುಮಟಾ ಚಾಲೆಂಜರ್ಸ್‌ಗೆ ರನ್ನರ್ ಅಪ್

    ಸಂಬಂಧಿತ ಸುದ್ದಿ: ಭಳಿರೆ ‘ಬಾಲರ್ಕ’.. ಇದು ಬಲಾಢ್ಯ ಭಾರತೀಯನ ಗರಡಿ!

    ಸಂಬಂಧಿತ ಸುದ್ದಿ: ಮಹಾರಾಷ್ಟ್ರದ ಕ್ರಿಕೆಟ್ ಕ್ಷೇತ್ರದಲ್ಲಿ ‘ಯಶಸ್’ ಸಾಧಿಸುತ್ತಿರುವ ‘ಗಾಣಿಗ ಬ್ರಿಲಿಯಂಟ್’

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!