Saturday, September 21, 2024
spot_img
More

    Latest Posts

    ಪ್ರಧಾನಿ ಮೋದಿ ಕುರಿತೊಂದು ಕವನ, ಬರೆದರೀ ಸಜ್ಜನ…

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದೇಶಾದ್ಯಂತ ಅಸಂಖ್ಯಾತ ಜನರಿಗೆ ಅಭಿಮಾನವಿದೆ. ಅದರಲ್ಲೂ ಗಾಣಿಗ ಸಮಾಜದವರಿಗೆ ಅವರು ತಮ್ಮದೇ ಸಮುದಾಯದವರು ಎಂಬ ವಿಶೇಷ ಅಭಿಮಾನ. ಅಂಥದ್ದೊಂದು ಅಭಿಮಾನವನ್ನು ಇಲ್ಲೊಬ್ಬರು ಕವನದ ಮೂಲಕ ವ್ಯಕ್ತಪಡಿಸಿದ್ದಾರೆ.

    ಹೈದರಾಬಾದ್ ಮಲ್ಲರೆಡ್ಡಿ ಡೆಂಟಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಡಾ.ಪರಪ್ಪ ಸಜ್ಜನ ಅವರು ಈ ಕವನವನ್ನು ತಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನದಿಂದ ರಚಿಸಿದ್ದು, ಆ ಖುಷಿಯನ್ನು ಗ್ಲೋಬಲ್ ಗಾಣಿಗ.ಕಾಮ್ ಜೊತೆ ಹಂಚಿಕೊಂಡಿದ್ದಾರೆ.

    ಅಂದಹಾಗೆ ಇವರು ಈ ಹಿಂದೆ ಕರೊನಾ ಮೊದಲ ಅಲೆಯ ಸಂದರ್ಭದಲ್ಲಿ ಪ್ಲಾಸ್ಮಾ ದಾನ ಜಾಗೃತಿಗಾಗಿ ಕೂಡ ಗೀತೆಯೊಂದನ್ನು ರಚಿಸಿದ್ದರು. ಅದನ್ನು ಅಂದು ಸೈಬರಾಬಾದ್ ಪೊಲೀಸ್ ಕಮಿಷನರ್ ಆಗಿದ್ದ ವಿ.ಸಿ. ಸಜ್ಜನರ್ ಅವರು ತಮ್ಮ ಇಲಾಖೆ ಮೂಲಕ ಪ್ರಸ್ತುತ ಪಡಿಸಿ ಪ್ಲಾಸ್ಮಾ ದಾನ ಜಾಗೃತಿ ಮೂಡಿಸಿದ್ದರು.​

    ಡಾ.ಪರಪ್ಪ ಸಜ್ಜನ, ಪ್ರೊಫೆಸರ್​,ಮಲ್ಲರೆಡ್ಡಿ ಡೆಂಟಲ್ ಕಾಲೇಜ್, ಹೈದರಾಬಾದ್

    ಅಂದು ಆ ಗೀತೆಗೆ ‘ಬಾಹುಬಲಿ’ ಸಿನಿಮಾ ತಂಡದ ಎಂ.ಎಂ. ಕೀರವಾಣಿ ಹಾಗೂ ಶ್ರೀನಿಧಿ ತಿರುಮಲ ದನಿಯಾಗಿದ್ದರು. ಮಾತ್ರವಲ್ಲ ಶ್ರೀನಿಧಿ ತಿರುಮಲ ಆ ಗೀತೆಗೆ ಸಂಗೀತ ಸಂಯೋಜಿಸಿದ್ದು, ಅದನ್ನು ತೆಲಂಗಾಣ ಪೊಲೀಸ್ ಇಲಾಖೆ ಮೂಲಕ ಬಿಡುಗಡೆಗೊಳಿಸಿ, ಪ್ಲಾಸ್ಮಾ ದಾನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿತ್ತು.

    ಡಾ.ಪರಪ್ಪ ಸಜ್ಜನ ರಚಿತ ಕವನ ಇಂತಿದೆ…

    ಜಗವಾಳುವ ದೊರೆಯು ನೀನು
    ದಿನವಿಡಿ ಬೆಳಗುವ ಸೂರ್ಯನು ನೀನು.
    ಎಂದಿಗೂ ಬತ್ತದ ಸೆಲೆಯು ನೀನು
    ಸದಾ ನೆರಳಾಗಿ ನಿಲ್ಲುವ ಆಲದ ಮರವು ನೀನು
    ದಣಿವರಿಯದ ಕರ್ಮಯೋಗಿಯು ನೀನು
    ಶತಕೋಟಿ ಅಭಿಮಾನಿಗಳ ಹೃದಯದ ಕಂಪನ ನೀನು..

    ಸಂಕಷ್ಟಗಳ ಸರಮಾಲೆ ನಗುತಲೆ ಸಹಿಸುವೆ ನೀನು
    ಸ್ವಾರ್ಥದ ಜಂಜಾಟದಲಿ ನಿಸ್ವಾರ್ಥದ ಹೋರಾಟ ನೀನು
    ಭ್ರಷ್ಟತೆಯ ಕೂಪದಲಿ ಪ್ರಾಮಾಣಿಕತೆಯ ಕೂಗು ನೀನು
    ಬಸವಳಿದ ಬದುಕುಗಳು ನಮಿಸುತಿಹವು ನಿನಗಿಂದು
    ನೆಮ್ಮದಿಯ ಸೂರು ನಿನ್ನಿಂದಲೆಂದು
    ನಿನ್ನಿಂದಲೆ ರಾಮರಾಜ್ಯ ಈ ನಾಡು
    ಜೊತೆ ನೀನಿರಲು ಜಗವೆಂದೆಂದು ಜೇನುಗೂಡು

    ಶಾಂತಿಯ ದೂತನು ನೀನು
    ಬುದ್ಧನ ಪ್ರತಿರೂಪ ನೀನು
    ಸ್ವಚ್ಚತೆಯ ಹರಿಕಾರ ನೀನು
    ಮಹಾತ್ಮನ ಕನಸು ನೀನು
    ಘರ್ಜಿಸುವ ಸಿಂಹವು ನೀನು
    ಸ್ವಾಮಿ ವಿವೇಕಾನಂದರ ಧ್ವನಿಯು ನೀನು
    ಅಪರೂಪದ ಮಾಣಿಕ್ಯವು ನೀನು
    ಭಾರತಾಂಬೆಯ ಸಿರಿಯು ನೀನು

    ಯೋಗಸಂಸ್ಕೃತಿಯ ಕಲಿಸಿದೆ ಜಗಕೆ
    ಧರ್ಮದ ಪಾಠ ಬೋದಿಸಿದೆ ಜಗಕೆ
    ತಲೆಬಾಗಿಹದು ಜಗವು ನಿನ್ನ ಶರವೇಗಕೆ
    ಹಾತೊರುಯುತಿಹದು ನಿನ್ನ ಸ್ನೇಹಕೆ
    ಬೀಗುತಿಹಳು ಭಾರತಾಂಬೆ
    ನಿನ್ನ ಈ ಪ್ರೀತಿಯ ಅರಮನೆಯಲ್ಲಿ
    ಅಭಿಮಾನದ ದೇಗುಲದಲ್ಲಿ
    – ಡಾ.ಪರಪ್ಪ ಸಜ್ಜನ

    ಸಂಬಂಧಿತ ಸುದ್ದಿ: ಮೆಚ್ಚುಗೆ ಗಳಿಸಿದೆ ತೆಲಂಗಾಣದಲ್ಲಿರುವ ಈ ‘ಸಜ್ಜನರ’ ಸಜ್ಜನಿಕೆ…

    ಸಂಬಂಧಿತ ಸುದ್ದಿ: ಭಾರತದ ಬಲಾಢ್ಯ ಪುರುಷನ ಬಾಲರ್ಕಕ್ಕೀಗ ಮತ್ತೊಂದು ತಾಣ, ಮತ್ತಷ್ಟು ತ್ರಾಣ…

    ಸಂಬಂಧಿತ ಸುದ್ದಿ: ಕರಾವಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹೋದರ ಸೋಮಭಾಯಿ; 4 ದಿನಗಳ ಪ್ರವಾಸದ ಬಳಿಕ ಗುಜರಾತ್‌ಗೆ ನಿರ್ಗಮನ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!