Saturday, September 21, 2024
spot_img
More

    Latest Posts

    ಶ್ರೀದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ, ಬ್ರಹ್ಮ ನಾಗಮಂಡಲ

    ಬೆಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಬಜ್ಪೆ ಅದ್ಯಪಾಡಿ ಸಮೀಪದ ಬೀಬೀಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ 2023ರ ಫೆಬ್ರವರಿ 2ರಿಂದ 6ರ ತನಕ ಬ್ರಹ್ಮಕಲಶೋತ್ಸವ ಜರುಗಲಿದೆ.

    ಪೌರಾಣಿಕ ಇತಿಹಾಸ ಇರುವ ಈ ದೇವಸ್ಥಾನವು ಗಾಣಿಗ ಯಾನೆ ಸಫಲಿಗ ಸಮಾಜದ ಆಡಳಿತದಿಂದ ನಿರ್ವಹಣೆ ಆಗುತ್ತಿದೆ. ಹೀಗಾಗಿ ಮುಂದಿನ ವರ್ಷ ನಡೆಯಲಿರುವ ಉತ್ಸವ ಕುರಿತು ದೇವಸ್ಥಾನದ ಆಡಳಿತ ಮೊಕ್ತೇಸರ ಮೋನಪ್ಪ ಮೇಸ್ತ್ರಿ ಅವರ ಅಧ್ಯಕ್ಷತೆಯಲ್ಲಿ ಮಾ.13ರಂದು ಗಾಣಿಗ ಯಾನೆ ಸಫಲಿಗ ಸಮಾಜಬಾಂಧವರ ಪೂರ್ವಭಾವಿ ಸಮಾಲೋಚನಾ ಸಭೆ ನಡೆಯಿತು.

    ಈ ಸಭೆಯಲ್ಲಿ ಗುರುಪುರ-ಕೈಕಂಬದ ಸಫಲ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಸಂಜೀವ ಅಡ್ಯಾರ್, ನಿರ್ದೇಶಕರಾದ ಗೋಪಾಲಕೃಷ್ಣ, ಪಾವೂರು ಪಜೀರ್ ತರವಾಡು ಕುಟುಂಬದ ಗಾಣದ ಮನೆಯ  ಮುಖ್ಯಸ್ಥ ವಿವೇಕಾನಂದ ಸಫಲಿಗ, ಅಸೈಗೊಳಿ ಗಾಣಿಗ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್, ನಿಟ್ಟೆ ಇಂಜಿನಿಯರಿಂಗ್ ಕಾಲೇಜ್ ಪ್ರೊಫೆಸರ್  ಡಾ.ರವಿ ಕಂದಾವರ, ಮಿಜಾರ್-ಎಡಪದವು ಗಾಣಿಗರ ಯಾನೆ ಸಫಲಿಗ ಸೇವಾ ಸಂಘದ ಅಧ್ಯಕ್ಷ ಭಾಸ್ಕರ್ ಎಸ್. ಎಡಪದವು, ಉಪಾಧ್ಯಕ್ಷ ಸಂಜೀವ ಸಫಲಿಗ ಮಿಜಾರ್ ಮುಂತಾದವರು ಭಾಗವಹಿಸಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು.

    ಶ್ರೀಕ್ಷೇತ್ರದ ಇತಿಹಾಸದ ಪರಿಚಯವನ್ನು ರಾಜೇಶ್ ಬೀಬಿಲಚ್ಚಿಲ್ ಇವರು ಸಭೆಗೆ ಸಮಗ್ರವಾಗಿ ತಿಳಿಸಿದರು. ಸಫಲ ಸೌಹಾರ್ದ ಸಹಕಾರಿ ನಿಯಮಿತದ ನಿರ್ದೇಶಕ ವೆಂಕಟೇಶ್ ಕದ್ರಿ, ಸಲಹಾ ಸಮಿತಿ ಸದಸ್ಯ ಜಯರಾಮ ಅಡ್ಯಾರ್ ಕೂಡ ಉಪಸ್ಥಿತರಿದ್ದರು.

    ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಕ್ಷೇತ್ರದ ನಾಗ ದೇವತೆಗಳ ಸಂತೃಪ್ತಿಗಾಗಿ ಬ್ರಹ್ಮ ನಾಗಮಂಡಲವನ್ನೂ ನಡೆಸಲಾಗುವುದು. ಬ್ರಹ್ಮಕಲಶೋತ್ಸವ ಹಾಗೂ ಬ್ರಹ್ಮ ನಾಗಮಂಡಲಕ್ಕೆ ಸಮಾಜಬಾಂಧವರು ತನು ಮನ ಧನ ಸಹಾಯ ನೀಡಿ ಸಹಕರಿಸಬೇಕು ಎಂದು ಸಭಾಧ್ಯಕ್ಷರು ಹಾಗೂ ದೇವಸ್ಥಾನದ ಆಡಳಿತ ಮೊಕ್ತೇಸರ ಮೋನಪ್ಪ ಮೇಸ್ತ್ರಿ ಮನವಿ ಮಾಡಿಕೊಂಡರು.

    ಸಂಬಂಧಿತ ಸುದ್ದಿ: ಮಹಾರಾಷ್ಟ್ರದ ಕ್ರಿಕೆಟ್ ಕ್ಷೇತ್ರದಲ್ಲಿ ‘ಯಶಸ್’ ಸಾಧಿಸುತ್ತಿರುವ ‘ಗಾಣಿಗ ಬ್ರಿಲಿಯಂಟ್’

    ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ದೀಪವೈಭವ

    ಸಂಬಂಧಿತ ಸುದ್ದಿ: ಅನಾಥರಾಗಿದ್ದ ಕಮಲಜ್ಜಿಗೆ ಕೋಟ ಗಾಣಿಗ ಯುವಸಂಘಟನೆಯಿಂದ ಅಂತ್ಯಸಂಸ್ಕಾರ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!