Sunday, September 22, 2024
spot_img
More

    Latest Posts

    ನ್ಯಾಷನಲ್‌ ಪವರ್‌ಲಿಫ್ಟಿಂಗ್‌ನಲ್ಲಿ ವೈಯಕ್ತಿಕ ದಾಖಲೆ, ಚಿನ್ನದ ಪದಕದ ಜೊತೆಗೆ ಚಾಂಪಿಯನ್‌ ಆದ ವಿಶ್ವನಾಥ್‌

    ಬೆಂಗಳೂರು: ಭಾರತದ ಬಲಾಢ್ಯ ಪುರುಷ ಎಂಬ ಮನ್ನಣೆಗೆ ಪಾತ್ರರಾಗಿರುವ, ಅಂತಾರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟರ್‌ ವಿಶ್ವನಾಥ್‌ ಭಾಸ್ಕರ ಗಾಣಿಗ ಅವರು ಮಂಗಳೂರಿನಲ್ಲಿ ಏ. 29ರಂದು ನಡೆದ 47ನೇ ಸೀನಿಯರ್‌ ನ್ಯಾಷನಲ್‌ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ವೈಯಕ್ತಿಕ ದಾಖಲೆ ಮಾಡುವ ಜೊತೆಗೆ ಚಿನ್ನದ ಪದಕವನ್ನೂ ಗಳಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

    ಬೆಂಗಳೂರಿನ ಬಾಲಾರ್ಕ ಫಿಟ್‌ನೆಸ್‌ ಸಂಸ್ಥೆಯ ವಿಶ್ವನಾಥ್‌ ಭಾಸ್ಕರ್‌ ಗಾಣಿಗ ಅವರು ಕರ್ನಾಟಕ ಪವರ್‌ಲಿಫ್ಟಿಂಗ್‌ ಅಸೋಸಿಯೇಷನ್‌ ಸಹಯೋಗದಲ್ಲಿ ನಡೆದ ಈ ರಾಷ್ಟ್ರಮಟ್ಟದ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.

    ಇವರು ಸ್ಕ್ವಾಟ್‌ನಲ್ಲಿ 307.5 ಕೆ.ಜಿ., ಬೆಂಚ್ ಪ್ರೆಸ್‌ನಲ್ಲಿ 187.5 ಕೆ.ಜಿ.,  ಡೆಡ್ ಲಿಫ್ಟ್‌ನಲ್ಲಿ 336.5 ಕೆ.ಜಿ. ಹಾಗೂ  ಒಟ್ಟು 831.5 ಕೆ.ಜಿ. ಭಾರ ಎತ್ತಿ ವೈಯಕ್ತಿಕ ದಾಖಲೆ ಮಾಡಿ ಚಿನ್ನದ ಪದಕಕ್ಕೆ ಪಾತ್ರರಾಗಿದ್ದಾರೆ.

    ವಿಶೇಷವೆಂದರೆ ಇವರು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಸತತವಾಗಿ ಎರಡನೇ ಬಾರಿಗೆ ಸೀನಿಯರ್ ನ್ಯಾಷನಲ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ. ಇವರು ಮುಂದಿನ ಸಲವೂ ಚಿನ್ನದ ಪದಕವನ್ನು ಗಳಿಸುವ ಮೂಲಕ ಹ್ಯಾಟ್ರಿಕ್‌ ಸಾಧಿಸಲಿ ಎಂದು ಗ್ಲೋಬಲ್‌ ಗಾಣಿಗ.ಕಾಮ್‌ ಹಾರೈಸುತ್ತಿದೆ.

    ಬಾಲಾರ್ಕ ಫಿಟ್‌ನೆಸ್‌ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿರುವ ವಿಶ್ವನಾಥ್‌, ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದ ಬಾಳಿಕೆರೆಯ ಪದ್ಮಾವತಿ ಹಾಗೂ ಭಾಸ್ಕರ್ ಗಾಣಿಗ ದಂಪತಿಯ ಪುತ್ರ.

    ಸಂಬಂಧಿತ ಸುದ್ದಿ: ಭಳಿರೆ ‘ಬಾಲರ್ಕ’.. ಇದು ಬಲಾಢ್ಯ ಭಾರತೀಯನ ಗರಡಿ!

    ಸಂಬಂಧಿತ ಸುದ್ದಿ: ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವನಾಥ್‌ಗೆ ಮತ್ತೆ 3 ಚಿನ್ನದ ಪದಕ

    ಸಂಬಂಧಿತ ಸುದ್ದಿ: ಭಾರತದ ಬಲಾಢ್ಯ ಪುರುಷನ ಬಾಲರ್ಕಕ್ಕೀಗ ಮತ್ತೊಂದು ತಾಣ, ಮತ್ತಷ್ಟು ತ್ರಾಣ…

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!