Friday, May 17, 2024
spot_img
More

    Latest Posts

    ʼಪರಿಶುದ್ಧʼ ಗಾಣದ ಎಣ್ಣೆಯ ಮಳಿಗೆ ಉದ್ಘಾಟನೆ

    ಬೆಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಬಿಜೈ ಕಾಪಿಕಾಡ್ ಬಳಿಯ ಪಿಂಟೋ ಚೇಂಬರ್ಸ್ ಕಟ್ಟಡದಲ್ಲಿ ʼಪರಿಶುದ್ಧʼ ಗಾಣದ ಎಣ್ಣೆಯ ಮಳಿಗೆ ಉದ್ಘಾಟನೆಗೊಂಡಿದೆ.

    ʼಪರಿಶುದ್ಧʼ ಸಂಸ್ಥೆಯ ಈ ಮಳಿಗೆಯನ್ನು ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಅವರು ಉದ್ಘಾಟಿಸಿದರು. ಸಂಸ್ಥೆಯು ಹೆಸರಿಗೆ ತಕ್ಕಂತೆ ಶುದ್ಧ ಹಾಗೂ ಆರೋಗ್ಯಕರ ಗಾಣದ ಎಣ್ಣೆಯನ್ನು ಗ್ರಾಹಕರಿಗೆ ನೀಡಲಿ. ಸಾಂಪ್ರದಾಯಿಕ ಗಾಣದ ಪರಂಪರೆ ಉಳಿಸಲು ನೆರವಾದ ಈ ಸಂಸ್ಥೆ ಉತ್ತರೋತ್ತರ ಅಭಿವೃದ್ದಿ ಹೊಂದಲಿ ಎಂದು ಶುಭ ಹಾರೈಸಿದರು.

    ಮುಖ್ಯಅತಿಥಿಯಾಗಿ ಆಗಮಿಸಿದ್ದ ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಅವರು, ರಾಜಾ ವಿಕ್ರಾಮಾದಿತ್ಯ ಶನಿದೇವರ ಅವಕೃಪೆಗೆ ಒಳಗಾದ ಸಂದರ್ಭದಲ್ಲಿ ಗಾಣದ ಕಾಯಕ ಮಾಡಿದ್ದನ್ನು ನೆನಪಿಸಿ ಶುಭ ಹಾರೈಸಿದರು. ಶುದ್ಧ ಗಾಣದ ಎಣ್ಣೆಯ ಈ ಮಳಿಗೆ ಪರಿಶುದ್ಧ ಉತ್ಪನ್ನಗಳನ್ನೇ ನೀಡಲಿ ಎಂದು ಆಶಿಸಿದರು.

    ಗಾಣಿಗ ಸಮಾಜದವರೇ ಆಗಿರುವ, ಮೆಕ್ಯಾನಿಕಲ್‌ ಇಂಜಿನಿಯರ್‌ ಶಿಶಿರ್‌ ಹಾಗೂ ಸಾಗರ್‌ ಅವರ ಪಾಲುದಾರಿಕೆಯಲ್ಲಿ ಈ ಪರಿಶುದ್ಧ ಗಾಣದ ಎಣ್ಣೆಯ ಸಂಸ್ಥೆ ಸ್ಥಾಪನೆಗೊಂಡಿದೆ.

    ಉದ್ಘಾಟನಾ ಸಮಾರಂಭದಲ್ಲಿ ಕಟೀಲ್ ಗಾಣಿಗ ಸಂಘದ ಅಧ್ಯಕ್ಷ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಿಂಗಪ್ಪ ಶೇರಿಗಾರ್, ಮಿಜಾರ್ – ಎಡಪದವು ಗಾಣಿಗರ ಸಂಘದ ಅಧ್ಯಕ್ಷ ಭಾಸ್ಕರ್ ಎಸ್. ಎಡಪದವು, ಕಟೀಲ್ ಸ್ಟುಡಿಯೋ ಮಾಲೀಕ ನವೀನ್ ಕುಮಾರ್, ಮುರಳಿ ಹಾಗೂ ಶಿಶಿರ ಮತ್ತು ಸಾಗರ್ ಅವರ ಮಾತಾ-ಪಿತರ ಜೊತೆಗೆ ಬಂಧು-ಬಳಗ, ಅಭಿಮಾನಿ ವರ್ಗದವರು ಉಪಸ್ಥಿತರಿದ್ದರು.

    ಸಂಬಂಧಿತ ಸುದ್ದಿ: ಗಾಣದ ಪರಂಪರೆ ಉಳಿಸಲು ಹೀಗೊಂದು ಸಂಪ್ರದಾಯ…

    ಸಂಬಂಧಿತ ಸುದ್ದಿ: ಪುರಾಣಪ್ರಸಿದ್ಧ ಗೋಕರ್ಣದಲ್ಲಿ ಗಾಣಿಗರಿಂದ ನಡೆಯಿತು ಕಾರ್ತಿಕ ಮಾಸದ ಪ್ರಥಮ ಪೂಜೆ

    ಸಂಬಂಧಿತ ಸುದ್ದಿ: ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!