Friday, May 17, 2024
spot_img
More

    Latest Posts

    ಹಳ್ಳಿಮನೆ ಫುಡ್ ಪ್ರಾಡಕ್ಟ್; ಮನೆಗೇ ತಲುಪಿಸಲಿದೆ ಇಂಡಿಯಾ ಪೋಸ್ಟ್!

    ಬೆಂಗಳೂರು‌‌: ಹೋಟೆಲ್ ಜೊತೆಗೆ ದೋಸೆ ಹಿಟ್ಟು, ಇಡ್ಲಿ ಹಿಟ್ಟು, ಉಪ್ಪಿಟ್ಟು ಮುಂತಾದ ಇನ್‌ಸ್ಟಂಟ್‌ ಮಿಕ್ಸ್‌ ಆಹಾರ ಉತ್ಪನ್ನಗಳಿಗೂ  ಹೆಸರಾಗಿರುವ ʼಹಳ್ಳಿಮನೆʼ, ಇದೀಗ ಆ ಉತ್ಪನ್ನಗಳನ್ನು ಪೋಸ್ಟ್ ಮೂಲಕವೂ ಮನೆಮನೆಗೆ ತಲುಪಿಸಲಿದೆ. ಅಂದರೆ ಭಾರತೀಯ ಅಂಚೆ ಇಲಾಖೆಯ ಹೊಸ ಸಾಹಸಕ್ಕೆ ʼಹಳ್ಳಿಮನೆʼ ಕೈಜೋಡಿಸಿದ್ದು, ಇದಕ್ಕಾಗಿ ಇಂಡಿಯಾ ಪೋಸ್ಟ್ ಮತ್ತು ಹಳ್ಳಿಮನೆ ಮಧ್ಯೆ ಒಪ್ಪಂದ ಏರ್ಪಟ್ಟಿದೆ.

    ಭಾರತೀಯ ಅಂಚೆ ಇಲಾಖೆ ಹೊಸದಾಗಿ ಇನ್ನೊಂದು ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಇದು ನಿಗದಿತ ಆಹಾರ ಉತ್ಪನ್ನಗಳನ್ನು ಅಂಚೆ ಮೂಲಕ ಮನೆಮನೆಗೆ ತಲುಪಿಸುವ ಪ್ರಯತ್ನವನ್ನು ರಾಜಧಾನಿ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದೆ. ಇದು ಸೋಮವಾರದಿಂದ ಕಾರ್ಯಾರಂಭಗೊಂಡಿದೆ.

    ʼಬೆಂಗಳೂರಿನಾದ್ಯಂತ ಆಹಾರ ಉತ್ಪನ್ನಗಳನ್ನು ಮನೆಮನೆಗೆ ತಲುಪಿಸುವ ಸಲುವಾಗಿ ಜನಪ್ರಿಯ ಬ್ರ್ಯಾಂಡ್‌ ಆಗಿರುವ ಹಳ್ಳಿಮನೆ ಗ್ರೂಪ್‌ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆರಂಭದ ದಿನವಾದ ಸೋಮವಾರವೇ ದೋಸೆ ಹಿಟ್ಟು, ಇನ್‌ಸ್ಟಂಟ್‌ ಮಿಕ್ಸ್‌ ಸೇರಿ ಒಟ್ಟು 22 ಪಾರ್ಸೆಲ್‌ ಬುಕ್‌ ಆಗಿತ್ತುʼ ಎಂಬುದಾಗಿ ಭಾರತೀಯ ಅಂಚೆ ಇಲಾಖೆ ಕರ್ನಾಟಕ ವೃತ್ತದ ಚೀಫ್‌ ಪೋಸ್ಟ್‌ ಮಾಸ್ಟರ್‌ ಜನರಲ್‌ (ಸಿಪಿಎಂಜಿ) ಎಸ್.ರಾಜೇಂದ್ರ ಕುಮಾರ್‌ ಅವರು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯಿಸಿದ್ದಾರೆ.

    ಬುಕ್‌ ಮಾಡಿದ ದಿನವೇ ಇದನ್ನು ತಲುಪಿಸಲಾಗುತ್ತಿದೆ. ಸದ್ಯ ಅಂಚೆ ಸಿಬ್ಬಂದಿಯೇ ಈ ಕೆಲಸವನ್ನು ಮಾಡುತ್ತಿದ್ದಾರೆ. ಇದನ್ನು ಈಗ ಸಣ್ಣ ಪ್ರಮಾಣದಲ್ಲಿ ಆರಂಭಿಸಲಾಗಿದೆ. ಈ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿ ಜನರಿಂದ ಹೆಚ್ಚಿನ ಬೇಡಿಕೆ ಬಂದಲ್ಲಿ ದೊಡ್ಡ ಮಟ್ಟದಲ್ಲಿ ಮಾಡುವ ಯೋಚನೆ ಇದೆ ಎಂದು ಅವರು ತಿಳಿಸಿದ್ದಾರೆ.

    ನಮ್ಮ ಈ ಯೋಜನೆಯಲ್ಲಿ ದೋಸೆ ಹಿಟ್ಟು, ಇಡ್ಲಿ ಹಿಟ್ಟು, ಖಾರಾಬಾತ್‌, ಕೇಸರಿ ಬಾತ್‌, ಬಿಸಿಬೇಳೆಬಾತ್‌ಗಳ ಇನ್‌ಸ್ಟಂಟ್‌ ಮಿಕ್ಸ್‌ನಂಥ ಆಹಾರ ಉತ್ಪನ್ನಗಳನ್ನು ಮಾತ್ರ ಮನೆಮನೆಗೆ ತಲುಪಿಸುತ್ತಿದ್ದೇವೆ. ಹೀಗಾಗಿ ಇದು ಸ್ವಿಗ್ಗಿ-ಜೊಮ್ಯಾಟೋದಂಥ ಡೆಲಿವರಿಗೆ ಪ್ರತಿಸ್ಪರ್ಧಿಯಲ್ಲ. ನಾವು ತಿಂಡಿ-ತಿನಿಸು ತಯಾರಿಸಲು ಸಿದ್ಧ ಇರುವ ಉತ್ಪನ್ನಗಳನ್ನಷ್ಟೇ ಬಟವಾಡೆ ಮಾಡುತ್ತಿದ್ದೇವೆ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.

    ಜನರಿಂದ ಒಳ್ಳೆಯ ಪ್ರತಿಕ್ರಿಯೆ ಬಂದು, ತಯಾರಕರಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗಳು ಟೆಟ್ರಾಪ್ಯಾಕ್‌ ಮೂಲಕ ಸಿಗುವಂತಾದರೆ ನಾವು ಈ ಯೋಜನೆಯನ್ನು ಕರ್ನಾಟಕದಾದ್ಯಂತ ಮಾತ್ರವಲ್ಲದೆ ಬೇರೆ ರಾಜ್ಯಗಳಿಗೂ ತಲುಪಿಸುವ ವ್ಯವಸ್ಥೆ ಮಾಡಲಿದ್ದೇವೆ ಎಂದು ರಾಜೇಂದ್ರ ಕುಮಾರ್‌ ತಿಳಿಸಿದ್ದಾರೆ.

    ಎರಡು ದಶಕದ ಹಳ್ಳಿಮನೆ

    ಹಳ್ಳಿಮನೆ ಆರಂಭವಾಗಿ ಇಪ್ಪತ್ತು ವರ್ಷಗಳಾಗಿದ್ದು, ಹೋಟೆಲ್‌ ಹಾಗೂ ಆಹಾರೋದ್ಯಮದಲ್ಲಿ ಜನಪ್ರಿಯತೆ ಪಡೆದಿದ್ದು, ಗುಣಮಟ್ಟಕ್ಕೂ ಹೆಸರಾಗಿದೆ. ಅಂಚೆ ಇಲಾಖೆ ಜೊತೆಗಿನ ಈ ಒಪ್ಪಂದದಿಂದ ʼಹಳ್ಳಿಮನೆʼಯ ನಿಯಮಿತ ಗ್ರಾಹಕರಿಗೆ ಇನ್ನು ಅವರ ನೆಚ್ಚಿನ ಉತ್ಪನ್ನಗಳು ಪೋಸ್ಟ್‌ ಮೂಲಕ ಮನೆ ಬಾಗಿಲಿಗೇ ಬಂದು ಬಿಡಲಿವೆ.

    ಬುಕಿಂಗ್‌ ಮತ್ತು ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9880833199

    ಬುಕಿಂಗ್‌ಗೆ ಸಂಪರ್ಕಿಸಬೇಕಾದ ಲಿಂಕ್:‌ https://order.hallimane.com/

    ಸಂಬಂಧಿತ ಸುದ್ದಿ: ಹೆಸರಾಂತ ಹಳ್ಳಿಮನೆ ಈಗ ಚಿನ್ನದೂರಿನ ಹೆದ್ದಾರಿಯಲ್ಲೂ..

    ಸಂಬಂಧಿತ ಸುದ್ದಿ: ‘ಸೌತ್ ತಿಂಡೀಸ್‌’ನಲ್ಲಿ ದಕ್ಷಿಣದ ಸೂರ್ಯ, ಸಾಮ್ರಾಟ್ ಅಶೋಕ..!

    ಸಂಬಂಧಿತ ಸುದ್ದಿ: ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!