Saturday, September 21, 2024
spot_img
More

    Latest Posts

    ರಾಜ್ಯ ದಸರಾ ಕ್ರೀಡಾಕೂಟದಲ್ಲಿ ಅವಳಿ ಸಹೋದರಿಯರಿಗೆ ಎರಡು ಚಿನ್ನದ ಪದಕ

    ಬೆಂಗಳೂರು: ಗಾಣಿಗ ಸಮಾಜದ ಪ್ರತಿಭಾನ್ವಿತ ಹಾಗೂ ಕ್ರೀಡಾಕ್ಷೇತ್ರದಲ್ಲಿ ಈಗಾಗಲೇ ಛಾಪು ಮೂಡಿಸಿ ಹೊಸ ಭರವಸೆ ಮೂಡಿಸಿರುವ ಅವಳಿ ಸಹೋದರಿಯರಾದ ಅವ್ನಿ ಎನ್‌. ಮುಡಿಪು ಮತ್ತು ಅನ್ಶಿ ಎನ್. ಮುಡಿಪು ಮತ್ತೊಂದು ಸಾಧನೆ ಮಾಡುವ ಮೂಲಕ ಇನ್ನೊಮ್ಮೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಮೈಸೂರಿನಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ನಡೆದ ದಸರಾ ಕ್ರೀಡಾಕೂಟದಲ್ಲಿ “ಮುಖ್ಯಮಂತ್ರಿ ಕಪ್-2022”ರಲ್ಲಿ ದಕ್ಷಿಣಕನ್ನಡ ಜಿಲ್ಲೆಯ ವುಶು ಸಂಸ್ಥೆಯನ್ನು ಪ್ರತಿನಿಧಿಸಿದ ಅವ್ನಿ-ಅನ್ಶಿ ಎರಡು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ವುಶು ಸ್ಯಾಂಡೋ ಫೈಟ್‌ 48 ಕೆ.ಜಿ. ವಿಭಾಗದಲ್ಲಿ ಅವ್ನಿ ಚಿನ್ನದ ಪದಕ ಗಳಿಸಿದ್ದರೆ, 52 ಕೆ.ಜಿ. ವಿಭಾಗದಲ್ಲಿ ಅನ್ಶಿ ಚಿನ್ನದ ಪದಕ ಗಳಿಸಿದ್ದಾರೆ.

    ಅವಳಿ ಸಹೋದರಿಯರಾದ ಅವ್ನಿ-ಅನ್ಶಿ

    ಇವರು ಎಂಆರ್‌ಪಿಎಲ್‌ ಉದ್ಯೋಗಿ ನಿರಂಜನ್ ಮುಡಿಪು ಮತ್ತು ಸ್ವರ್ಣ ದಂಪತಿಯ ಅವಳಿ ಪುತ್ರಿಯರು. ಈ ಕ್ರೀಡಾಪಟುಗಳು ವುಶು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ಇನ್‌ಸ್ಟಿಟ್ಯೂಟ್‌ ಆಫ್ ಕರಾಟೆ ಆ್ಯಂಡ್  ಮಾರ್ಷಲ್ ಆರ್ಟ್ಸ್ ಇದರ ಮುಖ್ಯ ತರಬೇತುದಾರರಾದ ನಿತಿನ್ ಎನ್. ಸುವರ್ಣ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

    ಸಂಬಂಧಿತ ಸುದ್ದಿ: ರಾಷ್ಟ್ರಮಟ್ಟದ ವುಶು ಸ್ಪರ್ಧೆಯಲ್ಲಿ 2 ಪದಕಗಳನ್ನು ಗೆದ್ದ ಅವ್ನಿ-ಅನ್ಶಿ

    ಸಂಬಂಧಿತ ಸುದ್ದಿ: ಕರಾಟೆಯಲ್ಲಿ ಸುಂಟರಗಾಳಿ ಎಬ್ಬಿಸಿದ ಶಶಾಂಕ್​; ಟೊರ್ನಡೊ ಕಿಕ್​ನಲ್ಲಿ ನೊಬೆಲ್ ವರ್ಲ್ಡ್​ ರೆಕಾರ್ಡ್

    ಸಂಬಂಧಿತ ಸುದ್ದಿ:ಮಹಾರಾಷ್ಟ್ರದ ಕ್ರಿಕೆಟ್ ಕ್ಷೇತ್ರದಲ್ಲಿ ‘ಯಶಸ್’ ಸಾಧಿಸುತ್ತಿರುವ ‘ಗಾಣಿಗ ಬ್ರಿಲಿಯಂಟ್’

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!