Friday, May 17, 2024
spot_img
More

    Latest Posts

    ಈ ಸಲದ ಚುನಾವಣಾ ಫಲಿತಾಂಶವನ್ನೇ ಬದಲಿಸುವ ಶಕ್ತಿ ಇವರಿಗಿದೆ!; ಯಾರಿವರು?

    ಬೆಂಗಳೂರು: ಈ ಸಲದ ಚುನಾವಣೆಯಲ್ಲಿ ಇಂಥ ಪಕ್ಷದವರೇ ಗೆದ್ದು ಅಧಿಕಾರಕ್ಕೆ ಬರುತ್ತಾರೆ ಎಂದು ಈಗಾಗಲೇ ಕೆಲವು ಸಮೀಕ್ಷೆಗಳು ಭವಿಷ್ಯವನ್ನೇ ಹೇಳಿಬಿಟ್ಟಿವೆ. ಆದರೆ ಈ ಎಲ್ಲವನ್ನೂ ತಲೆಕೆಳಗಾಗಿಸುವಂತೆ ಮಾಡುವ, ಈ ಸಲದ ಚುನಾವಣಾ ಫಲಿತಾಂಶವನ್ನೇ ಬದಲಿಸಿಬಿಡುವಂಥ ಶಕ್ತಿ ಇರುವವರೂ ಇದ್ದಾರೆ ಎಂದರೆ ನೀವೊಮ್ಮೆ ಅಚ್ಚರಿಪಡಬಹುದು.

    ಹೌದು.. ಈ ಸಲದ ಚುನಾವಣಾ ಫಲಿತಾಂಶವನ್ನೇ ಬದಲಿಸಿಬಿಡುವಂಥ ಶಕ್ತಿ ಇವರಿಗಿದೆ. ಇವರು ಯಾವುದೇ ಪಕ್ಷಕ್ಕೆ ಸೇರಿರುವವರಲ್ಲ. ಒಂದು ಕಾಲದಲ್ಲಿ ಯಾವುದಾದರೂ ಪಕ್ಷಕ್ಕೆ ಸೇರಿದ್ದರೂ ʼಎಲ್ಲರೂ ಒಂದೇ, ಯಾರ್‌ ಗೆದ್ರೂ ಅಷ್ಟೇʼ ಎಂದುಕೊಂಡು ರಾಜಕೀಯದ ಸಹವಾಸವೇ ಬೇಡ ಎಂದು ಸುಮ್ಮನಾದವರು ಇವರು. ಅದಾಗ್ಯೂ ಈ ಸಲ ಇವರು ಮನಸು ಮಾಡಿದರೆ ಚುನಾವಣೆಯ ಫಲಿತಾಂಶವನ್ನೇ ಬದಲಿಸಿಬಿಡಬಹುದು. ಅಂದಹಾಗೆ ಇವರು ಬೇರಾರೂ ಅಲ್ಲ, ಮತ ಚಲಾಯಿಸದೇ ಸುಮ್ಮನಿರುವವರು. ರಾಜ್ಯದಲ್ಲಿ ಇಂಥವರ ಪ್ರಮಾಣವೇ ಸುಮಾರು ಶೇ. 25ರಷ್ಟಿದೆ.

    ಕರ್ನಾಟಕದ ಕಳೆದ ವಿಧಾನಸಭಾ ಚುನಾವಣೆ ಅಂದರೆ 2018ರಲ್ಲಿ ಇಂಥವರ ಪ್ರಮಾಣ ಶೇ. 26.4 ಇತ್ತು. ಅಂದರೆ ಆ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪ್ರಮಾಣ ಶೇ. 73.4. ರಾಜ್ಯದ ಚುನಾವಣಾ ಇತಿಹಾಸದಲ್ಲಿ ಇದುವರೆಗೆ ಶೇ. 75ಕ್ಕಿಂತ ಹೆಚ್ಚು ಮತ ಚಲಾವಣೆಯಾಗಿಲ್ಲ. 1952ರಲ್ಲಿ ಮಾತ್ರ ಒಮ್ಮೆ ಶೇ. 77 ಮತ ಚಲಾವಣೆ ಆಗಿತ್ತು. ಅಂದರೆ ಪ್ರತಿ ಚುನಾವಣೆಯಲ್ಲೂ ಸುಮಾರು ಶೇ. 25ರಷ್ಟು ಮಂದಿ ಮತ ಚಲಾಯಿಸದೇ ಸುಮ್ಮನಿರುತ್ತಾರೆ.

    ಸಂಬಂಧಿತ ಸುದ್ದಿ: ಕರ್ನಾಟಕ ಚುನಾವಣೆ: ಕಣದಲ್ಲಿರುವ ಗಾಣಿಗ ಅಭ್ಯರ್ಥಿಗಳ ವಿವರ ಇಲ್ಲಿದೆ..

    ʼಯಾರ್‌ ಗೆದ್ರೂ ಅಷ್ಟೇʼ ಎಂಬ ನಿರಾಸಕ್ತಿಯಿಂದ ಪ್ರತಿ ಸಲ ಮತ ಚಲಾಯಿಸದೇ ಸುಮ್ಮನಿರುವವರು ಹಾಗೂ ಪ್ರತಿ ಸಲ ಅದೇ ಮೊದಲ ಸಲ ಮತ ಚಲಾಯಿಸುವ ಯುವಕ-ಯುವತಿಯರಿಗೆ ಚುನಾವಣೆಯ ಫಲಿತಾಂಶವನ್ನೇ ಬದಲಿಸಿಬಿಡುವಂಥ ಶಕ್ತಿ ಇರುತ್ತದೆ. ಈ ಸಲ ರಾಜ್ಯದಲ್ಲಿ 5.31 ಕೋಟಿ ಮತದಾರರಿದ್ದು, ಆ ಪೈಕಿ 11.71 ಲಕ್ಷ ಮಂದಿ ಯುವ ಮತದಾರರು. ಅಂದರೆ ಇವರು ಇದೇ ಮೊದಲ ಸಲ ಮತ ಚಲಾಯಿಸಲಿರುವ ತಾಜಾ ಮತದಾರರು.

    ಸಂಬಂಧಿತ ಸುದ್ದಿ: ʼಆ ಇಬ್ರಿಗೂ ದೇವ್ರು ಒಳ್ಳೇದ್‌ ಮಾಡ್ಲಿʼ ಎಂದು ರಾಜಕೀಯ ನಿವೃತ್ತಿ ಘೋಷಿಸಿದ್ರು ಮಾಜಿ ಶಾಸಕಿ!

    ‘ಯಾರ್ ಗೆದ್ರೂ ಅಷ್ಟೇ’ ಅಂತ ವೋಟ್ ಹಾಕದೆ ಸುಮ್ಮನಿರುವವರು ಮತ್ತು ಇದೇ ಮೊದಲ ಸಲ ಮತ ಚಲಾಯಿಸಲಿರುವ ಯುವಪೀಳಿಗೆ.. ಈ ಎರಡೂ ವರ್ಗದವರು ಪೂರ್ಣಪ್ರಮಾಣದಲ್ಲಿ ಸರಿಯಾಗಿ ಮತ ಚಲಾಯಿಸಿದರೆ ಈ ಚುನಾವಣೆಯ ಫಲಿತಾಂಶವನ್ನೇ ಬದಲಿಸಬಲ್ಲರು. 2018ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನೇ ಉದಾಹರಣೆಯಾಗಿ ಇರಿಸಿಕೊಂಡು ಇದನ್ನು ಹೀಗೆ ವಿಶ್ಲೇಷಿಸಬಹುದು.

    2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಾದ ಒಟ್ಟು ಮತ ಚಲಾಣೆ ಶೇ.73.4.

    ಆ ಪೈಕಿ..

    ಬಿಜೆಪಿ ಗಳಿಸಿದ ಮತ: ಶೇ.36.2

    ಕಾಂಗ್ರೆಸ್ ಗಳಿಸಿದ ಮತ: ಶೇ.39

    ಜೆಡಿಎಸ್ ಗಳಿಸಿದ ಮತ: ಶೇ. 18.3

    ಈ ಸಲದ ಒಟ್ಟು ಮತದಾರರು: 5.31 ಕೋಟಿ.

    ಕಳೆದ ವರ್ಷ ಆದಷ್ಟೇ ಮತದಾನ ಈ ಸಲ ಆಗುತ್ತೆ ಅಂದರೂ ಈ ಸಲದ ಮತದಾನ: ಶೇ.73.4

    ಮತ ಚಲಾಯಿಸದವರ ಪ್ರಮಾಣ: 26.6

    ಇದೇ ಮೊದಲ ಸಲ ಮತ ಹಾಕಲಿರುವವರ ಸಂಖ್ಯೆ: 11 ಲಕ್ಷ (ಅಂದಾಜು ಶೇ. 2+)

    ಸಾಮಾನ್ಯವಾಗಿ ಮತ ಚಲಾಯಿಸದವರು+ ತಾಜಾ ಮತದಾರರು ‘ಸರಿಯಾಗಿ’ ಮತ ಚಲಾಯಿಸಿದರೆ ಆಗುವ ವಿಶೇಷ ಮತದಾನ: 26.6+2= ಶೇ.29

    ಅಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ದೊಡ್ಡ ಪಕ್ಷವಾಗಿದ್ದ ಜೆಡಿಎಸ್ ಗಳಿಸಿದ್ದಕ್ಕಿಂತಲೂ ಅಧಿಕ ಮತ ಬರೀ ಈ ಎರಡೂ ವರ್ಗಗಳಿಂದ ಚಲಾವಣೆ ಆಗುತ್ತದೆ. ಒಂದು ವೇಳೆ ನೀವೂ ಇವರಲ್ಲಿ ಒಬ್ಬರಾಗಿದ್ದರೆ, ನಿಮಗೆ ಈ  ಸಲದ ಚುನಾವಣಾ ಫಲಿತಾಂಶವನ್ನೇ ಬದಲಿಸಿಬಿಡುವ ಶಕ್ತಿ ಇದೆ. ದಯವಿಟ್ಟು ತಪ್ಪದೇ ಹೋಗಿ ಮತ ಚಲಾಯಿಸಿ.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ‌ ಸ್ಥಾಪನೆ; ಕೊನೆಗೂ ಈಡೇರಿತು ಬಹುಕಾಲದ ಪ್ರಾರ್ಥನೆ

    ಸಂಬಂಧಿತ ಸುದ್ದಿ: ಬಾರ್ಕೂರು ದೇವಸ್ಥಾನದಲ್ಲಿ ಅದ್ಧೂರಿ ಆಗಿ ನಡೆಯಿತು ಸಾಮೂಹಿಕ ಉಪನಯನ-ಮೂಗುತಿಧಾರಣೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!