Friday, May 17, 2024
spot_img
More

    Latest Posts

    ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿ

    ಬೆಂಗಳೂರು: ಡಾ.ಎಂ.ಆರ್. ದುರ್ಗಾಪ್ರಸಾದ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮಂಗಳೂರಿನ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆ 2022-2023ನೇ ಸಾಲಿನ ರಾಜ್ಯ ಮಟ್ಟದ ಕಾಯಕಲ್ಪ ಪ್ರಶಸ್ತಿಗೆ ಅರ್ಹತೆ ಪಡೆದು ದ್ವಿತೀಯ ಪ್ರಶಸ್ತಿ ಗಳಿಸಿದೆ. ಇದು ಆಸ್ಪತ್ರೆಯ ಎಲ್ಲರ ಪ್ರಾಮಾಣಿಕ ಸೇವೆಗೆ ಸಂದ ಗೌರವ ಎಂದು ಲೇಡಿಗೋಷನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎಂ.ಆರ್. ದುರ್ಗಾಪ್ರಸಾದ್ ಸಂತಸ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಪ್ರಶಸ್ತಿಯಲ್ಲಿ ಸಿಗುವ 20 ಲಕ್ಷ ರೂಪಾಯಿಯನ್ನು ಆಸ್ಪತ್ರೆಯ ಅಭಿವೃದ್ಧಿಗೆ ಬಳಸಲಾಗುವುದು ಎಂದಿದ್ದಾರೆ.

    ಯಾರಿವರು ಡಾ.ದುರ್ಗಾಪ್ರಸಾದ್?

    ಡಾ.ಎಂ.ಆರ್.ದುರ್ಗಾಪ್ರಸಾದ್ ಮಂಗಳೂರು ತಾಲೂಕಿನ ತೆಂಕ ಎಡಪದವು ಗ್ರಾಮದ ದಿವಂಗತ ಎಂ. ರಾಮ ಮಾಸ್ಟರ್ ಹಾಗೂ ಅಪ್ಪಿ ಟೀಚರ್ ಅವರ ದ್ವಿತೀಯ ಪುತ್ರ. ಇವರು ವೈದ್ಯಕೀಯ ಕ್ಷೇತ್ರದಲ್ಲಿ ಸುಮಾರು 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿಗೆ ಅನ್ವರ್ಥ ಎಂಬಂತೆ ಇವರನ್ನು ರೋಗಿಗಳ, ಬಡವರ, ಗರ್ಭಿಣಿಯರ, ಮಹಿಳೆಯರ ಹಾಗೂ ಮಕ್ಕಳ ಪಾಲಿನ ದೇವರು ಎಂದರೆ ಅತಿಶಯೋಕ್ತಿಯಲ್ಲ ಎನ್ನಲಾಗುತ್ತಿದೆ.

    ದಾಖಲೆ ಸಂಖ್ಯೆಯ ಶಸ್ತ್ರಚಿಕಿತ್ಸೆ: ದಕ್ಷಿಣಕನ್ನಡ ಜಿಲ್ಲೆಯಲ್ಲಿ ದಾಖಲೆ ಸಂಖ್ಯೆಯಲ್ಲಿ ಅಂದರೆ ಒಂದು ಲಕ್ಷಕ್ಕಿಂತಲೂ ಹೆಚ್ಚು ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಮಾಡಿದ ಏಕಮಾತ್ರ ವೈದ್ಯರು ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. ಬಂಟ್ವಾಳ ತಾಲೂಕಿನ ವಾಮದಪದವಿನ ಕಮ್ಯುನಿಟಿ ಹೆಲ್ತ್ ಸೆಂಟರ್ನಲ್ಲಿ ಸುಮಾರು 18 ವರ್ಷಗಳ ಕಾಲ ನಿರಂತರವಾಗಿ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದಾರೆ.

    ಹಲವು ಪ್ರಶಸ್ತಿಗಳು: ನಾಗರಿಕ ಸೇವಾ ಪ್ರಶಸ್ತಿ, ಗಣರಾಜ್ಯೋತ್ಸವ ಪ್ರಶಸ್ತಿ, ಸರ್ವೋತ್ತಮ ಪ್ರಶಸ್ತಿ, ಸ್ವಸ್ತಿಶ್ರೀ ಪ್ರಶಸ್ತಿ, ಉತ್ತಮ ವೈದ್ಯಕೀಯ ಅಧೀಕ್ಷಕರು ಎಂದು ಮುಖ್ಯಮಂತ್ರಿಗಳಿಂದ ದೊರೆತ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಇವರು ಪಾತ್ರರಾಗಿದ್ದಾರೆ. ಅನೇಕ ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿ ಪ್ರಶಸ್ತಿ ನೀಡಿವೆ.

    ಆಸ್ಪತ್ರೆಗೆ ಹೊಸ ಇಮೇಜ್: ಲೇಡಿಗೋಷನ್ ಆಸ್ಪತ್ರೆ ಎಂದರೆ ಅದು ಬಡವರ ಆಸ್ಪತ್ರೆ, ಅದು ಸರ್ಕಾರಿ ಆಸ್ಪತ್ರೆ ಎಂಬ ತಿರಸ್ಕಾರ ಭಾವನೆ ಒಂದು ಕಾಲದಲ್ಲಿತ್ತು. ಈಗ ಈ ಆಸ್ಪತ್ರೆ ಬರೀ ಬಡವರ ಆಸ್ಪತ್ರೆಯಲ್ಲ, ಸಮಾಜದ ಎಲ್ಲ ವರ್ಗದ ಜನರು ಇಲ್ಲಿಗೆ ಬರುತ್ತಾರೆ. ಮುಖ್ಯವಾಗಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ಮನೆಯವರು, ಶ್ರೀಮಂತರೂ ಬರುತ್ತಿದ್ದಾರೆ. ಕಾರಣ ಆಸ್ಪತ್ರೆಯ ವಾತಾವರಣ ಸಂಪೂರ್ಣ ಬದಲಾಗಿರುವುದು. ಖಾಸಗಿ ಆಸ್ಪತ್ರೆಗಳಿಗಿಂತ ಉತ್ತಮ ಸೇವೆ, ಶುಚಿತ್ವ, ಉತ್ತಮ ವೈದ್ಯರು , ದಾದಿಗಳು , ಸಿಬ್ಬಂದಿ ವರ್ಗ, ವೈದ್ಯಕೀಯ ಉಪಕರಣಗಳು, ಅಧೀಕ್ಷಕರ ಉತ್ತಮ ಸ್ಪಂದನೆ ಇಲ್ಲಿನ ರೋಗಿಗಳಿಗೆ ಸಿಗುತ್ತಿದೆ.

    ಮತ್ತಷ್ಟು ಉನ್ನತಿ: ಆಸ್ಪತ್ರೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಅಧೀಕ್ಷಕರು ತುಂಬಾ ಶ್ರಮ ಪಡುತ್ತಿದ್ದಾರೆ. ಅನೇಕ ಸಂಘ-ಸಂಸ್ಥೆಗಳು ಇವರ ಕನಸುಗಳಿಗೆ ಕೈ ಜೋಡಿಸಿವೆ. ಆಸ್ಪತ್ರೆಗೆ ಹೊಸ ಕಾಯಕಲ್ಪ ಒದಗಿಸುವ ಸಂದರ್ಭದಲ್ಲಿ ರಾಜ್ಯಮಟ್ಟದ ಕಾಯಕಲ್ಪ ಪ್ರಶಸ್ತಿ ಬಂದಿರುವುದು ನಿಜಕ್ಕೂ ಅಭಿನಂದನೀಯ. ಉತ್ತಮ ನಾಯಕತ್ವವೂ ಇದಕ್ಕೆ ಮುಖ್ಯ ಕಾರಣ. ಡಾ. ದುರ್ಗಾಪ್ರಸಾದ್ ನೇತೃತ್ವದಲ್ಲಿ ಮಂಗಳೂರು ಲೇಡಿಗೋಷನ್ ಸರ್ಕಾರಿ ಆಸ್ಪತ್ರೆಗೆ ಇನ್ನೂ ಉನ್ನತಮಟ್ಟದ ಪ್ರಶಸ್ತಿಗಳು ಲಭಿಸಲಿ ಎಂದು ಗ್ಲೋಬಲ್ ಗಾಣಿಗ.ಕಾಂ ಹಾರೈಸುತ್ತಿದೆ.

    ಗಾಣಿಗ ಸಮಾಜದ ಹಿನ್ನೆಲೆ: ಡಾ.ದುರ್ಗಾಪ್ರಸಾದ್ ಅವರ ತಂದೆ ಎಂ. ರಾಮ ಮಾಸ್ಟರ್ ಸುಮಾರು 20 ವರ್ಷಗಳ ಕಾಲ ಮಿಜಾರು – ಎಡಪದವು ಗಾಣಿಗರ ಯಾನೆ ಸಪಲಿಗ ಸಂಘದ ಅಧ್ಯಕ್ಷರಾಗಿ ಸಮಾಜದ ಒಗ್ಗಟ್ಟಿಗೆ ಏಳ್ಗೆಗೆ ಶ್ರಮಿಸಿದ್ದರು.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ: ರಾಜ್ಯಮಟ್ಟದ ಸೀನಿಯರ್​ ಪವರ್​ಲಿಫ್ಟಿಂಗ್ ಚಾಂಪಿಯನ್‌ಷಿಪ್: ಬಾಲಾರ್ಕದ ವಿಶ್ವನಾಥ್​ಗೆ ಚಿನ್ನದ ಪದಕ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!