Sunday, September 22, 2024
spot_img
More

    Latest Posts

    ನಾಳೆ ಏಕಕಾಲಕ್ಕೆ ಮೂರು ತಾಲೂಕುಗಳ ಗಾಣಿಗ ಸಂಘ ಉದ್ಘಾಟನೆ

    ಬೆಂಗಳೂರು: ರಾಜ್ಯದಲ್ಲಿ ಗಾಣಿಗ ಸಮುದಾಯದ ಸಂಘಟನೆ ಚುರುಕುಗೊಂಡಿದ್ದು, ಒಂದರ ಹಿಂದೊಂದರಂತೆ ಗಾಣಿಗ ಸಂಘಗಳು ಉದ್ಘಾಟನೆ ಆಗಲಾರಂಭಿಸಿವೆ. ಅದರಲ್ಲೂ ನಾಳೆ ಏಕಕಾಲಕ್ಕೆ ಮೂರು ತಾಲೂಕುಗಳ ಗಾಣಿಗ ಸಂಘಗಳು ಉದ್ಘಾಟನೆ ಆಗಲಿವೆ.

    ವಿಜಯಪುರ ಜಿಲ್ಲೆಯ ಕೊಲ್ಹಾರ, ಬಸವನ ಬಾಗೇವಾಡಿ ಮತ್ತು ನಿಡಗುಂದಿ ತಾಲೂಕುಗಳಲ್ಲಿ ಹೊಸದಾಗಿ ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಸ್ಥಾಪನೆ ಆಗಿದ್ದು, ಮೂರೂ ಸಂಘಗಳು ನಾಳೆ ಒಂದೇ ಸಮಯಕ್ಕೆ ಒಂದೇ ವೇದಿಕೆಯಲ್ಲಿ ಉದ್ಘಾಟನೆ ಆಗಲಿವೆ.

    ಅಕ್ಟೋಬರ್ 23ರ ಶನಿವಾರ ಕೊಲ್ಹಾರದ ವಿಶ್ವಭಾರತಿ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಈ ಮೂರು ತಾಲೂಕು ಸಂಘಗಳ ಉದ್ಘಾಟನೆ ಜೊತೆಯಾಗಿ ನೆರವೇರಲಿದೆ ಎಂದು ಕೊಲ್ಹಾರ ತಾಲೂಕು ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಎನ್. ಗಿಡ್ಡಪ್ಪಗೋಳ ತಿಳಿಸಿದ್ದಾರೆ.

    ಸಂಬಂಧಿತ ಸುದ್ದಿ: ಆದಿಕವಿ‌ ಪಂಪನ‌ ಜನ್ಮಸ್ಥಳದಲ್ಲಿ ಸ್ಥಾಪನೆಯಾಯಿತು ನೂತನ ಗಾಣಿಗ ಸಂಘ

    ನೂತನ ಸಂಘಗಳ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಮಾಜದ ಗಣ್ಯರಿಗೆ ಸನ್ಮಾನ ಸಮಾರಂಭಗಳು ಕೂಡ ಇದೇ ಸಂದರ್ಭದಲ್ಲಿ ನೆರವೇರಲಿವೆ.

    ವಿಜಯಪುರದ ವನಶ್ರೀ ಗಾಣಿಗ ಗುರುಪೀಠದ ಡಾ. ಜಯಬಸವಕುಮಾರ ಸ್ವಾಮೀಜಿ ಈ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ. ಕೊಲ್ಹಾರ ಶ್ರೀದಿಗಂಬರೇಶ್ವರ ಸಂಸ್ಥಾನಮಠದ ಶ್ರೀಕಲ್ಲಿನಾಥ ಸ್ವಾಮೀಜಿ ಅವರ ಸಾನ್ನಿಧ್ಯವೂ ಇರುವ ಈ ಕಾರ್ಯಕ್ರಮವನ್ನು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಉದ್ಘಾಟಿಸಲಿದ್ದಾರೆ.

    ಸಂಬಂಧಿತ ಸುದ್ದಿ: ಕರ್ನಾಟಕ-ಕೇರಳ ಗಡಿಭಾಗದ ಕಾಸರಗೋಡಿನಲ್ಲೂ ಅಸ್ತಿತ್ವಕ್ಕೆ ಬಂತೊಂದು ಗಾಣಿಗ ಸಂಘಟನೆ

    ಹುಬ್ಬಳ್ಳಿಯ ಅಖಿಲ ಭಾರತ ಗಾಣಿಗ ಸಂಘದ ಅಧ್ಯಕ್ಷ ಗುರಣ್ಣ ಗೋಡಿ ಗೌರವ ಉಪಸ್ಥಿತಿ ಇರಲಿದ್ದು, ಕೊಲ್ಹಾರ ತಾಲೂಕು ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಎನ್. ಗಿಡ್ಡಪ್ಪಗೋಳ ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ಲದೆ ರಾಜ್ಯದ ವಿವಿಧೆಡೆಯ ಗಾಣಿಗ ಸಂಘಟನೆಗಳ ಪದಾಧಿಕಾರಿಗಳು ಹಾಜರಿರಲಿದ್ದಾರೆ.

    ಸಂಬಂಧಿತ ಸುದ್ದಿ: ಶ್ರೀಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್‌ ಟ್ರಸ್ಟ್‌ ಸೇವೆ 12 ಜಿಲ್ಲೆಗಳಿಗೆ ವಿಸ್ತರಣೆ

    ಸಂಬಂಧಿತ ಸುದ್ದಿ: ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಗಾಣಿಗರೇ ನಿರ್ಣಾಯಕ; ರಮೇಶ ಭೂಸನೂರ ಗೆಲ್ಲುವ ಸಾಧ್ಯತೆ ಅತ್ಯಧಿಕ

    ಸಂಬಂಧಿತ ಸುದ್ದಿ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ವಿದ್ಯಾರ್ಥಿಗಳು

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!