Saturday, September 21, 2024
spot_img
More

    Latest Posts

    ಪವರ್‌ಲಿಫ್ಟರ್‌ ಆಗಬೇಕೆನ್ನುವವರಿಗೆ ಇಲ್ಲಿದೆ ಭಾರತದ ಬಲಿಷ್ಠ ಪುರುಷನಿಂದಲೇ ತರಬೇತಿ!

    ಬೆಂಗಳೂರು: ಯಾವುದರ ಬಗ್ಗೆಯಾದರೂ ತರಬೇತಿ ಸಾಮಾನ್ಯವಾಗಿ ಎಲ್ಲೆಂದರಲ್ಲಿ ಸಿಗಬಹುದು. ಆದರೆ ಎಷ್ಟೋ ಸಲ ತರಬೇತಿ ಎಲ್ಲಿ ಪಡೆದಿದ್ದೇವೆ ಎನ್ನುವುದಕ್ಕಿಂತ ಯಾರಿಂದ ತರಬೇತಿ ಪಡೆದಿದ್ದೇವೆ ಎನ್ನುವುದೇ ಮುಖ್ಯವಾಗುತ್ತದೆ. ಕಲಿಸುವ ಗುರು ಅತ್ಯಂತ ಪರಿಣತರಾಗಿದ್ದಾಗ ಅಂಥವರಿಂದ ಕಲಿತ ವಿದ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಅದೇ ರೀತಿ ಇದೀಗ ಪವರ್‌ಲಿಫ್ಟರ್‌ ಆಗಬೇಕು ಎಂದುಕೊಂಡಿರುವವರಿಗೂ ಅಂಥ ಒಂದು ಅತ್ಯುತ್ತಮ ಅವಕಾಶವಿದೆ.

    ಅಂತಾರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟರ್‌, ಕಾಮನ್‌ವೆಲ್ತ್‌ ಗೇಮ್ಸ್‌ ಪವರ್‌ಲಿಫ್ಟಿಂಗ್‌ ಚಾಂಪಿಯನ್‌, ಪವರ್‌ಲಿಫ್ಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ದಾಖಲೆ ಮಾಡಿರುವ ಮತ್ತು ಭಾರತದ ಬಲಿಷ್ಠ ಪುರುಷ (ಜೆರಾಯ್‌ ಸ್ಟ್ರಾಂಗ್‌ಮ್ಯಾನ್‌ ಆಫ್‌ ಇಂಡಿಯಾ) ಎಂದೆನಿಸಿಕೊಂಡಿರುವ ವಿಶ್ವನಾಥ್‌ ಭಾಸ್ಕರ ಗಾಣಿಗ ಅವರು ಇದೀಗ ತಮ್ಮಂತೆ ಇತರರನ್ನು ಪ್ರೊಫೆಷನಲ್‌ ಪವರ್‌ಲಿಫ್ಟರ್‌ ಆಗಿಸಲು ಮುಂದಾಗಿದ್ದಾರೆ. ಆ ನಿಟ್ಟಿನಲ್ಲಿ ಆಸಕ್ತರಿಗೆ ತರಬೇತಿ ಕೂಡ ಕೊಡುತ್ತಿದ್ದಾರೆ. ಪ್ರೊಫೆಷನಲ್‌ ಪವರ್‌ಲಿಫ್ಟಿಂಗ್‌ ಮಾತ್ರವಲ್ಲದೆ ಫಿಟ್‌ನೆಸ್‌ ಆಸಕ್ತರಿಗೂ ಫಿಟ್‌ನೆಸ್‌ ತರಬೇತಿ ಕೂಡ ನೀಡುತ್ತಿದ್ದಾರೆ.

    ಅಂತಾರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟರ್‌ ವಿಶ್ವನಾಥ್‌ ಭಾಸ್ಕರ ಗಾಣಿಗ

    ಸಂಬಂಧಿತ ಸುದ್ದಿ: ಭಳಿರೆ ‘ಬಾಲರ್ಕ’.. ಇದು ಬಲಾಢ್ಯ ಭಾರತೀಯನ ಗರಡಿ!

    ಬೆಂಗಳೂರಿನ ಸೌತ್‌ಎಂಡ್‌ ವೃತ್ತದ ಬಳಿ ಇರುವ ಮೆಟ್ರೋ ಸ್ಟೇಷನ್‌ ಸಮೀಪದ ಬಾಲಾರ್ಕ ಫಿಟ್‌ನೆಸ್‌ ಸೆಂಟರ್‌ನಲ್ಲಿ ಅವರು ಪವರ್‌ಲಿಫ್ಟಿಂಗ್‌ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಅದರ ಪ್ರಾಥಮಿಕ ಹಂತವಾಗಿ ಅವರು ಆನ್‌ಲೈನ್‌ನಲ್ಲೂ ಪವರ್‌ಲಿಫ್ಟಿಂಗ್‌ ತರಬೇತಿ ನೀಡುತ್ತಿದ್ದು, ಶೇ.50 ರಿಯಾಯಿತಿ ದರದಲ್ಲಿ ಈ ಕ್ಲಾಸ್‌ ನಡೆಸಲಾಗುತ್ತಿದೆ.

    ಸಂಬಂಧಿತ ಸುದ್ದಿ: ಟೀಮ್‌ ಚಾಂಪಿಯನ್‌ಷಿಪ್‌ನಲ್ಲಿ ಮಿಲಿಯನೇರ್ ಕಂಚಿನ ಪದಕ ಗಳಿಸಿದ‌ ವಿಶ್ವನಾಥ್

    ಇನ್ನೂ ಹೆಚ್ಚಿನ ತರಬೇತಿ ಬಯಸುವವರು ಆಫ್‌ಲೈನ್‌ನಲ್ಲೂ ಬಾಲಾರ್ಕದಲ್ಲಿ ತರಬೇತಿ ಪಡೆಯಬಹುದು. ಆಸಕ್ತರಿಗೆ ಅವರವರ ಆಯ್ಕೆ-ಅನುಕೂಲಕ್ಕೆ ತಕ್ಕಂತೆ ವಿವಿಧ ಪ್ಯಾಕೇಜ್‌ಗಳೂ ಇಲ್ಲಿ ಲಭ್ಯ ಇವೆ. ಪವರ್‌ಲಿಫ್ಟಿಂಗ್‌ ತರಬೇತಿ ಪಡೆಯ ಬಯಸುವ ಆಸಕ್ತರು ಈ ಕೆಳಗಿನ ಲಿಂಕ್‌ ಮೂಲಕ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದು. ನೋಂದಾಯಿಸಿಕೊಂಡವರಿಗೆ ಬಾಲಾರ್ಕದಿಂದಲೇ ಕರೆ ಮಾಡಿ ಸಂಪರ್ಕಿಸುತ್ತಾರೆ.

    ನೋಂದಣಿಗೆ ಈ ಲಿಂಕ್‌ ಬಳಸಿ: https://forms.gle/4kpNmvPPVSpcvC4H6

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ‌ ಸ್ಥಾಪನೆ; ಕೊನೆಗೂ ಈಡೇರಿತು ಬಹುಕಾಲದ ಪ್ರಾರ್ಥನೆ

    ಸಂಬಂಧಿತ ಸುದ್ದಿ: ಗಾಣಿಗ ನಿಗಮ ಸ್ಥಾಪನೆ: ಸಮುದಾಯದ ಸಂಘ-ಸಂಸ್ಥೆಗಳಿಂದ ಸಂಭ್ರಮಾಚರಣೆ, ಸಿಎಂಗೆ ಅಭಿನಂದನೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!