Friday, May 17, 2024
spot_img
More
    Home Blog Page 73

    ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷರಾಗಿ ಸೀತಾರಾಮ ಗಾಣಿಗ ಆಯ್ಕೆ

    0

    ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ತೋಟಗಾರಿಕೆ ಉತ್ಪನ್ನ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣಾ ಸಂಘ (ಹಾಪ್ ಕಾಮ್ಸ್ ) ಮಂಗಳೂರು ಇದರ ಅಧ್ಯಕ್ಷರಾಗಿ ಕುಂದಾಪುರ ತಾಲೂಕು ಗಾಣಿಗ ಸಂಘದ ಸದಸ್ಯರಾದ ಶ್ರೀ ಸೀತಾರಾಮ ಗಾಣಿಗ ಹಾಲಾಡಿ ಆಯ್ಕೆ ಆಗಿರುತ್ತಾರೆ. ಮುಂದಿನ ಐದು ವರ್ಷಗಳ ಕಾಲ ಇವರು ಹಾಪ್ ಕಾಮ್ಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

    ಭಾರತೀಯ ಕಿಸಾನ್ ಸಂಘ ಬೆಂಬಲಿತ ರೈತ ಪ್ರತಿನಿಧಿಗಳಾದ ಸೀತಾರಾಮ ಗಾಣಿಗರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಹಾಪ್ ಕಾಮ್ಸ್ ನೂತನ ಅಧ್ಯಕ್ಷರಾಗಿ ಹಾಗೂ ಶ್ರೀಮತಿ ವಿನಯಾ ರಾನಡೆಯವರು ಉಪಾಧ್ಯಕ್ಷರಾಗಿ 11 – 5 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ.

    ಭಾರತೀಯ ಕಿಸಾನ್ ಸಂಘ ಉಡುಪಿ ಜಿಲ್ಲಾ ಸಮಿತಿ ಇಬ್ಬರಿಗೂ ಅಭಿನಂದನೆ ಸಲ್ಲಿಸಿದೆ. ಸೀತಾರಾಮ ಗಾಣಿಗರ ಅಧಿಕಾರಾವಧಿಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಹಾಪ್ ಕಾಮ್ಸ್ ಉತ್ತಮ ಅಭಿವೃದ್ಧಿ ಕಾಣಲಿ ಎಂದು ‘ಗ್ಲೋಬಲ್ ಗಾಣಿಗ’ ಶುಭ ಹಾರೈಸುತ್ತಿದೆ.

    ಗಾಣಿಗ ಜನಾಂಗದ ವಿದ್ಯಾರ್ಥಿಗಳಿಗೆ ಇಲ್ಲಿದೆ ವಿದ್ಯಾರ್ಥಿ ನಿಲಯ

    0

    ಬೆಂಗಳೂರು: ಗಾಣಿಗ ಜನಾಂಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ಜ್ಯೋತಿಫಣ ಗಾಣಿಗರ ಸಂಘವು ವಿದ್ಯಾರ್ಥಿ ನಿಲಯ ಸೌಲಭ್ಯ ಬಯಸುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

    2020-21ನೇ ಸಾಲಿನ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಗಾಣಿಗ ಜನಾಂಗದ ವಿದ್ಯಾರ್ಥಿಗಳು ಇದಕ್ಕೆ ಅರ್ಹರಿದ್ದು, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬಹುದು. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ರಾಜ್ಯ ಜ್ಯೋತಿಫಣ ಗಾಣಿಗರ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು.

    ಸಂಪರ್ಕಿಸಬಹುದಾದ ಸಂಖ್ಯೆಗಳು

    • ಕೆ.ಸಿ. ಶಂಕರ್ ಪ್ರಸಾದ್, ರಾಜ್ಯ ಪ್ರಧಾನ ಕಾರ್ಯದರ್ಶಿ, 9448446920
    • ಟಿ.ಡಿ. ಪ್ರಕಾಶ್, ಜಂಟಿ ಕಾರ್ಯದರ್ಶಿ, 9341011509, 8050549232
    • ಕೃಷ್ಣಪ್ಪ, ನಿರ್ದೇಶಕ, 9844918312
    error: Content is protected !!