Saturday, September 21, 2024
spot_img
More

    Latest Posts

    ರಾಷ್ಟ್ರಮಟ್ಟದಲ್ಲಿ ಚಿನ್ನ-ಬೆಳ್ಳಿ ಪದಕಗಳನ್ನು ಗೆದ್ದ ದಿಶಾ-ದೇವಿಕಾ

    ಬೆಂಗಳೂರು: ಪಂಜಾಬ್‌ನ ಪಟಿಯಾಲದಲ್ಲಿ ಜೂ. 16ರಿಂದ ಜೂ.21ರ ವರೆಗೆ ನಡೆದ ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಎರಡು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ಗಳಿಸಿದೆ. ಬೆಂಗಳೂರಿನ ಬಾಲಾರ್ಕ ಫಿಟ್‌ನೆಸ್‌ ಸೆಂಟರ್‌ನ ಪವರ್‌ಲಿಫ್ಟರ್ಸ್‌ ದೇವಿಕಾ ದೇಸಾಯಿ ಮತ್ತು ದಿಶಾ ಮೋಹನ್‌ ಈ ಸಾಧನೆ ಮಾಡಿದ್ದಾರೆ. ಇವರಿಬ್ಬರೂ ಅಂತಾರಾಷ್ಟ್ರೀಯ ಪವರ್ ಲಿಫ್ಟರ್ , ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಶ್ವನಾಥ್ ಭಾಸ್ಕರ್ ಗಾಣಿಗ ಅವರಿಂದ ಬಾಲಾರ್ಕ ಫಿಟ್‌ನೆಸ್‌ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

    ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ದೇವಿಕಾ ದೇಸಾಯಿ 84+ ಕೆ.ಜಿ. ಸಬ್ ಜೂನಿಯರ್‌ ವಿಭಾಗದ ಸ್ಕ್ವಾಟ್‌ನಲ್ಲಿ ಬೆಳ್ಳಿ ಪದಕ , ಡೆಡ್ ಲಿಫ್ಟ್‌ನಲ್ಲಿ ಚಿನ್ನ ಹಾಗೂ ಪವರ್ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

    ಕೋಚ್‌ ವಿಶ್ವನಾಥ ಭಾಸ್ಕರ್‌ ಗಾಣಿಗ ಅವರ ಜೊತೆ ಪದಕ ವಿಜೇತ ದಿಶಾ ಮೋಹನ್‌ ಹಾಗೂ ದೇವಿಕಾ ದೇಸಾಯಿ.

    ಹಾಗೆಯೇ  ಜೂನ್ 6ರಿಂದ 9ರ ವರೆಗೆ ರಾಜಸ್ಥಾನದ ಗಂಗಾನಗರ್ ನಡೆದ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಡೆಡ್ ಲಿಫ್ಟ್‌ನಲ್ಲಿ ಚಿನ್ನ ಹಾಗೂ ಪವರ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಪಡೆದಿರುತ್ತಾರೆ.

    ಪಟಿಯಾಲದಲ್ಲಿ ನಡೆದ ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬಾಲಾರ್ಕ ಫಿಟ್‌ನೆಸ್‌ ಸೆಂಟರ್‌ನ ದಿಶಾ ಮೋಹನ್ 57 ಕೆ.ಜಿ. ಸಬ್ ಜೂನಿಯರ್‌ ವಿಭಾಗದ ಬೆಂಚ್ ಪ್ರೆಸ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದಿರುತ್ತಾರೆ. ಜೊತೆಗೆ, ರಾಜಸ್ಥಾನದ ಗಂಗಾನಗರ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿರುತ್ತಾರೆ.

    ಸಂಬಂಧಿತ ಸುದ್ದಿ: ರಾಷ್ಟ್ರೀಯ ಪವರ್‌ಲಿಫ್ಟಿಂಗ್‌ ಸ್ಪರ್ಧೆಗೆ ಬಾಲಾರ್ಕ ಫಿಟ್‌ನೆಸ್‌ನ ಇಬ್ಬರು ಆಯ್ಕೆ

    ಸಂಬಂಧಿತ ಸುದ್ದಿ: ರಾಜ್ಯಮಟ್ಟದ ಸೀನಿಯರ್​ ಪವರ್​ಲಿಫ್ಟಿಂಗ್ ಚಾಂಪಿಯನ್‌ಷಿಪ್: ಬಾಲಾರ್ಕದ ವಿಶ್ವನಾಥ್​ಗೆ ಚಿನ್ನದ ಪದಕ

    ಸಂಬಂಧಿತ ಸುದ್ದಿ: ಭಳಿರೆ ‘ಬಾಲರ್ಕ’.. ಇದು ಬಲಾಢ್ಯ ಭಾರತೀಯನ ಗರಡಿ!

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!