Friday, May 17, 2024
spot_img
More
    Home Blog Page 2

    ಉಳಿಯ ಶ್ರೀ ಧರ್ಮರಸರ ಕ್ಷೇತ್ರಕ್ಕೆ ಗಾಣಿಗ ಸಮಾಜದಿಂದ 64 ಸಾವಿರ ರೂ. ದೇಣಿಗೆ

    0

    ಬೆಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲದ ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಬ್ರಹ್ಮಕಲಶೋತ್ಸವಕ್ಕೆ ಮಿಜಾರು- ಎಡಪದವು ಗಾಣಿಗರ ಯಾನೆ ಸಫಲಿಗರ ಸೇವಾ ಸಂಘದ ವ್ಯಾಪ್ತಿಯ ಸಮಾಜಬಾಂಧವರು ಧನಸಹಾಯ ಮಾಡಿದ್ದಾರೆ.

    ಈ ಸಂಘದ ವ್ಯಾಪ್ತಿಯ ಸಮಾಜದ ಮನೆಯವರಿಂದ 64,377 ರೂಪಾಯಿ ಸಂಗ್ರಹವಾಗಿದ್ದು, ಅದನ್ನು ಸಂಘದ ಅಧ್ಯಕ್ಷ ಭಾಸ್ಕರ್ ಎಸ್. ಎಡಪದವು, ಜೊತೆ ಕಾರ್ಯದರ್ಶಿ ಎಂ. ಪ್ರಸಾದ್ ಕುಮಾರ್ ಹಾಗೂ ಅವರ ಪತ್ನಿ ಪ್ರಮೀಳಾ ಅವರ ಮುಖಾಂತರ ದೇವಸ್ಥಾನಕ್ಕೆ ನೀಡಲಾಯಿತು.

    ಭಾಸ್ಕರ್‌, ಪ್ರಸಾದ್‌, ಪ್ರಮೀಳಾ ಅವರು ಈ ಮೊತ್ತವನ್ನು ಧರ್ಮರಸರ ಕ್ಷೇತ್ರದ ಹೊರೆ ಕಾಣಿಕೆ ಸಮಿತಿ ಅಧ್ಯಕ್ಷ ಎಂ. ರಾಮದಾಸ್ ಸೋಮೇಶ್ವರ, ವ್ಯವಸ್ಥಾಪನಾ ಸಮಿತಿಯ  ಯು. ರಮೇಶ್ ಅವರಿಗೆ ಹಸ್ತಾಂತರಿಸುವ ಮೂಲಕ ಶ್ರೀಕ್ಷೇತ್ರಕ್ಕೆ ನೀಡಿದರು.

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ:ಗಾಣಿಗ ಸಮಾಜದ ಕುರಿತು ಸಂಶೋಧನಾ ಪ್ರಬಂಧ; ಮೇಘನಾಗೆ ಡಾಕ್ಟರೇಟ್‌ ಪದವಿ

    ಸಂಬಂಧಿತ ಸುದ್ದಿ:ಶ್ರೀಜ್ಯೋತಿ ಸಮುದಾಯ ಭವನ ಜೀರ್ಣೋದ್ಧಾರಕ್ಕೆ 10 ಲಕ್ಷ ರೂಪಾಯಿ ಧನಸಹಾಯ

    ಶ್ರೀಜ್ಯೋತಿ ಸಮುದಾಯ ಭವನ ಜೀರ್ಣೋದ್ಧಾರಕ್ಕೆ 10 ಲಕ್ಷ ರೂಪಾಯಿ ಧನಸಹಾಯ

    0

    ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿನ ಶ್ರೀಜ್ಯೋತಿ ಸಮುದಾಯ ಭವನ ಜೀರ್ಣೋದ್ಧಾರಕ್ಕೆ ಹತ್ತು ಲಕ್ಷ ರೂಪಾಯಿ ಧನಸಹಾಯ ದೇಣಿಗೆಯಾಗಿ ಬಂದಿದೆ.

    ಮುಧೋಳ ತಾಲೂಕು ಗಾಣಿಗ ಸಮಾಜ ಸೇಮಾಭಿವೃದ್ಧಿ ಸಂಘದ ವತಿಯಿಂದ ಮುಧೋಳ ಮಹಾನಗರದಲ್ಲಿ ಶ್ರೀಜ್ಯೋತಿ ಸಮುದಾಯ ಭವನದ ಜೀರ್ಣೋದ್ಧಾರ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

    ಈ ಜೀರ್ಣೋದ್ಧಾರ ಕಾರ್ಯಕ್ಕೆ ಮುಧೋಳದ ಕಲ್ಲಪ್ಪ ಶಂಕ್ರಪ್ಪ ಗಡ್ಡಿ ಅವರು ಐದು ಲಕ್ಷ ರೂ. ಹಾಗೂ ಅಶೋಕ ಶಂಕ್ರಪ್ಪ ಗಡ್ಡಿ ಅವರು ಐದು ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಹೀಗೆ ಮುಧೋಳದ ಗಡ್ಡಿ ಪರಿವಾರದ ಈ ಎರಡು ಕುಟುಂಬದವರಿಂದ ಹತ್ತು ಲಕ್ಷ ರೂ. ಧನಸಹಾಯ ಬಂದಿದೆ.

    ಶ್ರೀಜ್ಯೋತಿ ಸಮುದಾಯ ಭವನ ಜೀರ್ಣೋದ್ಧಾರ ಕುರಿತ ಈ ಧನಸಹಾಯವನ್ನು ಈ ಕುಟುಂಬದವರು ಇತ್ತೀಚೆಗೆ ಚೆಕ್‌ ಮೂಲಕ ಹಸ್ತಾಂತರಿಸಿದರು. ಗಡ್ಡಿ ಪರಿವಾರದ ಈ ಎರಡು ಕುಟುಂಬಕ್ಕೆ  ಮುಧೋಳ ತಾಲೂಕಿನ ಗಾಣಿಗ ಸಮಾಜದ ಪರವಾಗಿ ಸಂಘವು ಕೃತಜ್ಞತೆಗಳನ್ನು ಸಲ್ಲಿಸಿದೆ.

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ:ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗರನ್ನೂ ಸೇರಿಸುವಂತೆ ಪ್ರಧಾನಿ ಮೋದಿಗೆ ಮನವಿ

    ಸಂಬಂಧಿತ ಸುದ್ದಿ: ಪಂಚರಾಜ್ಯ ಚುನಾವಣೆ: ಛತ್ತೀಸ್‌ಗಢದಲ್ಲಿ 12 ಗಾಣಿಗ ಅಭ್ಯರ್ಥಿಗಳಿಗೆ ವಿಜಯ; ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಗೆಲುವು

    ʼಮಹಿಳೆಯರ ಆರೋಗ್ಯ: ಸಮಸ್ಯೆ ಮತ್ತು ಪರಿಹಾರʼ ಕುರಿತು ಇದೇ ಶನಿವಾರ ವಿಚಾರಸಂಕಿರಣ

    0

    ಬೆಂಗಳೂರು: ಶ್ರೀಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟೇಬಲ್‌ ಟ್ರಸ್ಟ್‌ ತನ್ನ ಎಸ್‌ಜಿಇಸಿಟಿ ಅಕಾಡೆಮಿ ಮೂಲಕ ತ್ರಿಶೂಲ ಟ್ರಸ್ಟ್‌ ಸಹಯೋಗದಲ್ಲಿ ʼಕೌಶಲಾಭಿವೃದ್ಧಿ ಮೂಲಕ ಮಹಿಳಾ ಸಬಲೀಕರಣʼ ಎಂಬ ವಿಚಾರಸಂಕಿರಣವನ್ನು ಹಮ್ಮಿಕೊಂಡಿದೆ.

    ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ಎಸ್‌ಜಿಇಸಿಟಿ ಕಚೇರಿಯಲ್ಲಿ ಜ.13ರ ಶನಿವಾರ ಬೆಳಗ್ಗೆ 11ಕ್ಕೆ ಈ ವಿಚಾರಸಂಕಿರಣ ನಡೆಯಲಿದೆ. ವ್ಯಕ್ತಿತ್ವ ವಿಕಸನ ತರಬೇತಿದಾರರಾದ ಮಂಗಳಾ ನಾರಾಯಣ್‌ ಈ ವಿಚಾರಸಂಕಿರಣ ಉದ್ಘಾಟಿಸಲಿದ್ದಾರೆ.

    ಎಸ್‌ಜಿಇಸಿಟಿ ಅಕಾಡೆಮಿ ಅಧ್ಯಕ್ಷ  ಆರ್.ನಾಗರಾಜ್‌ ಶೆಟ್ಟಿ ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಮ್ಯಾನೇಜಿಂಗ್‌ ಟ್ರಸ್ಟೀ ಬಿ.ಕೆ.ಬಸವರಾಜ್‌ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

    ʼಕೌಶಲಾಭಿವೃದ್ಧಿ ಮೂಲಕ ಮಹಿಳಾ ಸಬಲೀಕರಣ ಹಾಗೂ ಮಹಿಳೆಯರ ಆರೋಗ್ಯ: ಸಮಸ್ಯೆ ಮತ್ತು ಪರಿಹಾರಗಳುʼ ಎಂಬ ವಿಷಯವಾಗಿ ವಿಚಾರಸಂಕಿರಣ ನಡೆಯಲಿದೆ. ಅಲ್ಲದೆ ʼಕ್ರಿಯೇಟಿವ್‌ ಆರ್ಟ್ಸ್‌ ಮತ್ತು ಪೇಂಟಿಂಗ್‌ ಕ್ಲಾಸ್‌ʼಗೂ ಇದೇ ವೇಳೆ ಚಾಲನೆ ನೀಡಲಾಗುವುದು.

    ಶುಭಾ ರಾಜಶೇಖರ್‌ ಅವರು ಮಹಿಳೆಯರ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರ ಕುರಿತು ವಿಚಾರ ಮಂಡಿಸಲಿದ್ದು, ಮೆನ್‌ಸ್ಟ್ರುವಲ್‌ ಕಪ್‌ ವಿತರಣೆ ಕೂಡ ಮಾಡಲಿದ್ದಾರೆ. ತ್ರಿಶೂಲ ಟ್ರಸ್ಟ್‌ ಅಧ್ಯಕ್ಷ ಬಿ.ಸಿ.ರಾಜಶೇಖರ್‌ ತರಬೇತಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಲಿದ್ದಾರೆ.

    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಸಂಖ್ಯೆ: 63623 63044

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ:ಗಾಣಿಗ ಸಮಾಜದ ಕುರಿತು ಸಂಶೋಧನಾ ಪ್ರಬಂಧ; ಮೇಘನಾಗೆ ಡಾಕ್ಟರೇಟ್‌ ಪದವಿ

    ಸಂಬಂಧಿತ ಸುದ್ದಿ:ಸಾಮಾಜಿಕ ನ್ಯಾಯ ಕುರಿತು ರಾಜಿ ಇಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ

    ರಾಜ್ಯಮಟ್ಟದ ಕುಸ್ತಿ‌ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಪೂಜಾ ಗಾಣಿಗೇರ

    0

    ಬೆಂಗಳೂರು: ಗದಗದಲ್ಲಿ ಅ.15-16ರಂದು ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ನರೇಗಲ್‌ ಪಟ್ಟಣದ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಕುಸ್ತಿಪಟು ಪೂಜಾ ಗಾಣಿಗೇರ ತೃತೀಯ ಸ್ಥಾನ ಗಳಿಸಿದ್ದಾರೆ.

    ಈ ಮೂಲಕ ಇವರು ಊರವರು ಮತ್ತು ಮಹಾವಿದ್ಯಾಲಯದವರು ಹೆಮ್ಮೆಪಡುವಂಥ ಸಾಧನೆ ಮಾಡಿದ್ದು, ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಲಕೆರೆಯ ಕೀರ್ತಿಮುಪ್ಪಿನ ಬಸವಲಿಂಗ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.

    ಆಡಳಿತಾಧಿಕಾರಿ ಗೌಡರ, ಮಹಾವಿದ್ಯಾಲಯದ ಪ್ರಾಚಾರ್ಯ ವೈ.ಸಿ. ಪಾಟೀಲ, ಜಮಖಾನಾ ವಿಭಾಗದ ಮುಖ್ಯಸ್ಥ ಜಿ. ಎಸ್. ಮಠಪತಿ, ಉಪನ್ಯಾಸಕರಾದ ಪಿ.ಎನ್. ಬಳೂಟಗಿ, ಎ. ಎಂ. ನದಾಫ, ಎಫ್.ಎನ್. ಹುಡೇದ, ಪಿ.ವೈ. ಕರಮುಡಿ, ಸುಮಾ ಪಾಟೀಲ, ಲೀಲಾ ಹನಮಣ್ಣನವರ, ಸುಜಾತಾ ಕೊತಬಾಳ ಹಾಗೂ ಸಮಸ್ತ ಸಿಬ್ಬಂದಿವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

    ಸಂಬಂಧಿತ ಸುದ್ದಿ: ಗಾಣಿಗ ಸಮಾಜದ ಕುರಿತು ಸಂಶೋಧನಾ ಪ್ರಬಂಧ; ಮೇಘನಾಗೆ ಡಾಕ್ಟರೇಟ್‌ ಪದವಿ

    ಸಂಬಂಧಿತ ಸುದ್ದಿ: ಸಾಮಾಜಿಕ ನ್ಯಾಯ ಕುರಿತು ರಾಜಿ ಇಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಎಸ್‌ಜಿಇಸಿಟಿ ಅಕಾಡೆಮಿಯಿಂದ ವಿವಿಧ ಕೋರ್ಸ್; ಶುಲ್ಕದಲ್ಲಿ ಶೇ. 50 ರಿಯಾಯಿತಿ

    0

    ಬೆಂಗಳೂರು: ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿರುವ ಶ್ರೀಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟೇಬಲ್‌ ಟ್ರಸ್ಟ್‌ ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ತನ್ನ ಎಸ್‌ಜಿಇಸಿಟಿ ಅಕಾಡೆಮಿ ಮೂಲಕ ವಿವಿಧ ಕೋರ್ಸ್‌ಗಳನ್ನು ಆರಂಭಿಸಿದೆ.

    ಬೇಸಿಕ್‌ ಹಾಗೂ ಅಡ್ವಾನ್ಸ್ಡ್‌ ಕಂಪ್ಯೂಟರ್‌ ಕೋರ್ಸ್‌, ಬೇಸಿಕ್‌ ಬ್ಯೂಟಿಷಿಯನ್‌ ಮತ್ತು ಟೈಲರಿಂಗ್‌ ಕೋರ್ಸ್‌, ಅಡ್ವಾನ್ಸ್ಡ್‌ ಮೇಕಪ್‌ ಕೋರ್ಸ್‌ಗಳನ್ನು ಹಮ್ಮಿಕೊಂಡಿದೆ. ‌

    ವಿಶೇಷವೆಂದರೆ ಟ್ರಸ್ಟ್‌ನಲ್ಲಿ ನೋಂದಾಯಿಸಿಕೊಂಡ ಗಾಣಿಗ ಸಮುದಾಯದ ಅಭ್ಯರ್ಥಿಗಳಿಗೆ ಈ ಕೋರ್ಸ್‌ಗಳ ಶುಲ್ಕದಲ್ಲಿ ಶೇ.50 ರಿಯಾಯಿತಿ ಇರಲಿದೆ. ನೋಂದಣಿಗೆ 500 ರೂ. ಪಾವತಿಸಬೇಕಿದ್ದು, ಅಂಥ ಅಭ್ಯರ್ಥಿಗಳು ಈ ಎಲ್ಲ ಕೋರ್ಸ್‌ಗಳ ರಿಯಾಯಿತಿಗೆ ಒಳಪಡುತ್ತಾರೆ ಎಂದು ನಿವೃತ್ತ ಕೆಎಎಸ್‌ ಅಧಿಕಾರಿ, ಎಸ್‌ಜಿಇಸಿಟಿ ಅಕಾಡೆಮಿ ಅಧ್ಯಕ್ಷ ಕೆ.ನಾಗರಾಜ ಶೆಟ್ಟಿ ತಿಳಿಸಿದ್ದಾರೆ.

    ಜನವರಿ ಒಂದರ ನಂತರ ಕೋರ್ಸ್‌ ಆರಂಭವಾಗಲಿದ್ದು, ಆಸಕ್ತರು ನೋಂದಣಿ ಮತ್ತು ವಿವರಗಳಿಗೆ 7019356168 ಅಥವಾ 9483141411 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.                           

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ:ಪಂಚರಾಜ್ಯ ಚುನಾವಣೆ: ಛತ್ತೀಸ್‌ಗಢದಲ್ಲಿ 12 ಗಾಣಿಗ ಅಭ್ಯರ್ಥಿಗಳಿಗೆ ವಿಜಯ; ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಗೆಲುವು

    ಸಂಬಂಧಿತ ಸುದ್ದಿ: ಗಾಣಿಗ ಸಮಾಜದ ಕುರಿತು ಸಂಶೋಧನಾ ಪ್ರಬಂಧ; ಮೇಘನಾಗೆ ಡಾಕ್ಟರೇಟ್‌ ಪದವಿ

    ಗಾಣಿಗ ಮುಖಂಡರಿಗೆ ವಿಧಾನಪರಿಷತ್‌ ಮಾಜಿ ಸಭಾಪತಿ ವಿ.ಆರ್. ಸುದರ್ಶನ್‌ ಅವರಿಂದ ಸನ್ಮಾನ

    0

    ಬೆಂಗಳೂರು: ಅಖಿಲ ಕರ್ನಾಟಕ ಗಾಣಿಗರ ಸಂಘದ ಸುವರ್ಣ ಮಹೋತ್ಸವ ಸಮಾರಂಭ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದು, ಇದೇ ಸಂದರ್ಭದಲ್ಲಿ ಬೃಹತ್‌ ಗಾಣಿಗ ಸಮಾವೇಶ ಕೂಡ ನಡೆದಿತ್ತು.

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮ ಉದ್ಘಾಟಿಸಿ ವಿವಿಧ ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಿದ್ದರು. ಈ ಸಮಾರಂಭದಲ್ಲಿ ಕರ್ನಾಟಕ ವಿಧಾನಪರಿಷತ್‌ ಮಾಜಿ ಸಭಾಪತಿ, ಗಾಣಿಗ ಸಮುದಾಯದ ನಾಯಕರೂ ಆಗಿರುವ ವಿ.ಆರ್.ಸುದರ್ಶನ್‌ ಕೂಡ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

    ಈ ವೇಳೆ ಮಂಗಳೂರು ತಾಲೂಕು ಗಾಣಿಗ ಸಂಘದ ಅಧ್ಯಕ್ಷ ಕಣ್ಣೂರು ನಾರಾಯಣ ಸಪಲ್ಯ ಅವರನ್ನು ವಿ.ಆರ್.ಸುದರ್ಶನ್ ಸನ್ಮಾನಿಸಿದರು. ಶ್ರೀಪೂರ್ಣಾನಂದಪುರಿ ಸ್ವಾಮೀಜಿ, ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ ಎಂ.ಆರ್. ರಾಜಶೇಖರ್ ಗಾಣಿಗ, ನಿರ್ದೇಶಕರಾದ ಟಿ.ಡಿ. ಪ್ರಕಾಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

    ಸಂಬಂಧಿತ ಸುದ್ದಿ: ಸಾಮಾಜಿಕ ನ್ಯಾಯ ಕುರಿತು ರಾಜಿ ಇಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ

    ಸಂಬಂಧಿತ ಸುದ್ದಿ: ಪಂಚರಾಜ್ಯ ಚುನಾವಣೆ: ಛತ್ತೀಸ್‌ಗಢದಲ್ಲಿ 12 ಗಾಣಿಗ ಅಭ್ಯರ್ಥಿಗಳಿಗೆ ವಿಜಯ; ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಗೆಲುವು

    ಸಂಬಂಧಿತ ಸುದ್ದಿ: ಗಾಣಿಗ ಸಮಾಜದ ಕುರಿತು ಸಂಶೋಧನಾ ಪ್ರಬಂಧ; ಮೇಘನಾಗೆ ಡಾಕ್ಟರೇಟ್‌ ಪದವಿ

    ಸಫಲ ಸೌಹಾರ್ದ ಸಹಕಾರಿ ಸಂಘ ನಿಯಮಿತಕ್ಕೆ ಸಹಕಾರಿ ಕ್ಷೇತ್ರದ ಗಣ್ಯರ ಭೇಟಿ

    0

    ಬೆಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಗುರುಪುರದ ಕೈಕಂಬದಲ್ಲಿರುವ ಸಫಲ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಪ್ರಧಾನ ಕಚೇರಿಗೆ ರಾಜಧಾನಿ ಬೆಂಗಳೂರಿನಿಂದ ಸಹಕಾರಿ ಕ್ಷೇತ್ರದ ಗಣ್ಯರು ಭೇಟಿ ನೀಡಿದ್ದಾರೆ.

    ಬೆಂಗಳೂರಿನ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ. ನಂಜನ ಗೌಡ, ನಿರ್ದೇಶಕರಾದ ಶರಣ ಗೌಡ ಜಿ. ಪಾಟೀಲ, ಎಸ್‌.ಕೆ. ಮಂಜುನಾಥ್, ಮೈಸೂರು ಪ್ರಾಂತೀಯ ವ್ಯವಸ್ಥಾಪಕ ಶಿವಕುಮಾರ್ ಅವರು ಭೇಟಿ ನೀಡಿದ್ದಾರೆ. ಈ ವೇಳೆ ಅವರು ಸಫಲ ಸೌಹಾರ್ದ ಸಹಕಾರಿ ಸಂಘದ ಕಾರ್ಯವೈಖರಿ ಪರಿಶೀಲಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಸಫಲ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಅಡ್ಯಾರ್, ನಿರ್ದೇಶಕರಾದ ಗೋಪಾಲಕೃಷ್ಣ, ಮಹಾಬಲ ಅಡ್ಯಾರ್, ಮೋನಪ್ಪ ಪೊಳಲಿ, ಸೂರಜ್ ಮೂಡಬಿದ್ರೆ, ಎಚ್.ಮೋಹಿನಿ, ಗೌರವ ಸಲಹೆಗಾರ ಹರಿದಾಸ್, ಪ್ರಧಾನ ವ್ಯವಸ್ಥಾಪಕ ಪ್ರಮೋದ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

    ಸಂಬಂಧಿತ ಸುದ್ದಿ: ಪಂಚರಾಜ್ಯ ಚುನಾವಣೆ: ಛತ್ತೀಸ್‌ಗಢದಲ್ಲಿ 12 ಗಾಣಿಗ ಅಭ್ಯರ್ಥಿಗಳಿಗೆ ವಿಜಯ; ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಗೆಲುವು

    ಸಂಬಂಧಿತ ಸುದ್ದಿ: ಗಾಣಿಗ ಸಮಾಜದ ಕುರಿತು ಸಂಶೋಧನಾ ಪ್ರಬಂಧ; ಮೇಘನಾಗೆ ಡಾಕ್ಟರೇಟ್‌ ಪದವಿ

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಗಾಣಿಗ ಹಿತೈಷಿಗಳ ಬಳಗದ ಕ್ಯಾಲೆಂಡರ್‌ ಬಿಡುಗಡೆ

    0

    ಬೆಂಗಳೂರು: ಹೊಸ ವರ್ಷಕ್ಕೆ ಹೊಸ ಕ್ಯಾಲೆಂಡರ್‌ ಭರಾಟೆ ಈಗಾಗಲೇ ಆರಂಭಗೊಂಡಿದ್ದು, ಕೆಲವು ಸಂಘ-ಸಂಸ್ಥೆಗಳು ತಮ್ಮದೇ ಆದ ಕ್ಯಾಲೆಂಡರ್‌ಗಳನ್ನು ಮುದ್ರಿಸಿ ತಮ್ಮ ಸದಸ್ಯರು, ಉದ್ಯೋಗಿಗಳು ಮತ್ತು ಗ್ರಾಹಕರಿಗೆ ನೀಡುತ್ತಿವೆ.

    ಅದೇ ರೀತಿ ಮೈಸೂರಿನ ಗಾಣಿಗ ಹಿತೈಷಿಗಳ ಬಳಗ ಗಾಣಿಗ ಸಮುದಾಯದವರಿಗೆಂದೇ 2024ನೇ ವರ್ಷದ ವಿಶೇಷವಾದ ಕ್ಯಾಲೆಂಡರ್‌ ತಯಾರಿಸಿದೆ. ಇದನ್ನು ಹನುಮದ್‌ ವ್ರತವಾದ ಡಿ. 24ರಂದು ಮೈಸೂರಿನಲ್ಲಿ ಬಿಡುಗಡೆ ಮಾಡಲಾಗಿದ್ದು, ಬಳಗದ ಸದಸ್ಯರು ಹಾಜರಿದ್ದರು.

    ಸಂಬಂಧಿತ ಸುದ್ದಿ: ಪಂಚರಾಜ್ಯ ಚುನಾವಣೆ: ಛತ್ತೀಸ್‌ಗಢದಲ್ಲಿ 12 ಗಾಣಿಗ ಅಭ್ಯರ್ಥಿಗಳಿಗೆ ವಿಜಯ; ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಗೆಲುವು

    ಸಂಬಂಧಿತ ಸುದ್ದಿ: ಗಾಣಿಗ ಸಮಾಜದ ಕುರಿತು ಸಂಶೋಧನಾ ಪ್ರಬಂಧ; ಮೇಘನಾಗೆ ಡಾಕ್ಟರೇಟ್‌ ಪದವಿ

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ವಾಣಿಯ ಗಾಣಿಗ ಸಮುದಾಯ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

    0

    ಬೆಂಗಳೂರು: ದಕ್ಷಿಣಕನ್ನಡ ಜಿಲ್ಲಾ ವಾಣಿಯ ಗಾಣಿಗ ಸಮುದಾಯ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.

    ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಈಶ ವಿದ್ಯಾಲಯದ ಸಭಾಂಗಣದಲ್ಲಿ ಡಿ.17ರಂದು ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.

    ಸಂಘದ ಗೌರವಾಧ್ಯಕ್ಷರಾಗಿ ಶಂಕರ್ ಸುಳ್ಯ, ಅಧ್ಯಕ್ಷರಾಗಿ ಕೆ. ರಾಮ ಮುಗ್ರೋಡಿ, ಉಪಾಧ್ಯಕ್ಷರಾಗಿ ಶಾರದಾಕೃಷ್ಣ ಮತ್ತು ಉದಯ ದಂಬೆ ಆಯ್ಕೆಯಾದರು.

    ಪ್ರಧಾನ ಕಾರ್ಯದರ್ಶಿಯಾಗಿ ಮಹಾಲಿಂಗ ಬಾಜರ್ತೊಟ್ಟಿ, ಜೊತೆ ಕಾರ್ಯದರ್ಶಿಯಾಗಿ ಚಂದ್ರಶೇಖರ್ ಪನ್ನೆ, ಸಂಘಟನಾ ಕಾರ್ಯದರ್ಶಿಯಾಗಿ ದಿನಕರ್ ಅಳಿಕೆ ಮತ್ತು ಕೇಶವ ಕೊರಿಗದ್ದೆ, ಕೋಶಾಧಿಕಾರಿಯಾಗಿ ಸುಬ್ಬಪ್ಪ ಪಟ್ಟೆ, ಕಾನೂನು ಸಲಹೆಗಾರರಾಗಿ ಚಂದ್ರಶೇಖರ ಉದ್ದಂತಡ್ಕ ಅವರನ್ನು ಆಯ್ಕೆ ಮಾಡಲಾಯಿತು.

    ಸಂಬಂಧಿತ ಸುದ್ದಿ: ಪಂಚರಾಜ್ಯ ಚುನಾವಣೆ: ಛತ್ತೀಸ್‌ಗಢದಲ್ಲಿ 12 ಗಾಣಿಗ ಅಭ್ಯರ್ಥಿಗಳಿಗೆ ವಿಜಯ; ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಗೆಲುವು

    ಸಂಬಂಧಿತ ಸುದ್ದಿ: ಗಾಣಿಗ ಸಮಾಜದ ಕುರಿತು ಸಂಶೋಧನಾ ಪ್ರಬಂಧ; ಮೇಘನಾಗೆ ಡಾಕ್ಟರೇಟ್‌ ಪದವಿ

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ರೈಲ್ವೆ ಸಲಹಾ ಸಮಿತಿ ಸದಸ್ಯೆ ಆಗಿ ಭಾಗ್ಯ ನೇಮಕ

    0

    ಬೆಂಗಳೂರು: ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಅಶೋಕಪುರಂ ರೈಲ್ವೆ ಸ್ಟೇಷನ್‌ನ ರೈಲ್ವೆ ಸಲಹಾ ಸಮಿತಿ ಸದಸ್ಯೆ ಆಗಿ ಸಿ. ಭಾಗ್ಯ ನೇಮಕಗೊಂಡಿದ್ದಾರೆ.  ಇವರನ್ನು ಅಶೋಕಪುರಂ ರೈಲ್ವೆ ಸಲಹಾ ಮಂಡಳಿಯ ಸದಸ್ಯರಾಗಿ ನಾಮನಿರ್ದೇಶನ ಮಾಡಿರುವುದಾಗಿ ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಆದೇಶ ಹೊರಡಿಸಿದ್ದಾರೆ.

    ಮೈಸೂರಿನ ಗಾಣಿಗ ಸಮುದಾಯದ ಮಹಿಳಾ ಮುಖಂಡರಾಗಿರುವ ಭಾಗ್ಯ, ಈ ಹಿಂದೆ ಸಮಗ್ರ ಕರ್ನಾಟಕ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಆಗಿ ಕಾರ್ಯನಿರ್ವಹಿಸಿದ್ದರು.

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ:ಗಾಣಿಗ ಸಮಾಜದ ಕುರಿತು ಸಂಶೋಧನಾ ಪ್ರಬಂಧ; ಮೇಘನಾಗೆ ಡಾಕ್ಟರೇಟ್‌ ಪದವಿ

    ಸಂಬಂಧಿತ ಸುದ್ದಿ: ಛತ್ತೀಸ್‌ಗಢ ಉಪ ಮುಖ್ಯಮಂತ್ರಿ ಆಗಿ ಅರುಣ್‌ ಸಾಹು ಆಯ್ಕೆ

    error: Content is protected !!